ಕನ್ನಡಕ ಹಾಕಿಕೊಳ್ತಿರಾ? ಹಾಗಾದ್ರೆ ನಿಮ್ಮ ಮೇಕಪ್ ಹೀಗಿರಲಿ

19 Apr 2018 2:51 PM | General
529 Report

ಹೆಣ್ಣು ಮಕ್ಕಳು ಅಲಂಕಾರ ಪ್ರಿಯರು ಅಂತಾ ಎಲ್ಲರಿಗೂ ಗೊತ್ತು. ಎಲ್ಲಾ ಹೆಣ್ಣು ಮಕ್ಕಳು ಒಂದೆ ರೀತಿಯ ಮೇಕಪ್ ಅನ್ನು ಇಷ್ಟ ಪಡುವುದಿಲ್ಲ… ಕೆಲವರಿಗೆ ಸಿಂಪಲ್ ಮೇಕಪ್ಇನ್ನೂ ಕೆಲವರಿಗೆ ಹೆವಿ ಮೇಕಪ್ ಹೀಗೆ ಇಷ್ಟವಾಗುತ್ತೆ.. ಆದ್ರೆ ಇತ್ತಿಚಿನ ಟ್ರೆಂಡ್ ಏನಪ್ಪಾ ಅಂದ್ರೆ ಕನ್ನಡಕ.ಕನ್ನಡಕ ಹಾಕಿಕೊಳ್ಳೋರು ಯಾವ ರೀತಿ ಮೇಕಪ್ ಮಾಡಿಕೊಳ್ಳೋದು ಅಂತಾ ಯೋಚನೆ ಮಾಡ್ತಿದ್ದೀರಾ. ಕನ್ನಡಕ ಹಾಕುವ ಹುಡುಗಿಯರಿಗೆ ಒಂದಿಷ್ಟು ಟಿಪ್ಸ್ ಕೊಡ್ತೀವಿ ಕೇಳಿ.ಈ ಮೇಕಪ್ ಟಿಪ್ಸ್ ಕನ್ನಡಕ ಹಾಕುವ ಹುಡುಗಿಯರಿಗೆ ಮಾತ್ರ! ಸರಿಯಾದ ಕ್ರಮದಲ್ಲಿ ಮೇಕಪ್ ಮಾಡಿಕೊಳ್ಳಬೇಕು.ಮತ್ತು ಮುಖಕ್ಕೆ ಒಪ್ಪುವ ಮೇಕಪ್ ಅನ್ನು ಮಾಡಿಕೊಳ್ಳಬೇಕು. ಕನ್ನಡಕ ಧರಿಸುವ ಮೂಲಕ ಕನ್ನಡಕವಿಲ್ಲದಿದ್ದಾಗ ಇರುವ ಅಂದಕ್ಕಿಂತಲೂ ಹೆಚ್ಚು ಸುಂದರವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹಲವು ಯುವತಿಯರಿಗೆ ಕನ್ನಡಕ ಬಂದಿದ್ದು ಮೇಕಪ್ ಮಾಡಿಕೊಳ್ಳುವುದಕ್ಕೆ ಅಡ್ಡಿ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಈ ಆತಂಕ ನಿರಾಧಾರವಾಗಿದ್ದು ಕನ್ನಡಕ ಧರಿಸಿಯು ಉತ್ತಮ ಮೇಕಪ್ ಹೊಂದಬಹುದಾದಂತಹ ಕೆಲವು ಸುಲಭ ವಿಧಾನಗಳಿವೆ. ಮಹಿಳೆಗೆ ಮೇಕಪ್ ಸಾಧನಗಳ ಮೇಲೆ ಏಕೆ ಅಷ್ಟೊಂದು ಪ್ರೀತಿ… ಈ ವಿಧಾನಗಳನ್ನ ಸರಿಯಾಗಿ ಅನುಸರಿಸುವ ಮೂಲಕ ಇವರು ಲಕ್ಷಣವಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲ. ಯಾವುದೇ ತೊಡಕಿಲ್ಲದೆ ಇತರರ ಎದುರು ಸಮಾನಸ್ಕಂದರಾಗಿ ನಿಲ್ಲಬಹುದು. ಅತಿಯಾದ ಮೇಕಪ್ ಕೂಡ ನಿಮ್ಮ ತ್ವಚೆಗೆ ಶತ್ರುವಾಗಬಹುದು…

ಕಂಸೀಲರ್:-ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪುಭಾಗಕ್ಕೆ ಕಂಸೀಲರ್‍ನ ಅವಶ್ಯಕತೆ ಹೆಚ್ಚು ಇರುತ್ತದೆ..ಯಾಕಂದ್ರೆ ಕಂಸೀಲರ್ ಪೌಡರ್ ಅನ್ನು ಹಚ್ಚುವುದರಿಂದ ನಿಮ್ಮ ಕಣ್ಣ ಕೆಳಗಿರುವ ಕಪ್ಪು ವರ್ತುಲವನ್ನ ಮರೆ ಮಾಡಬಹುದು..

ಮಸ್ಕರ:-ಕಣ್ಣು ರೆಪ್ಪೆಗಳು ತೆಳುವಾಗಿದ್ದರೆ ಕನ್ನಡಕ ಧರಿಸಿದ ಹುಡುಗಿಗೆ ಮಸ್ಕರ ಒಪ್ಪುವುದಿಲ್ಲ.. ಆದ್ದರಿಂದ ನಿಮ್ಮ ಕಣ್ಣು ರೆಪ್ಪೆಗಳ ಕೂದಲುಗಳ ಮಸ್ಕರವನ್ನು ಸಾಧ್ಯವಾದಷ್ಟು ಗಾಢ ಹಾಗೂ ದಪ್ಪನಾಗಿಸಿದರೆ ಕನ್ನಡಕದ ಮೂಲಕ ಇವು ಕಣ್ಣು ಮಿಟುಕಿಸಿದಾಗ ಹೊಳೆದು ನಿಮ್ಮ ಚೆಲುವನ್ನು ಹೆಚ್ಚಿಸುತ್ತದೆ.

ಕಣ್ಣುಗಳಿಗೆ ಗಾಢ ಮೇಕಪ್ ಸಲ್ಲದು:- ಸಾಮಾನ್ಯ ಮೇಕಪ್ ಇರಲಿ ಅಥವಾ ಕಡಿಮೆಯೆ ಇರಲಿ.. ಯಾಕಂದ್ರೆ ಗಾಢವಾದ ಮೇಕಪ್ ಕಣ್ಣುಗಳ ಭಾಗವನ್ನು ಇನ್ನಷ್ಟು ಗಾಢವಾಗಿಸುತ್ತವೆ. ಆದ್ದರಿಂದ ಸಹಜವರ್ಣ ಅಥವಾ ವರ್ಣರಹಿತ ಮೇಕಪ್ ಮಾತ್ರವೇ ಅನುಸರಿಸಿ

ಲಿಪ್‍ಸ್ಟಿಕ್:-ತುಟಿಗಳ ಬಣ್ಣ ಗಾಢವಾಗಿರಲಿ ತುಟಿಗಳಿಗೆ ಉಪಯೋಗಿಸುವ ಲಿಪ್‍ಸ್ಟಿಕ್ ಬಣ್ಣ ಗಾಢವಾಗಿದ್ದು ನಿಮ್ಮ ಕನ್ನಡಕದ ಚೌಕಟ್ಟಿನ ಬಣ್ಣಕ್ಕೆ ಹೊಂದುವಂತಿರಲಿ. ಕಣ್ಣುಗಳ ಮೇಕಪ್ ತೆಳುವಾಗಿದ್ದು ತುಟಿಗಳಿಗೆ ಪ್ರಖರ ಕೆಂಪು ಅಥವಾ ಗಾಡ ಗುಲಾಬಿ ಬಣ್ಣವನ್ನು ಬಳಸುವ ಮೂಲಕ ಚೆಲುವನ್ನ ಹೆಚ್ಚಿಸುತ್ತದೆ.

ಸೆಟ್ಟಿಂಗ್ ಪೌಡರ್:-ಸೆಟ್ಟಿಂಗ್ ಪೌಡರ್ ನಿಮ್ಮ ಮುಖದ ಎಲ್ಲಾ ಭಾಗಗಳ ಮೇಕಪ್‍ಅನ್ನು ಕಡೆಯದಾಗಿ ಒಂದೆ ಬಣ್ಣದ ಸೆಟ್ಟಿಂಗ್ ಪೌಡರ್‍ನಿಂದ ಪೂರ್ಣಗೊಳಿಸುವುದನ್ನು ಮರೆಯದಿರಿ. ಇದರಿಂದ ನೀವು ಕನ್ನಡಕ ತೆಗೆದಿಡುವ ಸಮಯದಲ್ಲಿ ಮೇಕಪ್‍ನ ಯಾವುದೆ ತುಣುಕು ಕನ್ನಡಕದ ಮೇಲೆ ಧೂಳಿನಂತೆ ಅಂಟಿಕೊಳ್ಳುವುದನ್ನು ತಡೆಯುತ್ತದೆ.

ಕಾಜಲ್:-ಕಣ್ಣಂಚಿನಲ್ಲಿ ಕಮಾನು ಮೂಡಿಸಿ ಕಣ್ಣುಗಳ ಅಂಚುಗಳಲ್ಲಿ ನಿಮ್ಮ ಕಾಜಲ್ ಕಡ್ಡಿಯನ್ನು ಬಳಸಿ ಸುಂದರವಾದ, ಆದರೆ ಚಿಕ್ಕ ಚೊಕ್ಕದಾದ ಕಮಾನನ್ನ ಮೂಡಿಸಿ. ಇದು ಕನ್ನಡಕ ಧರಿಸಿದ ಯುವತಿಯ ಚೆಲುವನ್ನ ಇನ್ನಷ್ಟು ಹೆಚ್ಚಿಸುತ್ತದೆ. ಇದರೊಂದಿಗೆ ಪ್ರಖರ ಗುಲಾಬಿ ಬಣ್ಣದ ಲಿಪ್ ಸ್ಟಿಕ್ ಹಚ್ಚಿಕೊಂಡರೆ ಸಾಕು..ನಿಮ್ಮ ಸೌಂದರ್ಯ ಯಾವುದೆ ವೃತ್ತಿಪರ ಸೌಂದರ್ಯ ಸೇವೆಗಿಂತಲೂ ಮಿಗಿಲಾಗಿರುತ್ತದೆ.

ಇನ್ನು ಮುಂದೆ ಕನ್ನಡಕ ಹಾಕಿಕೊಳ್ಳುವ ಹುಡುಗಿಯರು ಮೇಕಪ್ ಮಾಡಿಕೊಳ್ಳುವಾಗ ಸ್ವಲ್ಪ ನಿಧಾನ ಆದ್ರೂ ಪರವಾಗಿಲ್ಲ…ಎಚ್ಚರದಿಂದ ಮೇಕಪ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನು ಮುಂದೆ ಕನ್ನಡಕ ಹಾಕಿಕೊಂಡರೆ ಹೇಗೆ ಮೇಕಪ್ ಮಾಡಿಕೊಳ್ಳೋದು ಅನ್ನೋ ಟೆನ್ಷನ್‍ನ ಪಕ್ಕಕ್ಕಿಟ್ಟು ಕೂಲ್ ಆಗಿರಿ..ಇತ್ತಿಚಿಗೆ ಕನ್ನಡಕವೇ ಒಂಥರಾ ಫ್ಯಾಷನ್ ಅದರ ಜೊತೆಗೆ ಮೇಕಪ್ ಇದ್ದರೆ ಕನ್ನಡಕ ಧರಿಸುವ ಹೆಣ್ಣಿನ ಸೌಂದರ್ಯ ಹೆಚ್ಚಾಗುತ್ತದೆ.

 

 

Edited By

Manjula M

Reported By

Manjula M

Comments