ನಿಮ್ಮ ಬಳಿ ವೆಹಿಕಲ್ ಇದಿಯಾ? ಹಾಗಾದ್ರೆ ಇದನ್ನೊಮ್ಮೆ ಓದಿ

17 Apr 2018 10:06 AM | General
462 Report

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಛಾಗಿವೆ. ಎಲ್ಲಿ ನೋಡಿದರೂ ಕೂಡ ಬರಿ ಹೊಗೆ. ಅಷ್ಟೆ ಅಲ್ಲದೆ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿ ಅನೇಕ ರೀತಿಯ ಕೃತ್ಯಗಳನ್ನು ಎಸಗುತ್ತಿರುವವರ ಸಂಖ್ಯೆ ಅತಿಯಾಗಿದೆ. ಅಂತವರನ್ನು ಮಟ್ಟ ಹಾಕುವ ಸಲುವಾಗಿ ಕೇಂದ್ರ ಸಾರಿಗೆ ಸಚಿವಾಲಯ ಕರಡು ಅಧಿಸೂಚನೆಯೊಂದನ್ನು ಜಾರಿಗೆ ತಂದಿದೆ.

ಅದರ ಪ್ರಕಾರ 2019 ಜನವರಿ 1 ರಿಂದ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ಉತ್ಪಾದಕರೇ ಎಚ್‌ಎಸ್ ಆರ್ ಪಿ ಅಳವಡಿಸುವುದು ಕಡ್ಡಾಯ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಕರಡು ಅಧಿಸೂಚನೆಯನ್ನು ಈಗಾಗಲೇ  ಪ್ರಕಟಿಸಿದ್ದು 2019 ಜ.1 ಮತ್ತು ನಂತರದಲ್ಲಿ ಉತ್ಪಾದನೆಯಾಗುವ ಎಲ್ಲ ರೀತಿಯ ವಾಹನಗಳಿಗೆ ಸೆಕ್ಯುರಿಟಿ ಲೈಸೆನ್ಸ್ ಪ್ಲೇಟ್ ಗಳನ್ನು ವಾಹನ ಉತ್ಪಾದಕರೇ ನೀಡಬೇಕು. ವಾಹನ ಉತ್ಪಾದಕರ ಡೀಲರ್ ಗಳು ಮಾರಾಟದ ಸಂದರ್ಭದಲ್ಲಿ ಪ್ಲೇಟ್ ಗಳಲ್ಲಿ ನೋಂದಣಿ ಸಂಖ್ಯೆ ನಮೂದಿಸಿ ವಾಹನಗಳಿಗೆ ಅಳವಡಿಸಬೇಕು.  ಇದೇ ಸಂದರ್ಭದಲ್ಲಿ ಹಳೆ ಪ್ಲೇಟ್ ಬದಲಾವಣೆಯನ್ನು ಕಡ್ಡಾಯಗೊಳಿಸಲಾಗಿದೆ.. ಪ್ರಸ್ತುತವಾಗಿ ಈ ಯೋಜನೆ ಅನುಷ್ಠಾನಕ್ಕೆ ಇಲಾಖೆಯು ಅಂತಿಮ ಸಿದ್ಧತೆ ನಡೆಸಿರುವ ಸಂದರ್ಭದಲ್ಲೇ ಕೇಂದ್ರ ಹೊಸ ಕರಡು ನೀತಿಯನ್ನು ಕೂಡ ಪ್ರಕಟಿಸಿದೆ. ಹಳೇ ವಾಹನಗಳ ರಿಜಿಸ್ಟ್ರೇಷನ್ ಪ್ಲೇಟ್ ಬದಲಾವಣೆ ಅಧಿಕಾರ ಆಯಾ ರಾಜ್ಯ ಸಾರಿಗೆ ಇಲಾಖೆಗೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

Edited By

Manjula M

Reported By

Manjula M

Comments