ಈಕೆಯ ಸಾಧನೆ ಕೇಳುದ್ರೆ ಶಾಕ್ ಆಗ್ತೀರಾ..!

07 Apr 2018 1:06 PM | General
935 Report

ಸಾಧನೆ ಅನ್ನುವುದು ಯಾರ ಮನೆಯ ಸ್ವತ್ತು ಅಲ್ಲ.. ಯಾರು ಬೇಕಾದರೂ ಸಾಧನೆ ಮಾಡಬಹುದು. ಅದಕ್ಕೆ ವಯಸ್ಸಿನ ಮಿತಿಯೂ ಇಲ್ಲ, ಯಾವ ಅಡೆ ತಡೆಯೂ ಇಲ್ಲ.ನಾವು ಈಗ ಹೇಳುವ ಈಕೆಯ ಸಾಧನೆ ನಿಜಕ್ಕೂ ಜಗತ್ತೆ ಮೆಚ್ಚುವಂತದ್ದು.. ಆ ಸಾಧನೆಯ ಬಗ್ಗ ನೀವೆ ಒಮ್ಮೆ ಓದಿ.

24 ವರ್ಷದ ಸೋಫಿಯಾ ಎಂ ಜೋ ಹುಟ್ಟುತ್ತಲೆ ಶ್ರವಣ ಶಕ್ತಿ ಕಳೆದುಕೊಂಡಿದ್ದರು. ಜೊತೆಗೆ ಮಾತನ್ನು ಕೂಡ ದೇವರು ಕಿತ್ತುಕೊಂಡ. ಆದ್ರೆ ಇವರೆಡು ದೌರ್ಬಲ್ಯಗಳ ಮೆಟ್ಟಿನಿಂತ ಸೋಫಿಯಾ ಇವತ್ತು ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಿದ್ದಾರೆ.ದೇವರು ಶ್ರವಣ ಮತ್ತು ಮಾತಿನ ಶಕ್ತಿಯನ್ನು ಕಿತ್ತುಕೊಂಡ್ರು ಸೋಫಿಯಾ ಇವತ್ತು ತನ್ನ ಸಾಧನೆ ಮೂಲಕವೇ ಇತರರಿಗೆ ಮಾದರಿ ಆಗಿದ್ದಾರೆ. ಸೋಫಿಯಾ ಇವತ್ತು ಭಾರಿ ಬೇಡಿಕೆ ಇಟ್ಟುಕೊಂಡ ಮಾಡೆಲ್ ಮತ್ತು ಆಥ್ಲೀಟ್. ಅಂಥ್ಲೆಟಿಕ್ ಲೋಕದಲ್ಲಿ ಹಲವು ಬಾರಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ.3 ಬಾರಿ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಶಾಟ್‍ಪುಟ್ ಮತ್ತು ಡಿಸ್ಕ್‍ಸ್ ಥ್ರೋನಲ್ಲಿ ಪದಕ ವಿಜೇತರಾಗಿದ್ದಾರೆ. ಪ್ರತಿಭೆಯ ಗಣಿಯಾಗಿರುವ ಸೋಫಿಯಾ ಅದ್ಭುತ ಪೈಂಟರ್ ಮತ್ತು ಜ್ಯುವೆಲ್ಲರ್ ಡಿಸೈನರ್ ಅನ್ನೊದನ್ನ ಕೂಡ ಮರೆಯುವ ಹಾಗಿಲ್ಲ.ತಂದೆ ತಾಯಿ ಸೋಫಿಯಾರ ಪ್ರತಿಯೊಂದು ಹೆಜ್ಜೆಯಲ್ಲು ಸಾಥ್ ನೀಡಿ ಸಾಧನೆ ಮೆಟ್ಟಿಲು ಏರಲು ತಂದೆ ತಾಯಿ ಮೆಟ್ಟಿಲುಗಳಾದರು.

ಸೋಫಿಯಾ 2014 ರಲ್ಲಿ ಎಸ್ ಇಂಡಿಯಾ ಡೆಫ್ ಆಂಡ್ ಡಂಬ್ ಕಾಂಪಿಟೇಷನ್ 2014 ರ ಆವೃತ್ತಿಯಲ್ಲಿ ಮೊದಲ ರನ್ನರ್ ಆಪ್ ಆಗಿದ್ದಳು. ಆದಾದ ಮೇಲೆ ಪರಗ್ವೆಯಲ್ಲಿ ನಡೆದ ಮಿಸ್ ವಲ್ರ್ಡ್ ಡೆಫ್ ಅಂಡ್ ಡಂಬ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು.ಡ್ಯಾನ್ಸ್‍ನಲ್ಲು ಪಳಗಿರುವ ಸೋಫಿಯಾ ಬೆಸ್ಟ್ ವಿಷನ್ ಅನ್ನುವ ಸಿನೆಮಾದಲ್ಲಿ ಅಭಿನಯಿಸಿದ್ದಾಳೆ. ಅಷ್ಟೇ ಅಲ್ಲ ಕೇರಳ ರಾಜ್ಯದಿಂದ ಡ್ರೈವಿಂಗ್ ಲೈಸನ್ಸ್ ಪಡೆದಿರುವ ಮೊದಲ ಡೆಫ್ ಆಂಡ್ ಡಂಬ್ ಅನ್ನೋ ಖ್ಯಾತಿ ಕೂಡ ಪಡೆದುಕೊಂಡಿದ್ದಾರೆ. ಸಾಧನೆಗಳ ಮೇಲೆ ಸಾಧನೆ ಮಾಡಿರುವ ಸೋಫಿಯಾ ಭವಿಷ್ಯದಲ್ಲಿ ಕಾರ್ ರೇಸರ್ ಆಗುವ ಕನಸು ಕೂಡ ಕಾಣುತ್ತಿದ್ದಾರೆ. ಸಾಧನೆ ಮಾಡಲು ಯಾವುದರ ಅಂಗು ಬೇಡ ಅನ್ನುವುದಕ್ಕೆ ಸೋಪಿಯಾನೆ ಸಾಕ್ಷಿ.

Edited By

Manjula M

Reported By

Manjula M

Comments