ಬೀಟ್ ರೂಟ್ ಜ್ಯೂಸ್ ನಿಂದ ಹೇರ್ ಕಲರಿಂಗ್ ಸಾಧ್ಯಾನಾ?

13 Apr 2018 5:31 PM | General
639 Report

ಹೆಣ್ಣು ಮಕ್ಕಳಿಗೆ ಕೂದಲಿನ ಬಗ್ಗೆ ಹೆಚ್ಚು ಕಾಳಜಿ. ಕೂದಲಿಗೆ ಸಾಕಷ್ಟು ಆರೈಕೆಯನ್ನು ಕೂಡ ಮಾಡುತ್ತಾರೆ. ಕೂದಲಿನ ಕಡೆಗೆ ನಾವು ಎಷ್ಟು ಗಮನ ಹರಿಸಿದರೂ ಸಹ ಅದರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವೇ ಇಲ್ಲ ಎಂಬಂತೆ ಒಂದೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ತಲೆ ಹೊಟ್ಟು, ಕೂದಲು ಉದುರುವಿಕೆ, ಸೀಳಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಬಾರಿ ಮನೆಯಲ್ಲಿ ಸಿಗುವ ಬೀಟ್ ರೂಟ್ ನಿಂದ ಹೇಗೆ ಹೇರ್ ಕಲರ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳಿ

ಎಸ್. ಈ ಬೀಟ್‌ರೂಟ್‌ ಪ್ಯಾಕ್‌ ಮಾಡಿ ತಲೆ ಹಚ್ಚುವುದರಿಂದ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಮಾಯವಾಗುತ್ತದೆ. ಅಲ್ಲದೇ ಆರೋಗ್ಯಯುತ ಕೂದಲು ಕೂಡ ನಿಮ್ಮದಾಗುತ್ತದೆ. ಬೀಟ್‌ರೂಟ್‌ನಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರೀಶಿಯನ್‌ ಮತ್ತು ಮಿನೆರಲ್ಸ್‌ ಇರುವುದರಿಂದ ಕೂದಲಿನ ಬಣ್ಣವೂ ಕೂಡ ಹೆಚ್ಚುತ್ತದೆ. ಬೀಟ್‌‌ರೂಟ್‌ನ್ನು  ನೀರಿನಲ್ಲಿ ಹಾಕಿ ಬೇಯಿಸಿ, ನೀವು ಹಾಕಿರುವ ನೀರಿನ ಅರ್ಧ ಭಾಗ ಬರುವವರೆಗೆ ಚೆನ್ನಾಗಿ ಕುದಿಸಿ. ನಂತರ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಈಗ ಈ ಪೇಸ್ಟ್‌ಗೆ ಒಂದು ಟೇಬಲ್ ಸ್ಪೂನ್ ಮೆಹಂದಿ ಪುಡಿ ಮತ್ತು ನೆಲ್ಲಿಕಾಯಿ ಪುಡಿ ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ ನಂತರ ಇದನ್ನು ನಿಮ್ಮ ಕೂದಲ ಬುಡಕ್ಕೆ ಚೆನ್ನಾಗಿ ಹಚ್ಚಬೇಕು.  ಮೃದುವಾಗಿ ಮಸಾಜ್ ಮಾಡಿ.ಸುಮಾರು ಅರ್ಧ ಗಂಟೆಯವರೆಗೂ ಆ ಪ್ಯಾಕ್ ಅನ್ನು ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ.ಇದನ್ನು ತಿಂಗಳಲ್ಲಿ 4-5 ಬಾರಿ ಪುನರಾವರ್ತಿಸಿ. ಇದರಿಂದ ಆರೋಗ್ಯಕರ ಹಾಗೂ ರೇಷ್ಮೆಯಂತಹ ಕೂದಲನ್ನು ನಿಮ್ಮದಾಗಿಸಿಕೊಳ್ಳಿ. 

 

Edited By

Manjula M

Reported By

Manjula M

Comments

Cancel
Done