40 ಬಗೆ ಬಗೆಯ ಹಣ್ಣುಗಳನ್ನ ಬಿಟ್ಟ ಕಲಿಯುಗದ ಕಲ್ಪವೃಕ್ಷ

09 Apr 2018 5:03 PM | General
656 Report

ನಾವು ಶಾಲೆಗೆ ಹೋಗೋ ಟೈಮ್ನಲ್ಲಿ ಅಥವಾ ಕೆಲವೊಂದು ಪೌರಾಣಿಕ ಸಿನೆಮಾಗಳಲ್ಲಿ ಕಲ್ಪವೃಕ್ಷದ ಬಗ್ಗೆ ಕೇಳಿದ್ದು, ನೋಡಿದ್ದು ನೆನಪಾಗುತ್ತೆ. ನಾವು ಏನೆ ವರ ಕೇಳಿದ್ರು ಕಲ್ಪವೃಕ್ಷ ಮರ ನೀಡುತ್ತೆ ಅನ್ನೋ ನಂಬಿಕೆ ಇತ್ತು. ಆದ್ರೆ ಈ ಮರ ಕೇಳಿದ್ದು ನೀಡುತ್ತೋ ನಿಡಲ್ವೋ ಅದು ಗೊತ್ತಿಲ್ಲ. ಆದ್ರೆ 40 ರೀತಿಯ ಬಗೆ-ಬಗೆಯ ರುಚಿಕರವಾದ ಹಣ್ಣನ್ನ ಮಾತ್ರ ನೀಡುತ್ತೆ. ಹೌದು ಇದರ ಹೆಸರು ``ಟ್ರೀ ಆಪ್ 40’’ ಅಂತ.

ಈ ಟ್ರೀ ಆಪ್ 40 ಮರವನ್ನ ಸಿರಕ್ಯೂಸ್ ವಿಶ್ವವಿದ್ಯಾಲಯದ ಸಹಾಯಕ ಕಲಾ ಪ್ರಾಧ್ಯಾಪಕ ವ್ಯಾನ್ ಅಕೇನ್ ಎಂಬುವವರು ಸಂಶೋಧನೆ ಮಾಡಿದ್ದಾರೆ. ಇದರಲ್ಲಿ ಏನಿಲ್ಲ ಅಂದ್ರು ಜಲದರು ಹಣ್ಣು, ಪೀಚ್, ಪ್ಲಮ್ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನ ಬಿಡುತ್ತೆ. ಈ ಮರದ ಬಗ್ಗೆ ಸಂಶೋಧನೆ ಶುರುವಾಗಿದ್ದು 2008ರಲ್ಲಿ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅಕೇನ್ ಕಸಿ ಕಲಾ ಪ್ರಯೋಗಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ.  ಸುಮಾರು ವರ್ಷಗಳಿಂದ ಮಾಡಿದ ಸಂಶೋಧನೆಯ ಪರಿಶ್ರಮದ ಫಲವೇ ಈ ಕ್ರೇಜಿ ಟ್ರೀ ಆಪ್ 40 ಎಂದಿದ್ದಾರೆ. ಇದನ್ನ ವೈಜ್ಞಾನಿಕ ಸಂಶೋಧನೆ ಎನ್ನುವುದಕ್ಕಿಂತ ಬದಲು ಕಲಾ ಸೃಷ್ಟಿ ಎಂದಿದ್ದಾರೆ. ಈ ಮರದ ಬಗ್ಗೆ ತಿಳಿದ ಜನರು ಈ ಮರದ ಸಸಿಗಳನ್ನ ಕೊಳ್ಳಲು ಕ್ಯೂ ನಿಂತಿದ್ದಾರೆ. ಸಖತ್ ಡಿಮ್ಯಾಂಡ್ ಇರೋ ಈ ಗಿಡದ ಬೆಲೆ ಏನಿಲ್ಲಾ ಅಂದ್ರು 19 ಲಕ್ಷ ರೂಪಾಯಿ. ಅದೇನೆ ಆದ್ರೂ ಕಲಿಯುಗದ ಕಲ್ಪವೃಕ್ಷ ಮರದ ಹಣ್ಣನ್ನ ತಿನ್ನಬೇಕು ಅಂದ್ರೆ ದಶಕಗಳೇ ಬೇಕು.

Edited By

Manjula M

Reported By

Manjula M

Comments