ನಿಟ್ಟುಸಿರೆಳೆದ ಖ್ಯಾತ ರಂಗಭೂಮಿ ಕಲಾವಿದ ಟಿ.ಎಸ್.ರಂಗಾ

09 Apr 2018 9:40 AM | General
396 Report

69 ವರ್ಷ ವಯಸ್ಸಿನ ಇವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ನರಳುತ್ತಿದ್ದು, ಭಾನುವಾರದಂದು ಬೆಳಿಗ್ಗೆ ಬೆಂಗಳೂರಿನ ಎನ.ಆರ್.ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಇವರು ತಮ್ಮ ಪತ್ನಿ ಅಶ್ವಿನಿ, ಮಗಳು ತನ್ವಿತಾ, ಅಳಿಯ ಹಾಗೂ ಅವರ ಅಭಿಮಾನಿಗಳನ್ನು, ಶಿಷ್ಯವೃಂದದವರನ್ನು ಅಗಲಿದ್ದಾರೆ.

ಭಾನುವಾರ ಸಣಜೆ ಬೆಂಗಳೂರಿನಲ್ಲಿ ಮೃತರ ಅಂತ್ಯಕ್ರಿಯೆ ನಡೆದಿದ್ದು, ಹಿರಿಯ ನಟ ಸುಂದರ್ ರಾಜ್, ನಿರ್ದೇಶಕ ಟಿ.ಎಸ್.ನಾಗಾಭರಣ ಸೇರಿದಂತೆ ಸಿನಿಮಾ ಕ್ಷೇತ್ರದ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದರು. ಟಿ ಎಸ್ ರಂಗ ಅವರು ಸ್ಯಾಂಡಲ್ ವುಡ್ ನಲ್ಲಿ 'ಗೀಜಗನ ಗೂಡು' ಹಾಗೂ 'ಸಾವಿತ್ರಿ' ಸಿನಿಮಾವನ್ನ ನಿರ್ದೇಶನ ಮಾಡಿದ್ದು, 'ಗೀಜಗನ ಗೂಡು' ಇವರ ನಿರ್ದೇಶನದಲ್ಲಿ ಮೂಡಿ ಬಂದ ಕನ್ನಡದ ಮೊದಲ ಚಿತ್ರ. ಬಾಲಿವುಡ್ ನಲ್ಲಿ 'ಗಿಧ್' ಎಂಬ ಚಿತ್ರವನ್ನ ಡೈರೆಕ್ಟ್ ಮಾಡಿ ನ್ಯಾಷನಲ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು. ಟಿ ಎಸ್ ನಾಗಾಭರಣ ಅವರು ನಿರ್ದೇಶನ ಮಾಡಿದ್ದ 'ಗ್ರಹಣ' ಚಿತ್ರಕ್ಕೆ ಚಿತ್ರಕಥೆ ಬರೆದು ಟಿ ಎಸ್ ರಂಗ ಅವರು ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ರಂಗಭೂಮಿಯಲ್ಲಿಯೂ ಟಿ ಎಸ್ ರಂಗ ಒಳ್ಳೆಯ ಹೆಸರು ಮಾಡಿದ್ದರು

Edited By

Shruthi G

Reported By

Madhu shree

Comments