ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದೀರಾ..?ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್

17 Apr 2018 9:56 AM | General
457 Report

ದೇಶದ ಇತರೆ ನಗರಗಳಿಗೆ ಹೋಲಿಸಿದಾಗ ಬೆಂಗಳೂರಿನಲ್ಲಿ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ವೃತ್ತಿನಿರತರಿಗೆ ಗರಿಷ್ಠ ವೇತನ ಸಿಗುತ್ತಿದೆ ಎಂದು ರ್ಯಾಂಡ್ ಸ್ಟಡ್ ಸಮೀಕ್ಷೆಯೊಂದರಲ್ಲಿ ಈಗಾಗಲೇ ತಿಳಿದು ಬಂದಿದೆ.

ದೇಶದ ಉಳಿದ ನಗರಗಳಿಗಿಂತ ಬೆಂಗಳೂರಿನಲ್ಲಿರುವ ಉದ್ಯೋಗಿಗಳಿಗೆ ಹೆಚ್ಚಿನ ವೇತನ ಸಿಗುತ್ತಿದೆ ಎಂದು ಹೇಳಲಾಗಿದೆ. ರ್ಯಾಂಡ್ ಸ್ಟಡ್ ಇಂಡಿಯಾ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವಾಗಿರುವ ರ್ಯಾಂಡ್ ಸ್ಟಡ್ ಇನ್ ಸೈಟ್ ನಿಂದ ಸಮೀಕ್ಷೆ ನಡೆಸಿ ನೀಡಲಾಗಿರುವ ವರದಿಯಲ್ಲಿ ಈ ವಿಷಯ ತಿಳಿದು ಬಂದಿದೆ.ಪುಣೆಯಲ್ಲಿ ಪ್ರತಿಭಾನ್ವಿತ ಉದ್ಯೋಗಿಗಳು ಸರಾಸರಿ ವಾರ್ಷಿಕ 10.3 ಲಕ್ಷ ರೂ. ವೇತನ ಪಡೆದರೆ, ಬೆಂಗಳೂರಿನಲ್ಲಿ ವಾರ್ಷಿಕ 10.8 ಲಕ್ಷ ರೂ. ವೇತನ ನೀಡಲಾಗುವುದು. ಫಾರ್ಮಾ, ಹೆಲ್ತ್ ಕೇರ್, ಜಿ.ಎಸ್.ಟಿ. ಸಂಬಂಧಿತ ವೃತ್ತಿಪರ ಸೇವೆಗಳಿಗೆ ಹೆಚ್ಚು ವೇತನ ಸಿಗುತ್ತಿದೆ. ಇನ್ನುಳಿದ ಹಾಗೆ ಮೂಲಸೌಕರ್ಯ, ರಿಯಲ್ ಎಸ್ಟೇಟ್, ನಿರ್ಮಾಣ ವಲಯದಲ್ಲಿಯೂ ಹೆಚ್ಚಿನ ವೇತನವಿದೆ ಎನ್ನಲಾಗಿದೆ. ವೈದ್ಯಕೀಯ ಹೆಚ್ಚು ವೇತನದ ವಲಯದಲ್ಲಿ ಇಲ್ಲ. ಆದರೆ, 6 -10 ವರ್ಷ ಅನುಭವ ಹೊಂದಿರುವ ವೈದ್ಯರು ಹೆಚ್ಚು ಸಿ.ಟಿ.ಸಿ. ಪಡೆಯುತ್ತಾರೆ. ಅದಕ್ಕೆ ಅನಿಸುತ್ತದೆ ಬೇರೆ ಬೇರೆ ಕಡೆಗಳಿಂದ ಬಂದು ಬೆಂಗಳೂರಿನಲ್ಲಿ ಕೆಲಸವನ್ನು ಅರಸುವುದು.

 

Edited By

Manjula M

Reported By

Manjula M

Comments