ಮಕ್ಕಳ ಆಹಾರದ ವಿಚಾರದಲ್ಲಿ ಸ್ವಲ್ಪ ಜಾಗೃತೆ ಇರಲಿ

13 Apr 2018 3:59 PM | General
353 Report

ಎಲ್ಲಾ ತಾಯಂದಿರಿಗೆ ತಮ್ಮ ಮಗು ಏನೂ ತಿನ್ನೋದೆ ಇಲ್ಲ ಎಂಬ ಟೆನ್ಶನ್ ಸಾಮಾನ್ಯವಾಗಿ ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಆಹಾರ ಸೇವನೆ ಮಾಡಬೆಕು ಎಂದು ಅಮ್ಮಂದಿರು ಆಸೆ ಪಡೋದು ಕಾಮನ್. ಆದರೆ ಕೆಲವೊಂದು ಆಹಾರದಿಂದ ಮಕ್ಕಳು ಪ್ರಾಣವನ್ನೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಅಮ್ಮಂದಿರು ಎಚ್ಚರದಿಂದ ಇರಬೇಕು.

ದ್ರಾಕ್ಷಿಯಿಂದಲೂ ಕೂಡ ಕೆಲವೊಮ್ಮೆ ಮಕ್ಕಳ ಜೀವ ಹೋಗಬಹುದು. ಇದಕ್ಕೆ ನಿದರ್ಶನವೆಂದರೆ ಆಸ್ಟ್ರೇಲಿಯಾದಲ್ಲಿ ನಡೆದ ಸತ್ಯ ಘಟನೆ. ಮಗುವಿಗೆ ದ್ರಾಕ್ಷಿ ಇಷ್ಟವೆಂದು ಅದನ್ನು ತಾಯಿ ಮಗುವಿಗೆ ನೀಡಿದ್ದರು. ಪೂರ್ತಿ ದ್ರಾಕ್ಷಿಯನ್ನು ನುಂಗಿದ ಪರಿಣಾಮವಾಗಿ ಅದು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಮಗುವಿಗೆ ಉಸಿರಾಡಲು ತೊಂದರೆಯಾಗಿ ಒದ್ದಾಡಲು ಆರಂಭಿಸಿದ ನಂತರ ತಕ್ಷಣ ಆಸ್ಪತ್ರೆಗೆ ಧಾವಿಸಿ ಮಗುವಿನ ಆಪರೇಶನ್‌ ನಡೆಸಿ ದ್ರಾಕ್ಷಿಯನ್ನ ಹೊರ ತೆಗೆಯಲಾಯಿತು.

ಚಿಕ್ಕ ಮಕ್ಕಳು ಹೆಚ್ಚಾಗಿ ನಾಣ್ಯ, ಗಟ್ಟಿಯಾದ ವಸ್ತು, ಮುಚ್ಚಳ, ಇದೇ ರೀತಿಯಾದ ಏನೇನೋ ವಸ್ತುಗಳನ್ನು ಬಾಯಲ್ಲಿ ಇಟ್ಟುಕೊಳ್ಳುತ್ತಾರೆ. ಇವು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಆದ್ದರಿಮದ ಮಕ್ಕಳಿರುವ ಮನೆಯನ್ನು ಆದಷ್ಟು ಕ್ಲೀನ್‌ ಆಗಿಟ್ಟುಕೊಳ್ಳಲು ಪ್ರಯತ್ನಿಸಿ. ಜೊತೆಗೆ ಮಕ್ಕಳ ಕೈಗೆ ಸಿಗುವಂತೆ ಯಾವುದೆ ವಸ್ತುಗಳನ್ನು ನೆಲದಲ್ಲಿ ಚೆಲ್ಲಾಡಬೇಡಿ. ಒಂದು ವೇಳೆ ಮಗು ಬಾಯಿಗೆ ಏನಾದರು ಹಾಕಿದರೆ ಕೂಡಲೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ. ತಡ ಮಾಡಿದರೆ ಮಗುವಿನ ಜೀವಕ್ಕೆ ಹಾನಿಯಾಗಬಹುದು.

Edited By

Manjula M

Reported By

Manjula M

Comments