ಸಿಬಿಎಸ್ ಇ ಪ್ರಶ್ನೆ ಪತ್ರಿಕೆಯಲ್ಲಿ ದೋಷ- ವಿದ್ಯಾರ್ಥಿಗಳಿಗೆ ಸಿಕ್ಕಿತು ಗ್ರೇಸ್ ಮಾರ್ಕ್ಸ್

20 Apr 2018 10:40 AM | General
405 Report

ಹತ್ತನೇ ತರಗತಿಯ ಸಿಬಿಎಸ್ ಇ ಪಠ್ಯದ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಣ ದೋಷವಾದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಎರಡು ಹೆಚ್ಚುವರಿ ಅಂಕ ನೀಡಲು ಸಿಬಿಎಸ್ ಇ ಈಗಾಗಲೇ ನಿರ್ಧರಿಸಿದೆ.

ಮಾರ್ಚ್ 12 ರಂದು ನಡೆದ ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆಯೊಂದರಲ್ಲಿ ಮುದ್ರಣ ದೋಷವಾಗಿತ್ತು. ಇದರಿಂದ ವಿದ್ಯಾರ್ಥಿಗಳು ಪರಿತಪಿಸುವಂತಾಗಿತ್ತು. ಈ ಕುರಿತಾಗಿ ಕೆಲವು ಶಿಕ್ಷಕರು ಮತ್ತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಿಬಿಎಸ್ ಇ ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳಿಗೂ ಎರಡು ಹೆಚ್ಚುವರಿ ಅಂಕ ನೀಡಲು ಮುಂದಾಗಿದೆ. 10 ಮತ್ತು 12 ನೇ ತರಗತಿಯ ಸಿಬಿಎಸ್ ಇ ಪಠ್ಯದ ಏಪ್ರಿಲ್ 25 ರಂದು ಕೊನೆಗೊಳ್ಳಲಿವೆ.

 

Edited By

Manjula M

Reported By

Manjula M

Comments