AM,PM,SIM,STD,PTO,SD card ಇವುಗಳ ಫುಲ್ ಫಾರ್ಮ್ ಗೊತ್ತಾ?

10 Apr 2018 12:24 PM | General
2038 Report

ಸಾಮಾನ್ಯಾವಾಗಿ ನಮಗೆಲ್ಲಾ USA WTO UNESCO ಈ ರೀತಿಯ ಪದಗಳ ವಿಸ್ತøತ ರೂಪ ಗೊತ್ತಿರುತ್ತೆ.. ಆದ್ರೆ ಗೊತ್ತಿಲ್ಲದ ಕೆಲವೊಂದು ವಿಸ್ತøತ ರೂಪಗಳನ್ನ ನಿಮಗೆ ಪರಿಚಯ ಮಾಡಿಕೊಡುತ್ತೇವೆ. ನಾವು ಹೇಳುವ ಈ ಪದಗಳನ್ನ ದಿನನಿತ್ಯ ಬಳಸುತ್ತಲೆ ಇರ್ತೇವೆ,ಆದರೆ ಅವುಗಳ ವಿಸ್ತøತ ರೂಪಗಳು ಮಾತ್ರ ಯಾರಿಗೂ ಗೊತ್ತಿರಲ್ಲ... ಉದಾಹರಣೆಗೆ ಎ ಎಂ....ಪಿ.ಎಂ ಈ ರೀತಿಯದ್ದು.. ಇವೆಲ್ಲದರ ಕಂಪ್ಲೀಟ್ ಡೀಟೈಲ್ಸ್ ನಿಮ್ಮ ಮುಂದೆ.

AM     ಇದು ಸಾಮಾನ್ಯವಾಗಿ ದಿನನಿತ್ಯದಲ್ಲಿ ಸಾಕಷ್ಟು ಸಲ ಬಳಸುತ್ತೆ ಇರುತ್ತೇವೆ. ಆದರೆ ಹಾಗಾಂದ್ರೆ ಏನು ಅನ್ನೋದು ಯಾರಿಗೂ ಗೊತ್ತಿಲ್ಲ.ಇದನ್ನ ಗಡಿಯಾರ ನೋಡಿಕೊಂಡು ಬಳಸುವ ಒಂದು ಪದ. ಬೆಳ್ಳಿಗೆ ಆಗಿದ್ರೆ ಎ ಎಂ ಎಂಬ ಪದವನ್ನು ಬಳಸುತ್ತೇವೆ. ಆದರೆ ಎ ಎಮ್ ಎಂದರೆ ಸಾಮಾನ್ಯವಾಗಿ ಎಲ್ಲರೂ ಆಪ್ಟರ್ ಮಾರ್ನಿಂಗ್ ಎಂದು ಹೇಳುತ್ತಾರೆ. ಆದರೆ ಇದು ತಪ್ಪು.ಎ ಎಮ್ ಎಂದರೆ ಆ್ಯಂಟಿ ಮೆರಿಡಿಯಮ್ ಎಂದರ್ಥ..

PM ಇದನ್ನೂ ಕೂಡ ಸಾಮನ್ಯವಾಗಿ ದಿನನಿತ್ಯದಲ್ಲಿ ಸಾಕಷ್ಟು ಸಲ ಬಳಸುತ್ತೇವೆ. ಪಿ.ಎಮ್ ಅಂದರೆ ಯಾರಿಗೂ ಗೊತ್ತಿಲ್ಲ... ಬೆಳಿಗ್ಗೆ 11 ಗಂಟೆ ಮುಗಿದ ತಕ್ಷಣ 12 ಆದ ತಕ್ಷಣ ಪಿ.ಎಮ್ ಹೇಳೋಕೆ ಶುರು ಮಾಡ್ತಾರೆ. ಆದ್ರೆ ಆ ಪಿ. ಎಮ್ ಅಂದ್ರೆ ಯಾರಿಗೂ ಗೊತ್ತಿಲ್ಲ. ಆಕ್ಚುಲಿ ಪಿ.ಎಮ್ ಎಂದರೆ ಪೋಸ್ಟ್ ಮೆರಿಡಿಯಮ್ ಎಂದು. ಇನ್ ಮೇಲೆ ಎ ಎಮ್ ಪಿ ಎಮ್ ಅಂದರೆ ಸರಿಯಾಗಿ ಹೇಳಿ.

SIM    ಈ ಪದವನ್ನು ಕೇಳದೆ ಇರೋರೆ ಇಲ್ಲ. ಎಲ್ಲರ ಬಳಿಯೂ ಕೂಡ ಮೊಬೈಲ್ ಇದ್ದೆ ಇರುತ್ತೆ. ಆ ಮೊಬೈಲ್‍ನಲ್ಲಿ ಸಿಮ್ ಕೂಡ ಇದ್ದೆ ಇರುತ್ತೆ. ಸಿಮ್ ನಂಬರ್ ನೆಟ್‍ವರ್ಕ್ ಯಾವುದು ಅನ್ನೋದು ಗೊತ್ತು. ಸಿಮ್ ನ ವಿಸ್ತøತ ರೂಪ ಅನ್ನೋದು ಯಾರಿಗೂ ಕೂಡ ಗೊತ್ತಿಲ್ಲ. ಸಿಮ್ ಎಂದರೆ Subscriber Identification Module ಎಂದರ್ಥ. ನಾವು ಏನಾದರೂ ಬಳಸುವ ಮೊದಲು ಅದರ ಬಗ್ಗೆ ತಿಳಿದುಕೊಂಡಿರಬೇಕು.

SD card  ಇದು ಕೂಡ ಮೊಬೈಲ್‍ನಲ್ಲಿ ಬಳಸುವ ಒಂದು ಸಾಧನ.ಇದನ್ನ ಸುರಕ್ಷಿತ ಡಿಜಿಟಲ್ ಕಾರ್ಡ್ ಎಂದೂ ಸಹ ಕರೆಯುತ್ತಾರೆ.ಒಂದು ಸಣ್ಣ ಗಾತ್ರದ ಉನ್ನತ ಸಾಮಥ್ರ್ಯದ ಸ್ಮರಣೆಯನ್ನು ಒದಗಿಸಲು ವಿನ್ಯಾಸಗೊಳಿಸಿರುವ ಅಲ್ಟ್ರಾ ಸಣ್ಣ ಫ್ಲಾಶ್ ಮೆಮೊರಿ ಕಾರ್ಡ್ ಇದಾಗಿದೆ.ಮೊಬೈಲ್‍ಗಳಲ್ಲಿ ಡಿಜಿಟಲ್ ಕ್ಯಾಮರಗಳಲ್ಲಿ ಹ್ಯಾಂಡ್ಹೆಲ್ಡ್ ಕಂಪ್ಯೂಟರ್‍ಗಳು, ಆಡಿಯೋ ಪ್ಲೇಯರ್ಸ್‍ಗಳಲ್ಲಿ ಸಣ್ಣ ಸಾಧನವಾಗಿ ಈ ಎಸ್ ಡಿ ಕಾರ್ಡ್ ಅನ್ನು ಬಳಸಬಹುದು.

STD ಅಂತ ಬಾಯಿ ಮಾತಲ್ಲಿ ಹೇಳ್ತೀವಿ ಆದ್ರೆ ಅದರ ಪುಲ್ ಫಾರ್ಮ್ ಗೊತ್ತಿಲ್ಲ. ಇತ್ತಿಚಿಗೆ ಈ ಎಸ್ ಟಿ ಡಿಗಳು ಕಡಿಮೆಯಾಗುತ್ತಿವೆ. ಯಾಕಂದ್ರೆ ಮೊಬೈಲ್‍ಗಳ ಹಾವಳಿ ಅಷ್ಟಾಗಿದೆ..ಸ್ವಲ್ಪ ವರ್ಷಗಳ ಹಿಂದೆ ಈ ಎಸ್ ಟಿ ಡಿ ತುಂಬಾ ಚಾಲ್ತಿಯಲ್ಲಿತ್ತು.. ಆದ್ರೆ ಇತ್ತಿಚಿಗೆ ಇದು ತುಂಬಾ ಕಡಿಮೆಯಾಗಿದೆ. ಎಸ್ ಟಿ ಡಿ ಎಂದರೆ ಸಬ್ಸ್ಕೈಬರ್ ಟ್ರಂಕ್ ಡಯಲಿಂಗ್ ಅಥವಾ ಚಂದದಾರ ಟ್ರಂಕ್ ಡಯಲಿಂಗ್... ಎಂದು ಸಹ ಹೇಳಬಹುದು.

PTO  ಇದನ್ನ ಸಾಮಾನ್ಯವಾಗಿ ನಾವು ಎಲ್ಲಿ ನೋಡಿರುತ್ತೀವಿ ಹೇಳಿ... ಪುಟಗಳ ಕೊನೆಯ ಭಾಗದಲ್ಲಿ ಬರೆದಿರುತ್ತಾರೆ.. ಕಾಮನ್ ಆಗಿ ಪಿಟಿಓ ಎಂದರೆ ಪೇಜ್ ಟರ್ನ್ ಓವರ್ ಎಂದು ಅರ್ಥ... ಆದರೆ ಅದರ ನಿಜವಾದ ಅರ್ಥ ಏನು ಗೊತ್ತಾ... ಪ್ಲೀಸ್ ಟರ್ನ್ ಓವರ್... ಇನ್ ಮೇಲೆ ಪಿಟಿಓ  ಅಂದ್ರೆ ಪೇಜ್ ಟರ್ನ್ ಓವರ್ ಅನ್ನಬೇಡಿ... ಪ್ಲೀಸ್ ಟರ್ನ್ ಓವರ್ ಅಂತ ನೀವು ಹೇಳಿ... ಗೊತ್ತಿಲ್ಲದವರಿಗೂ ಕೂಡ ತಿಳಿಸಿ ಹೇಳಿ.

 

Edited By

Manjula M

Reported By

Manjula M

Comments