ಮುಖದ ಅಂದ ಹೆಚ್ಚಿಸಲು ಈ ಫೇಸ್ ಪ್ಯಾಕ್ ಬಳಸಿ

09 Apr 2018 1:21 PM | General
723 Report

ಸಾಮಾನ್ಯವಾಗಿ ಬೇಸಿಗೆ ಬಂತು ಅಂದರೆ ದೇಹಕ್ಕೆ ನೀರಿನ ಪ್ರಮಾಣ ಹೆಚ್ಚಾಗಿ ಬೇಕು ಅನಿಸುತ್ತದೆ. ಒಳ್ಳೆಯ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಅಂತಹ ಆಹಾರಗಳಲ್ಲಿ ಕ್ಯಾರೆಟ್ ಕೂಡ ಒಂದು ಬೀಟಾ-ಕ್ಯಾರೋಟಿನ್ ಹೊಂದಿರುವ ಆಂಟಿ ಆಕ್ಸಿಡೆಂಟ್ಗಳಿಂದ ಕ್ಯಾರೆಟ್ ಕೂಡಿದೆ. ಈ ತರಕಾರಿಯು ಆಹಾರ ಪದಾರ್ಥಗಳಿಗೆ ಅತ್ಯುತ್ತಮ ರುಚಿಯನ್ನು ನೀಡಬಲ್ಲ ಈ ತರಕಾರಿ ಆರೋಗ್ಯದ ವಿಚಾರದಲ್ಲೂ ಅತ್ಯುತ್ತಮವಾದ ಆರೈಕೆಯನ್ನು ಮಾಡುವುದು.

ಹೊಳೆಯುವ ತ್ವಚೆಯನ್ನು ಪಡೆಯುವುದಕ್ಕಾಗಿ ಹೊಳೆಯುವ ತ್ವಚೆಗಾಗಿ ಕ್ಯಾರೆಟ್‍ನಲ್ಲಿರುವ ವಿಟಮಿನ್ ಸಿ ಹಾಗೂ ರೋಗ ನಿರೋಧಕ ಗುಣಗಳು ಚರ್ಮವನ್ನು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಅಲ್ಲದೆ ತ್ವಚೆಯನ್ನು ಮೃದು ಹಾಗೂ ಕೋಮಲವಾಗಿರಲು ಕ್ಯಾರೆಟ್ ಸಹಕಾರಿಯಾಗಿರುತ್ತದೆ. ಕ್ಯಾರೆಟ್ ಫೇಸ್ ಪ್ಯಾಕ್ ಅನ್ನು ಬಳಸಿದರೆ ನಿಮ್ಮ ತ್ವಚೆ ಚನ್ನಾಗಿರುತ್ತದೆ. ಸ್ವಲ್ಪ ತುರಿದ ಕ್ಯಾರೆಟ್‌ ಗೆ ಜೇನುತುಪ್ಪ ಬೆರೆಸಿ, ಮಿಶ್ರಣ ಮಾಡಿಕೊಳ್ಳಿ. ಆ  ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 15 ನಿಮಿಷಗಳ ಕಾಲ ಆರಲು ಬಿಡಿ. ನಂತರ  ತಣ್ಣೀರಿನಲ್ಲಿ ತೊಳೆಯಿರಿ. ವಾರಕ್ಕೆ ಎರಡರಿಂದ ಮೂರು  ಬಾರಿ ಈ ಫೇಸ್ ಪ್ಯಾಕ್ ಅನ್ನು ಹಾಕಿಕೊಂಡರೆ ನಿಮ್ಮ ತ್ವಚೆ ಕಾಂತಿಯುತವಾಗಿ ಹೊಳೆಯುತ್ತದೆ.

 

Edited By

Manjula M

Reported By

Manjula M

Comments