ಸ್ಪೈನ್ ನಲ್ಲಿರುವ ನೀಲಿ ನಗರದ ಬಗ್ಗೆ ನಿಮಗೆಷ್ಟು ಗೊತ್ತು?

09 Apr 2018 2:40 PM | General
461 Report

ಇದು ಇಟಲಿಯ ವಿಗನೆಲ್ಲಾ ಎಂಬ ಸಣ್ಣ ಗ್ರಾಮ. ಈ ಗ್ರಾಮ ಸೂರ್ಯನ ಬೆಳಕಿನಿಂದ ವಂಚಿತವಾಗಿದೆ. ಯಾಕಂದ್ರೆ ಈ ಗ್ರಾಮ ದೊಡ್ಡದಾದ ಪರ್ವತದ ಮಧ್ಯದ ವ್ಯಾಲಿಯಲ್ಲಿಯಲ್ಲಿದೆ. ಹಾಗಾಗಿ ಈ ಗ್ರಾಮಕ್ಕೆ ಸೂರ್ಯನ ಕಿರಣಗಳು ಬೀಳೋದಿಲ್ಲ. ಆದ್ದರಿಂದ ಈ ಗ್ರಾಮ ತನ್ನದೇ ಆದ ಸೂರ್ಯನನ್ನ ಹೊಂದಿದೆ.

ಪರ್ವತದ ಕೆಳಗಿರುವ ಈ ಗ್ರಾಮಕ್ಕೆ ನವೆಂಬರ್‍ನಿಂದ ಫೆಬ್ರವರಿವರೆಗೂ ಸೂರ್ಯನ ಒಂದು ಕಿರಣ ಕೂಡ ಈ ಗ್ರಾಮವನ್ನ ಸೋಕಲ್ಲ. ಹಾಗಾಗಿ ಇಲ್ಲಿನ ಜನರೇ ತಮ್ಮ ಸಮಸ್ಯೆಗೆ ಪರಿಹಾರವನ್ನ ಕಂಡುಕೊಂಡಿದ್ದಾರೆ. ವಿಗನೆಲ್ಲಾ ಎಂಬ ಈ ಸಣ್ಣ ಗ್ರಾಮದಲ್ಲಿ ವಾಸಿಸೋ ಜನರು ಪರ್ವತದ ಮೇಲೆ ಒಂದು ರಿಫ್ಲೆಕ್ಟರ್ ಇಟ್ಟಿದ್ದಾರೆ. ಇದರ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅದು ರಿಫ್ಲೆಕ್ ಆಗಿ ಗ್ರಾಮದ ಮೇಲೆ ಬೆಳಕನ್ನ ಬೀರುತ್ತೆ. ಈ ಸುಂದರ ಸೋಜಿಗವನ್ನ ನೋಡಿ ಇಲ್ಲಿನ ಜನ ಖುಷಿ ಪಡ್ತಾರೆ. ಇನ್ನೂ ಸ್ಪೈನ್‍ನಲ್ಲಿ ಅತ್ಯಾದ್ಭುತವಾದ ಜುóಝರ್ ಎಂಬ ಗ್ರಾಮವಿದೆ. ಈ ಗ್ರಾಮದ ವಿಶೇಷತೆ ಅಂದ್ರೆ ಇದು ಸಂಪೂರ್ಣವಾಗಿ ನೀಲಿ ಬಣ್ಣದಿಂದ ಕೂಡಿದೆ. ನೀಲಿ ಬಣ್ಣದಿಂದ ಸುತ್ತುವರೆದಿರುವ ಈ ಗ್ರಾಮ ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಇಲ್ಲಿ ಸಿಗೋ ವಸ್ತುಗಳೆಲ್ಲಾ ನೀಲಿ ಬಣ್ಣದ್ದೆ ಆಗಿದೆ. ಈ ಗ್ರಾಮದಲ್ಲಿ ಏನಾದ್ರೂ ಕಾರ್ಯಕ್ರಮ ನಡೆದ್ರೆ ಎಲ್ಲಾರೂ ನೀಲಿ ಬಣ್ಣದ ಉಡುಪನ್ನೇ ತೊಟ್ಟಿರುತ್ತಾರೆ.. ನೀಲಿ ಬಣ್ಣವೇ ಈ ಗ್ರಾಮದ ವಿಶೇಷತೆಯನ್ನಾಗಿಸಿದೆ. ಜೊತೆಗೆ ಕಾರ್ಟೂನ್ಸ್ ರೀತಿ ವೇಷಧರಿಸಿಕೊಂಡು ಎಲ್ಲರನ್ನ ಸೆಳೆಯೋದೆ ಈ ಗ್ರಾಮಸ್ಥರ ವಿಶೇಷ.

 

Edited By

Manjula M

Reported By

Manjula M

Comments