ವರ್ಗಾವಣೆಗೆ ಕಾತುರದಿಂದಿರುವ ಶಿಕ್ಷಕರಿಗೊಂದು ಮಾಹಿತಿ..!

07 Apr 2018 10:25 AM | General
410 Report

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ವೇಳೆಗೆ ಶಿಕ್ಷಕರ ವರ್ಗಾವಣೆ ಪೂರ್ಣಗೊಳ್ಳಬೇಕಿತ್ತು. ವಿಧಾನಸಭೆ ಚುನಾವಣೆ ಸೇರಿದಂತೆ ನಾನಾ ಕಾರಣಗಳಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಿದೆ.

ವರ್ಗಾವಣೆಗಾಗಿ ಶಿಕ್ಷಕರು ಕಾಯುತ್ತಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣವಾಗಿದ್ದರೆ, ಚುನಾವಣೆ ಕರ್ತವ್ಯ ಮಗಿದ ನಂತರ ವರ್ಗಾವಣೆಯಾದ ಶಿಕ್ಷಕರು ಕರ್ತವ್ಯದಿಂದ ಬಿಡುಗಡೆ ಹೊಂದಿ, ನಿಯೋಜಿತ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗಬೇಕಿತ್ತು. ಚುನಾವಣೆ ನೀತಿ ಸಂಹಿತೆ ಕಾರಣದಿಂದ ಶಿಕ್ಷಕರ ವರ್ಗಾವಣೆ ವಿಳಂಬವಾಗಿದ್ದು, ವರ್ಗಾವಣೆ ಪ್ರಕ್ರಿಯೆ ಮುಂದುವರೆಸುವ ಕುರಿತು ಶಿಕ್ಷಣ ಇಲಾಖೆಯಿಂದ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆಯಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿಗೆ ವರ್ಗಾವಣೆ ಮಾಹಿತಿ ತಿಳಿಸಿ ಅನುಮೋದನೆ ಪಡೆಯಲು ಚುನಾವಣಾ ಆಯೋಗದಿಂದ ಸೂಚಿಸಲಾಗಿದೆ. ಚುನಾವಣೆ ಪ್ರಕ್ರಿಯೆ ಪೂರ್ಣವಾದ ಬಳಿಕ ಕೌನ್ಸೆಲಿಂಗ್ ನಡೆಸಿದಲ್ಲಿ ವರ್ಗಾವಣೆ ವಿಳಂಬವಾಗಲಿದೆ. ಹಾಗಾಗಿ ಕೂಡಲೇ ಕೌನ್ಸೆಲಿಂಗ್ ನಡೆಸಬೇಕೆಂಬುದು ಶಿಕ್ಷಕರ ಅಭಿಪ್ರಾಯವಾಗಿದೆ.

 

Edited By

Shruthi G

Reported By

Madhu shree

Comments