ಟ್ಯಾಕ್ಸಿ, ಆಟೋ ಚಾಲಕರಿಗೆ ಪ್ರತ್ಯೇಕ ವಾಣಿಜ್ಯ ಲೈಸನ್ಸ್ ಅಗತ್ಯವಿಲ್ಲ

19 Apr 2018 5:23 PM | General
601 Report

ಟ್ಯಾಕ್ಸಿ, ತ್ರಿಚಕ್ರ ವಾಹನಗಳು, ಇ- ರಿಕ್ಷಾಗಳು ಹಾಗೂ ದ್ವಿಚಕ್ರ ವಾಹನ ಚಲಾಯಿಸಲು ಇನ್ನು ಮುಂದೆ ಯಾವುದೆ ವಿಶೇಷ ವಾಣಿಜ್ಯ ಲೈಸನ್ಸ್ ಅಗತ್ಯವಿರುವುದಿಲ್ಲ. ಈ ವಿಭಾಗದಲ್ಲಿ ಕೆಲಸ ಮಾಡುವ  ವಾಣಿಜ್ಯ ಚಾಲಕರಿಗೆ ತಮ್ಮ ವೈಯಕ್ತಿಕ ಚಾಲನಾ ಪರವಾನಗಿಯನ್ನೇ ಉಪಯೋಗಿಸಲು ಸರ್ಕಾರ ಈಗಾಗಲೆ ಅನುಮತಿಯನ್ನು ನೀಡಿದೆ.

ಈ ನಿಟ್ಟಿನಲ್ಲಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಅಧಿಸೂಚನೆಯನ್ನ ಹೊರಡಿಸಿದೆ. ಆದರೆ ಟ್ರಕ್ ಗಳು ಹಾಗೂ ಬಸ್ಸುಗಳನ್ನು ಚಲಾಯಿಸಲು ಕಮರ್ಷಿಯಲ್ ವಾಹನಾ ಪರವಾನಗಿ ಅಗತ್ಯವಿದ್ದು ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ನಿಯಮವನ್ನು ಪಾಲಿಸುವಂತೆ ರಾಜ್ಯ ಸರಕಾರಗಳಿಗೆ ಸುತ್ತೋಲೆಯನ್ನು ಈಗಾಗಲೇ ಹೊರಡಿಸಲಾಗಿದೆ. ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದೇ ಈ ಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments