ಪೋಸ್ಟ್ ಆಪೀಸ್ ಗ್ರಾಹಕರಿಗೊಂದು ಸಿಹಿ ಸುದ್ದಿ

19 Apr 2018 9:41 AM | General
628 Report

ಭಾರತೀಯ ಅಂಚೆ ಇಲಾಖೆ ಈಗಾಗಲೇ ಹಲವಾರು ಸೇವೆಗಳ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಇದರ ಜೊತೆಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಕೂಡ ಆರಂಭಿಸಲಾಗುತ್ತಿದೆ.

ಪೋಸ್ಟ್ ಆಫೀಸ್ ಗಳನ್ನು ಪೇಮೆಂಟ್ ಬ್ಯಾಂಕ್ ಗಳಿಗೆ ಜೋಡಿಸಲಾಗಿದ್ದು  ಪ್ರಸ್ತುತ 2 ಪೇಮೆಂಟ್ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಕೇಂದ್ರಗಳಲ್ಲಿ 650 ಪೇಮೆಂಟ್ ಬ್ಯಾಂಕ್ಗಳು ಆರಂಭವಾಗಲಿವೆ. ಇವುಗಳ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿನ ಪೋಸ್ಟ್ ಆಫೀಸ್ ಸಂಪರ್ಕ ಕಲ್ಪಿಸಲಾಗುವುದು. ಈ ಪ್ರಕ್ರಿಯೆ ಪೂರ್ಣವಾದ ಬಳಿಕ 1.5 ಲಕ್ಷ ಹೊಸ ಬ್ಯಾಂಕ್ ಅಸ್ತಿತ್ವಕ್ಕೆ ಬಂದಂತೆ ಆಗುತ್ತದೆ ಎಂದು ದೂರ ಸಂಪರ್ಕ ಖಾತೆ ಸಚಿವರಾದ ಮನೋಜ್ ಸಿನ್ಹಾ ಈ ಕುರಿತು ಮಾಹಿತಿ ನೀಡಿದ್ದಾರೆ.

Edited By

Manjula M

Reported By

Manjula M

Comments