ಜ್ಯೂಸ್ ಜೊತೆ ಮಾತ್ರೆ ತಗೋತೀರಾ..!ಅದಕ್ಕೂ ಮೊದಲು ಈ ಲೇಖನ ಓದಿ

07 Apr 2018 12:27 PM | General
498 Report

ಕೆಲವೊಂದು ಹಣ್ಣುಗಳನ್ನು ತೆಗೆದುಕೊಂಡ ಮೇಲೆ ಮಾತ್ರೆಗಳನ್ನು ಸೇವಿಸಬಾರದು..ಆರೋಗ್ಯಕ್ಕಾಗಿ ಮಾತ್ರೆಗಳನ್ನು ನಿತ್ಯವೂ ತೆಗೆದುಕೊಳ್ಳುವುದು ಕೆಲವರಿಗೆ ಅನಿವಾರ್ಯವಾಗಿರುತ್ತದೆ. ಅಂತಹ ಮಾತ್ರೆಗಳನ್ನು ನಿತ್ಯವೂ ನೀರಿನ ಬದಲು ಹಣ್ಣಿನ ರಸದ ಜೊತೆ ತೆಗೆದುಕೊಳ್ಳಲು ಅಭ್ಯಾಸ ಮಾಡಿಕೊಂಡಿರುತ್ತಾರೆ.. ಅಂತಹವರಿಗೆ ಒಂದಿಷ್ಟು ಎಚ್ಚರಿಕೆಯ ಟಿಪ್ಸ್ ಇಲ್ಲಿದೆ.

ಕೆಲವರು ಮಾತ್ರೆಗಳನ್ನು ತೆಗೆದುಕೊಳ್ಳುವಾಗ ನೀರಿನ ಬದಲು ಹಣ್ಣಿನ ರಸದ ಜೊತೆ ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಕೆಲವೊಂದು ಅಧ್ಯಯನದ ಮೂಲಕ ತಿಳಿದುಕೊಳ್ಳಬಹುದು. ಕೆಲವೊಂದು ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದುಆದರೆ ಈ ಅಭಾಸ್ಯದಿಂದ ಕೆಲವು ವ್ಯತಿರಿಕ್ತ ಪರಿಣಾಮಗಳನ್ನು ಸಹ ಉಂಟಾಗುತ್ತವೆ. ಈ ಬಗ್ಗೆ ನಡೆದ ಸಂಶೋಧನೆಯಲ್ಲಿ ಹಲವಾರು ಹಣ್ಣಿನ ರಸಗಳ ಪರಿಣಾಮವನ್ನು ಅಭ್ಯಸಿಸಿ ಒಟ್ಟು ಐದು ಬಗೆಯ ಹಣ್ಣುಗಳ ರಸವನ್ನು ಸೇವಿಸುವುದರಿಂದ ಮಾರಕ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ನೀರು ಮತ್ತು ಹಣ್ಣಿನ ಜ್ಯೂಸ್ ಇವೆರಡರಲ್ಲಿ ಯಾರು ಹಿತವರು ಎಂಬ ಪ್ರಶ್ನೆ ಈಗಾಗಲೇ ನಿಮ್ಮಲ್ಲಿ ಹುಟ್ಟಿರಬಹುದು… ಏಕೆಂದರೆ ಈ ಹಣ್ಣುಗಳ ರಸಗಳೇ ನಮ್ಮ ಜೀರ್ಣಾಂಗಗಳಲ್ಲಿ ಕರಗಿದ ಬಳಿಕ ಔಷಧಿಯ ಕೆಲಸ ಮಾಡುತ್ತಿದ್ದು, ಮಾತ್ರೆಯಲ್ಲಿನ ರಾಸಾಯನಿಕಗಳು ಇದರೊಂದಿಗೆ ಸೇರಿದಾಗ ಎರಡು ದ್ರವಗಳು ಸಂಯೋಜನೆಗೊಂಡು ಬೇರೆಯ ರಾಸಾಯನಿಕವಾಗಿ ಪರಿಣಮಿಸಿ ಅಗತ್ಯವಾದ ಪರಿಣಾಮವನ್ನು ಒದಗಿಸುವ ಬದಲು ಬೇರೆಯೇ ಪರಿಣಾಮವನ್ನು ಒದಗಿಸಿಬಿಡಬಹುದು..

ಹಾಗಾದ್ರೆ ಆ ಜ್ಯೂಸ್ ಯಾವುವು ಅಂತ ಯೋಚನೆ ಮಾಡುತ್ತಿದ್ದೀರಾ.. ಸೇಬು ಹಣ್ಣಿನ ರಸವು ಕೂಡ ಈ ಲೀಸ್ಟ್‍ಗೆ ಸೇರಿಕೊಳ್ಳುತ್ತದೆ… ವಿಶೇಷವಾಗಿ ವಾರ್ಫಾರಿನ್ ಔಷದಿಯನ್ನು ಸೇವಿಸುವ ರೋಗಿಗಳು ಸೇಬಿನ ರಸವನ್ನೂ ಸೇವಿಸಿದಾಗ ಔಷಧಿಯ ಪರಿಣಾಮ ಆಗದೆ ಇರುವುದು ಕಂಡುಬಂದಿದೆ..ಅದರಲ್ಲೂ ಕ್ಯಾನ್ಸರ್‍ನ ಚಿಕಿತ್ಸೆಯಾದ ಖೀಮೋಥೆರಪಿ ಅಥವಾ ಅಟೆನಲಾಲ್ ಎಂಬ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಔಷಧಿಯನ್ನು ಸೇವಿಸುತ್ತಿದ್ದರೆ ಚಕ್ಕೋತ ಅಥವಾ ಸೇಬಿನ ರಸವನ್ನು ಕುಡಿಯದೆ ಇರುವಂತೆ ನೋಡಿಕೊಳ್ಳಿ..

ಅನಾನಸ್ ಜ್ಯೂಸ್:-ಒಂದು ವೇಳೆ ನೀವು ರಕ್ತವನ್ನು ತಿಳಿಗೊಳಿಸುವ ಔಷಧಿಯನ್ನು ಸೇವಿಸುತ್ತಿದ್ದರೆ ಅನಾನಸ್ ಹಣ್ಣನ್ನು ಮುಟ್ಟುವುದಕ್ಕೆ ಹೋಗಲೇಬೇಡಿ.. ಏಕೆಂದರೆ ಇದರಲ್ಲಿರುವ ಬ್ರೋಮಿಲೈನ್ ಎಂಬ ಪೋಷಕಾಂಶ ಈ ಔಷಧಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಬ್ರೋಮಿಲೈನ್ ಆಂಟಿ ಬಯಾಟಿಕ್ ಮತ್ತು ನೋವು ನಿವಾರಕ ಔಷಧಿಗಳೊಂದಿಗೂ ಸಂಯೋಜನೆಗೊಂಡು ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ.ಆದ್ದರಿಂದ ವೈದ್ಯರ ಅನುಮತಿಯ ಹೊರತು ಕಿತ್ತಳೆ ರಸದ ಸೇವನೆ ಸಲ್ಲದು.. ಹೀಗಾಗಿ ಯಾವುದೇ ಹಣ್ಣುಗಳ ರಸವನ್ನು ತೆಗೆದುಕೊಳ್ಳುವಾಗ ವೈದ್ಯರ ಮೊರೆ ಹೋಗುವುದು ಉತ್ತಮ.

Edited By

Manjula M

Reported By

Manjula M

Comments