ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಪ್ರಕಟಿಸಿದ ಶಿಕ್ಷಣ ಸಚಿವರು

06 Apr 2018 8:42 PM | General
1751 Report

ಬೆಂಗಳೂರು:- ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದಿದ್ದು ವಿದ್ಯಾರ್ಥಿಗಳು ಪಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಖುಷಿಯಿಂದ ಕಾಯುತ್ತಿದ್ದಾರೆ,ಇನ್ನೂ ಕೆಲವರು ಏನಾಗೊತ್ತೋ ಅಂತ ಭಯದಲ್ಲಿದ್ದಾರೆ.

ಈಗ ಭಯಕ್ಕೆ ತೆರೆ ಎಳೆದಂತೆ ಆಗಿದೆ. ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವ ತನ್ವೀರ್ ಸೇಠ್ ಮೇ 7 ರಂದು ಇಂಟರ್ ನೆಟ್ ನಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶವನ್ನು ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ. ಪರೀಕ್ಷೆ ನಡೆದ ರೀತಿಯ ಬಗ್ಗೆ ಸಮಾಧಾನವನ್ನು ವ್ಯಕ್ತ ಪಡಿಸಿದರು. ಮೇ 7 ರಂದು ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಮೇ 8 ಕ್ಕೆ ಶಾಲೆಗಳಲ್ಲಿ ಪ್ರಕಟ ಮಾಡಲಾಗುತ್ತದೆ.


ಈ ಬಾರಿ ಪರೀಕ್ಷೆಯು ಶಿಸ್ತುಬದ್ಧವಾಗಿ ನಡೆದಿದ್ದು, ಮುಂದಿನ ಬಾರಿ ಮಂಡಳಿ ವತಿಯಿಂದಲೇ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳನ್ನು ನಡೆಸುವ ಉದ್ದೇಶ ಇದೆ ಎಂದು ಈ ಸಮಯದಲ್ಲಿ ತಿಳಿಸಿದರು 

Edited By

Manjula M

Reported By

Manjula M

Comments

Lakshmeesha KL ಈ ದಿನಾಂಕ ಬದಲಾವಣೆ ಆಗುವುದಿಲ್ಲವೇ......