ನಿರುದ್ಯೋಗಿಗಳಿಗೆ ಫೇಸ್ಬುಕ್ ನಲ್ಲಿ ಕೆಲಸ ಮಾಡುವ ಅವಕಾಶ

13 Apr 2018 11:20 AM | General
334 Report

ಈಗಾಗಲೇ ಡೇಟಾ ಲೀಕ್ ಪ್ರಕರಣದಲ್ಲಿ ಫೇಸ್ಬುಕ್ ಟೀಕೆಗೆ ಗುರಿಯಾಗಿದೆ. ಈ ಮಧ್ಯೆಯೇ ವಿಶ್ವದಾದ್ಯಂತ ಫೇಸ್ಬುಕ್ ದೊಡ್ಡ ಮಟ್ಟದಲ್ಲಿ ನೇಮಕಾತಿಯನ್ನು ಹೊಂದಲು ಮುಂದಾಗಿದೆ. ಫೇಸ್ಬುಕ್ ಒಟ್ಟೂ 20000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕಂಪನಿ ವಿಷಯ ಪರಿಶೀಲನೆ ಹಾಗೂ ಭದ್ರತೆ ವಿಭಾಗಕ್ಕಾಗಿ 15000 ಜನರನ್ನು ನೇಮಿಸಿಕೊಳ್ಳಲಾಗುತ್ತಿದೆ ಮತ್ತು  ಉಳಿದ 5000 ಮಂದಿ ಇತರ ಕೆಲಸವನ್ನು  ಮಾಡಲಿದ್ದಾರೆ. ಈ ಬಗ್ಗೆ ಫೇಸ್ಬುಕ್ ಸಿಇಓ ಮಾರ್ಕ್ ಜ್ಯೂಕರ್ಬರ್ಗ್ ಅಧಿಕೃತ ಮಾಹಿತಿಯನ್ನು ಕೂಡ ನೀಡಿದ್ದಾರೆ. ಯುಎಸ್ ಸೆನೆಟ್ ನಲ್ಲಿ ಮಾರ್ಕ್ ಜ್ಯೂಕರ್ ಬರ್ಗ್ ಈ ಬಗ್ಗೆ ಮಾಹಿತಿಯನ್ನು ಅಧಿಕೃತವಾಗಿಯೇ ನೀಡಿದ್ದಾರೆ.ವರ್ಷಾಂತ್ಯದಲ್ಲಿ 20000 ನೇಮಕಾತಿ ನಡೆಯಲಿದೆ. ಭದ್ರತೆ ಹಾಗೂ ವಿಷಯ ಪರಿಶೀಲನೆ ವಿಭಾಗಕ್ಕೆ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳುವುದ್ರಿಂದ ಮುಂದಿನ ದಿನಗಳಲ್ಲಿ ಡೇಟಾ ಕಳ್ಳತನವನ್ನು ತಡೆಯಲು ಸಾಧ್ಯವೆಂದು ಮಾರ್ಕ್ ಜ್ಯೂಕರ್ ಬರ್ಗ್  ಹೇಳಿದ್ದಾರೆ.ಡೇಟಾ ಲೀಕ್ ಆಗ್ತಿದ್ದಂತೆ ಯುಎಸ್ ಸೆನೆಟ್ ಮುಂದೆ ಕಾಣಿಸಿಕೊಂಡ ಮಾರ್ಕ್ ಜ್ಯೂಕರ್ಬರ್ಗ್ ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಸೆನೆಟ್ ನ ಕ್ಷಮೆಯನ್ನು ಕೂಡ ಈ ಸಂದರ್ಭದಲ್ಲಿ ಕೋರಿದ್ದಾರೆ. ಡೇಟಾ ಸೋರಿಕೆ ಸಂಬಂಧ ಮಾರ್ಕ್ ಜ್ಯೂಕರ್ ಬರ್ಗ್ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

 

Edited By

Manjula M

Reported By

Manjula M

Comments