ಯುವಕ ಮೋದಿಗೆ ರಕ್ತದಲ್ಲಿ ಬರೆದ ಪತ್ರದಲ್ಲಿ ಏನಿತ್ತು?

06 Apr 2018 11:02 AM | General
404 Report

ವಿಜಯಪುರ:- ವಿದ್ಯಾಭ್ಯಾಸ ಅನ್ನೋದು ಎಲ್ಲರಿಗೂ ಕೂಡ ತುಂಬ ಮುಖ್ಯ.ಇತ್ತಿಚಿಗಂತೂ ಎಲ್ಲ ಮಕ್ಕಳಿಗೂ ಕೂಡ ವಿದ್ಯಾಭ್ಯಾಸ ಸಿಗಲಿ ಅಂತ ಸರ್ಕಾರ ಸಾಕಷ್ಟು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.

ನಮ್ಮ ಪಟ್ಟಣಕ್ಕೆ ಸರ್ಕಾರಿ  ಪ್ರೌಢಶಾಲೆ ಬೇಕು ಎಂದು ಯುವಕನೊಬ್ಬ ಪ್ರಧಾನನಿಯವರಿಗೆ ಪತ್ರ ಬರೆದಿದ್ದಾನೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ನಿವಾಸಿಯಾದ  ವಿಜಯರಂಜನ ಜೋಶಿ ರಕ್ತದಲ್ಲಿ ಮೋದಿಜೀಯವರಿಗೆ ರಕ್ತದಲ್ಲಿ ಪತ್ರ ಬರೆದು ಅಚ್ಚರಿಯನ್ನು  ಮೂಡಿಸಿದ್ದಾನೆ . ಸುಮಾರು  ಹತ್ತು ಹದಿನೈದು ಸಾವಿರ ಜನಸಂಖ್ಯೆ ಇರುವ ನಾಲತವಾಡ ಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೆ, ಕಾಲೇಜುಗಳು ಯಾವುದೂ ಇಲ್ಲ. ಹಾಗಾಗಿ ನಮಗೆ ಒಂದು ಸರ್ಕಾರಿ  ಪ್ರೌಢಶಾಲೆಯನ್ನು ಕಟ್ಟಿಸಿಕೊಡಿ ಎಂದಿದ್ದಾನೆ. ಅನೇಕ ಬಾರಿ ಶಿಕ್ಷಣ ಇಲಾಖೆಗೆ ಶಿಕ್ಷಣ ಸಚಿವರಿಗೆ ಪತ್ರ ಬರೆದರೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸುಮಾರು ಹತ್ತಾರು ಹಳ್ಳಿಗಳಿಂದ ದೂರ ಹೋಗಿ ಓದಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಶಾಲೆ ಇಲ್ಲದೆ ಕಲಿಯಲು ಸಾಧ್ಯವಾಗುತ್ತಿಲ್ಲ. ನೀವಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಿರಿ ಎಂದು ಬೇಸರದಿಂದಲೇ ವಿಜಯರಂಜನ ಜೋಶಿ ರಕ್ತದಿಂದ ಪತ್ರವನ್ನು ಬರೆದಿದ್ದಾನೆ.

 

Edited By

Manjula M

Reported By

Manjula M

Comments