ಕರಬೂಜ ಹಣ್ಣಿನಿಂದ ಇಷ್ಟೆಲ್ಲಾ ಪ್ರಯೋಜನ ಇದೆಯಾ?

19 Apr 2018 10:52 AM | General
413 Report

ಬೇಸಿಗೆ ಬಂತೆಂದರೆ ಸಾಕು ಬಾಯಾರಿಕೆಯಾಗುವುದು ಒಂಥರಾ ಸುಸ್ತು ಆಗುವುದು ಕಾಮನ್. ಆ ಸಮಯದಲ್ಲಿ ನಾವು ಹಣ್ಣಿನ ಜ್ಯೂಸ್ ಅನ್ನು ಕುಡಿಯಲು ಇಷ್ಟ ಪಡುತ್ತೇವೆ. ಯಾವುದೋ ಹಣ್ಣಿನ ಜ್ಯೂಸ್ ಅನ್ನು ಕುಡಿಯುವ ಬದಲು ನಮ್ಮ ದೇಹಕ್ಕೆ ಆರೋಗ್ಯಕರ ಎನಿಸುವ ಜ್ಯೂಸ್ ಅನ್ನು ಕುಡಿದರೆ ಉತ್ತಮ. ಅಂತಹ ಹಣ್ಣುಗಳಲ್ಲಿ ಕರಬೂಜ ಕೂಡ ಒಂದು.

ಈ ಹಣ್ಣು ಬೇಸಿಗೆಯ ಹಣ್ಣಾಗಿದ್ದು ಇತರ ಕರಬೂಜ ಹಣ್ಣುಗಳಂತೆಯೇ ಸಿಹಿಯಾದ ಮತ್ತು ಹೆಚ್ಚು ನೀರಿನಂಶವನ್ನು ಹೊಂದಿರುತ್ತದೆ.. ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ಈ ಹಣ್ಣಿನಲ್ಲಿ ಕರಗುವ ನಾರು, ಬೀಟಾ ಕ್ಯಾರೋಟೀನ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಇತರ ಪ್ರಮುಖ ಪೋಷಕಾಂಶಗಳಿವೆ. ಈ ಕರಬೂಜ ಹಣ್ಣು ರುಚಿಕರ ಮಾತ್ರವಲ್ಲ,

 ಈ ಹಣ್ಣಿನಿಂದ ನಾವು ಪಡೆಯುವ ಪ್ರಯೋಜನಗಳು ಈ ಕೆಳಗಿವೆ.

  1. ಮಧುಮೇಹಿಗಳಿಗೆ ಈ ಹಣ್ಣು ಸೂಕ್ತ.
  2. ತೂಕ ಇಳಿಸಲು ನೆರವಾಗುತ್ತದೆ.
  3. ಕಿಡ್ನಿ ಸಮಸ್ಯೆಯನ್ನು ನಿವಾರಿಸುತ್ತದೆ.
  4. ಜೀರ್ಣಶಕ್ತಿಗೆ ನೆರವಾಗುತ್ತದೆ.
  5. ಹೃದಯ ಸಂಬಂಧಿ ಕಾಯಿಲೆಗೆ ನೆರವಾಗುತ್ತದೆ.
  6. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  7. ಮಲಬದ್ದತೆಯನ್ನು ನಿವಾರಿಸುತ್ತದೆ.
  8. ಗರ್ಭಿಣಿಯರಿಗೆ ಆರೋಗ್ಯದ ವಿಷಯದಲ್ಲಿ ಸಹಾಯ ಮಾಡುತ್ತದೆ.

 

Edited By

Manjula M

Reported By

Manjula M

Comments