A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಡಾ|| ಬಿ.ಆರ್ ಅಂಬೇಡ್ಕರ್ ಬಗ್ಗೆ ನಿಮಗೆಷ್ಟು ಗೊತ್ತು? | Civic News

ಡಾ|| ಬಿ.ಆರ್ ಅಂಬೇಡ್ಕರ್ ಬಗ್ಗೆ ನಿಮಗೆಷ್ಟು ಗೊತ್ತು?

14 Apr 2018 10:19 AM | General
1709 Report

ಡಾ|| ಬಿ.ಆರ್ ಅಂಬೇಡ್ಕರ್.... ಭೀಮರಾವ್ ರಾಮ್‍ಜೀ ಅಂಬೇಡ್ಕರ್ ಸಾಮಾಜಿಕ ಸಮಾನತೆ, ಅಸ್ಪಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲಿ ಒಬ್ಬರು.. ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು.. ಅವರ ಅಧ್ಯಯನಶೀಲತೆ ಅಪಾರವಾದುದು.. ತಮ್ಮ ವಿದ್ವತ್, ಪಾಂಡಿತ್ಯದಿಂದ ಭಾರತ ಸಂವಿಧಾನವನ್ನು ರಚಿಸಿದ ಇವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರ್‍ರವರ ತಂದೆ ರಾಮ್ ಜೀ ಸಕ್ಪಾಲ್ ಅವರು ಬ್ರೀಟಿಷ್ ಸೈನ್ಯದಲ್ಲಿ ಸುಬೇದಾರರಾಗಿ ಸೇವೆ ಸಲ್ಲಿಸಿದ್ದರು. 1908 ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ಉತ್ತಿರ್ಣರಾದರು. ನಾಲ್ಕು ವರ್ಷಗಳ ನಂತರ ಮುಂಬಯಿ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ ಪದವಿಯನ್ನು ಗಳಿಸಿದರು. ಮುಂಬಯಿಯಿಂದ ಪದವಿಯನ್ನು ಪಡೆದುಕೊಂಡು ವಾಪಸ್ ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ವಿದೇಶದಲ್ಲಿ ಓದನ್ನು ಮುಂದುವರೆಸಲು ವಿದ್ಯಾರ್ಥಿವೇತನ ದೊರಕುತ್ತದೆ. 1913 ರಿಂದ 1916ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜ್ಯಶಾಸ್ತ್ರವನ್ನು ಅಭ್ಯಾಸ ಮಾಡಿದರು. ಅಂಬೇಡ್ಕರ್ ಬಗ್ಗೆ ನಿಮಗೆಲ್ಲಾ ಸಾಮಾನ್ಯವಾಗಿ ಸಾಕಷ್ಟು ವಿಷಯಗಳು ತಿಳಿದೆ ಇರುತ್ತೆ...ಆದರೆ ನಿಮಗೆ ತಿಳಿಯದ ಒಂದಿಷ್ಟು ವಿಷಯಗಳನ್ನು ನಿಮಗೆ ತಿಳಿಸ್ತೇನೆ. ಇಂಗ್ಲೇಡ್‍ನ ಕೇಂಬ್ರಿಜ್ ವಿಶ್ವವಿದ್ಯಾನಿಲಯದ 2011 ರ ಪ್ರಕಾರ ವಿಶ್ವದ ಮೊದಲ ಪ್ರತಿಭಾವಂತ ವ್ಯಕ್ತಿಯಲ್ಲಿ ಅಗ್ರಸ್ಥಾನ ಪಡೆದ ಒಬ್ಬ ಭಾರತೀಯ ಅಂದ್ರೆ ಅದು ಡಾ. ಬಿ.ಆರ್ ಅಂಬೇಡ್ಕರ್. ಹೌದು.ನಮ್ಮ ಭಾರತೀಯರು ಅಂದ್ರೆ ನಮಗೆ ತುಂಬಾ ಹೆಮ್ಮೆಯ ವಿಷಯ. ಯಾವುದೆ ವಿಷಯದಲ್ಲಿ ನಮ್ಮ ಭಾರತೀಯರ ವಿಷಯ ಬಂದರೆ ಮೈ ರೋಮಾಂಚನಗೊಳ್ಳುತ್ತದೆ. ಅಂತಹುದರಲ್ಲಿ ಇಂಗ್ಲೇಡ್‍ನ ಕೇಂಬ್ರಿಜ್ ವಿಶ್ವವಿದ್ಯಾನಿಲಯದ 2011 ರ ಪ್ರಕಾರ ವಿಶ್ವದ ಮೊದಲ ಪ್ರತಿಭಾವಂತ ವ್ಯಕ್ತಿಯಲ್ಲಿ ಅಗ್ರಸ್ಥಾನ ಪಡೆದ ಭಾರತೀಯ ಎಂಬ ಹೆಗ್ಗಳಿಕೆ ನಮ್ಮ ಡಾ. ಬಿ. ಆರ್ ಅಂಬೇಡ್ಕರ್‍ರವರಿಗೆ ಸಲ್ಲುತ್ತದೆ.

6 ನೇಯ ಭಾರತೀಯ ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞರಾದಂತಹ ಪ್ರೋಫೆಸರ್ ಅಮತ್ರ್ಯಸೇನ್‍ರವರು ಅಂಬೇಡ್ಕರ್‍ರವರನ್ನು ಅರ್ಥಶಾಸ್ತ್ರದ ಪಿತಾಮಹ ಎಂದು ಕರೆದಿದ್ದಾರೆ. ಆದರೆ ನಮ್ಮ ಭಾರತೀಯ ನೊಬೆಲ್ ಪ್ರಶಸ್ತಿ ವಿಜೇತರಾದ ಪ್ರೋಫೆಸರ್ ಅಮತ್ರ್ಯಸೇನ್‍ರವರು ಅಂಬೇಡ್ಕರ್‍ರವರನ್ನು ತಮ್ಮ ಅರ್ಥಶಾಸ್ತ್ರದ ಪಿತಾಮಹ ಅಂದಿರೋದು ನಿಜಕ್ಕೂ ಹೆಮ್ಮೆಯ ವಿಷಯ.ಭಾರತದಲ್ಲಿ ಮಹಿಳಾ ಸಬಲಿಕರಣಕ್ಕಾಗಿ ಡಾ. ಬಿ.ಆರ್ ಅಂಬೇಡ್ಕರ್‍ರವರು ನೀಡಿರುವ ಕೊಡುಗೆ ಅಪಾರ.. ಭಾರತದ ಮಹಿಳೆಯರಿಗೆ ಘನತೆಯನ್ನು ನೀಡುವ ಸಲುವಾಗಿ ಮತ್ತು ಗಂಡು ಹೆಣ್ಣು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಸಲುವಾಗಿ ಹೋರಾಡಿದರು..ಅಂಬೇಡ್ಕರ್‍ರವರು ಪ್ರಥಮ ಕಾನೂನು ಸಚಿವರಾಗಿದ್ದರೂ ಕೂಡ ಆ ಹುದ್ದೆಗೆ ಅವರು ರಾಜೀನಾಮೆ ನೀಡಿದರು.. ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡಿದರು.ಡಾ. ಅಂಬೇಡ್ಕರ್ ಅವರು ದಾಮೋದರ್ ಕಣಿವೆಯ ಸೃಷ್ಟಿಕರ್ತರಾಗಿದ್ದರು... ಹೌದು... ಅಂಬೇಡ್ಕರ್ ಅವರು ದಾಮೋದರ್ ಕಣಿವೆಯ ಯೋಜನೆಯ ಸೃಷ್ಟಿಕರ್ತರಾಗಿದ್ದರು. ಹಿರಾಕುಡ್ ಯೋಜನೆ, ಸನ್ ರಿವರ್ ಕಣಿವೆ ಯೋಜನೆಗಳಲ್ಲಿ ಅವರ ಪಾತ್ರ ಅಗಾಧವಾಗಿತ್ತು. 1945 ರಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಬಹು ಉದ್ದೇಶಿತ ಬಳಕೆಗಾಗಿ ಮಹಾನದಿಯನ್ನು ನಿಯಂತ್ರಿಸುವ ಪ್ರಯೋಜನಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಲಾಯಿತು.

ಗ್ರಿಡ್ ಸಿಸ್ಟಮ್‍ನ ಪ್ರಾಮುಖ್ಯತೆ ಅರಿತು ಅದರ ಮಹತ್ವವನ್ನು ಸಾರಿ ಹೇಳಿದ್ದಾರೆ.ಡಾ. ಅಂಬೇಡ್ಕರ್ ಇಂದಿಗೂ ಸಹ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗ್ರಿಡ್ ಸಿಸ್ಟಮ್‍ನ ಮಹತ್ವ ಮತ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇಂಜಿನಿಯರಿಂಗ್ ತರಬೇತಿಗಾಗಿ ವಿದೇಶಕ್ಕೆ ಹೋಗುವಂತೆ ಮಾಡಿದ ಕೀರ್ತಿ ಡಾ. ಅಂಬೇಡ್ಕರ್‍ಗೆ ಸಲ್ಲುತ್ತದೆ.ಕೆಲಸ ಅಂದ ಮೇಲೆ ಸಾಕಷ್ಟು ಕೆಲಸಗಳು ಇರ್ತಾವೆ...ದುಡಿಮೆಯೆ ದೇವರು ಎನ್ನುವುದನ್ನು ಎಲ್ಲರು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಾರೆ. ಹಾಗಂತ ಎಷ್ಟು ಅಂತ ಕೆಲಸ ಮಾಡೋದು ಹೇಳಿ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಡಾ. ಬಿ. ಆರ್ ಅಂಬೇಡ್ಕರ್ ಭಾರತದಲ್ಲಿ 8 ಗಂಟೆಗಳ ಕಾಲ ಕೆಲಸವನ್ನು ಮಾಡುವ ಕ್ರಮವನ್ನು ಜಾರಿಗೆ ತಂದರು.. 1942ರಲ್ಲಿ 12 ಗಂಟೆಗಳ ಕಾಲ ಇದ್ದ ಕೆಲಸದ ವೇಳೆಯನ್ನು 8 ಗಂಟೆಗೆ ಇಳಿಸಿದರು.

ವಿದ್ಯುತ್ ವ್ಯವಸ್ಥೆ ಅಭಿವೃದ್ದಿಗಾಗಿ ಡಾ. ಅಂಬೇಡ್ಕರ್‍ರವರು ಸಾಕಷ್ಟು ಶ್ರಮ ವಹಿಸಿದ್ದರು. ಅದಕ್ಕಾಗಿ ವಿದ್ಯುತ್ ವ್ಯವಸ್ಥೆ ಅಭಿವೃದ್ಧಿಗಾಗಿ ಡಾ. ಅಂಬೇಡ್ಕರ್‍ರವರು “ ಕೇಂದ್ರೀಯ ಟೆಕ್ನಿಕಲ್ ಪವರ್ ಬೋರ್ಡ್ ” ಅನ್ನು ಸ್ಥಾಪಿಸಿದರು.ಜಲ ವಿದ್ಯುತ್ ಸ್ಥಾವರ ಕೇಂದ್ರಗಳು, ಹೈಡ್ರೊ ಪವರ್ ಸ್ಟೆಷನ್ , ವಿದ್ಯುತ್ ಉತ್ಪಾದನೆಯ ಸಮಸ್ಯೆ ಮತ್ತು ಉಷ್ಣ ವಿದ್ಯುತ್ ಉತ್ಪಾದನೆಯ ಸಮಸ್ಯೆ ಮತ್ತು ಉಷ್ಣ ವಿದ್ಯುತ್ ಸ್ಥಾವರ ತನಿಖೆಯನ್ನು ವಿಶ್ಲೇಷಿಸುವುದು.ಇಂದು ನಮ್ಮ ಮನೆಯು ಪ್ರಕಾಶಿತವಾಗಿದ್ದರೆ ಅದಕ್ಕೆ ಕಾರಣ ಅಂಬೇಡ್ಕರ್‍ರವರೆ ಕಾರಣ.. ಭಾರತದ ಆರ್ಥಿಕತೆಯ ಪ್ರಮುಖ ಭಾಗವಾಗಿ ಅಂಬೇಡ್ಕರ್ ಕಾರ್ಯ ನಿರ್ವಹಿಸಿದ್ದರು. 

Edited By

Manjula M

Reported By

Manjula M

Comments