ವೋಟರ್ ಐಡಿ ಪಡೆಯಲು ‘ಮಿಂಚಿನ ನೋಂದಣಿ’ ಅಭಿಯಾನ..! ಇಲ್ಲಿದೆ ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್.

05 Apr 2018 2:50 PM | General
1559 Report

ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಅಭ್ಯರ್ಥಿಗಳು ಮತ ಪ್ರಚಾರಕ್ಕೆ ನಿಂತಿದ್ದರೆ ಮತ್ತೊಂದು ಕಡೆ ಮತದಾರರು ಯಾವ ಅಭ್ಯರ್ಥಿಯನ್ನು ಯಾಕೆ ಮಾಡುವುದು ಅಂತ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ನಮ್ಮ ಒಂದೊಂದು ಮತ ತುಂಬಾ ಅಮೂಲ್ಯವಾದದ್ದು. ಆ ಒಂದು ಮತಕ್ಕೆ ನಮ್ಮ ರಾಜ್ಯವನ್ನು ಆಳುವಷ್ಟು ಬೆಲೆಯಿದೆ ಜೊತೆಗೆ ಶಕ್ತಿಯಿದೆ.ಹಾಗಾಗಿ ಆ ಅಮೂಲ್ಯವಾದ ಮತವನ್ನು ಒಬ್ಬ ಒಳ್ಳೆ ಅಭ್ಯರ್ಥಿಗೆ ಹಾಕುವುದು ಉತ್ತಮ. ಆದರೆ ನಾವು ಮತ ಹಾಕಬೇಕು ಅಂದರೆ ಮತದಾನದ ಗುರುತಿನ ಚೀಟಿ ತುಂಬಾ ಮುಖ್ಯ. ಆದರೆ ಕೆಲವರ ಬಳಿ ಈ ಗುರುತಿನ ಚೀಟಿ ಇರುವುದಿಲ್ಲ. ಹೇಗೆ? ಎಲ್ಲಿ ಈ ಗುರುತಿನ ಚೀಟಿಯನ್ನು ಪಡೆಯುವುದು ಅಂತ ಯೋಚನೆ ಮಾಡುತ್ತಿದ್ದಾರಾ..? ಈ ಗುರುತಿನ ಚೀಟಿ ಪಡೆಯುವುದು ಹೇಗೆ, ತಿದ್ದು ಪಡಿ,ವರ್ಗಾವಣೆ ಹೇಗೆ ಅಂತ ಹೇಳ್ತೀವಿ.. ಮುಂದೆ ಓದಿ

ಮುಂಬರುವ ಚುನಾನಣೆಯಲ್ಲಿ ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು,ಅಥವಾ ವರ್ಗಾವಣೆ,ತಿದ್ದುಪಡಿಗೆ ಚುನಾವಣಾ ಆಯೋಗ ಮತ್ತು ಬಿ.ಬಿ.ಎಂ.ಪಿಯು ಏಪ್ರಿಲ್ 8 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ 8278 ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದೆ.ಅಷ್ಟೆ ಅಲ್ಲದೆ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ಏ.14 ರವರೆಗೆ ಸಮಯಾವಕಾಶವನ್ನು ನೀಡಿದೆ. ಇದೇ ಹಿನ್ನಲೆಯಲ್ಲಿ ಏಪ್ರಿಲ್ 8 ರಂದು ಮಿಂಚಿನ ನೋಂದಣಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಹೆಸರನ್ನ ಸೇರ್ಪಡೆ ಮಾಡುವುದು. ವರ್ಗಾವಣೆ, ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು.

ಮೊದಲ ಬಾರಿಗೆ ಹೆಸರನ್ನು ಸೇರಿಸಲು ಯಾವೆಲ್ಲಾ ದಾಖಲೆಗಳು ಬೇಕು ಎನ್ನುವ ಮಾಹಿತಿ ಈ ಕೆಳಕಂಡಂತಿದೆ.

  1. 18 ವರ್ಷ ಪೂರೈಸಿರಬೇಕು
  2. 6 ತಿಂಗಳಿನಿಂದ ಸತತವಾಗಿ ಒಂದೆ ಜಾಗದಲ್ಲಿ ನೆಲಸಿರಬೇಕು.
  3. ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
  4. ವಾಸ ದೃಢೀಕರಣ ಪ್ರತಿ
  5. ಚಾಲನ ಪರವಾನಗಿ,ಪಡಿತರ ಚೀಟಿ, ಬಾಡಿಗೆ ಕರಾರು ಪತ್ರ,ಗ್ಯಾಸ್ ಸ್ವೀಕೃತಿ ಪತ್ರ ,ವಿದ್ಯುತ್ ಬಿಲ್ ಪಾವತಿ ಪ್ರತಿ, ಆಧಾರ್, ಬ್ಯಾಂಕ್ ಪಾಸ್ ಬುಕ್ ಇವುಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಹೋಗಬೇಕು.

ಒಂದು ವೇಳೆ ಮತ ಪಟ್ಟಿಯಲ್ಲಿ ಹೆಸರು ಇಲ್ಲ ಅಂದ್ರೆ  ಹೊಸದಾಗಿ ನಮೂನೆ-6 ರಲ್ಲಿ ಹೆಸರು ಸೇರ್ಪಡೆಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯೊಂದಿಗೆ ಮತದಾರರ ವೋಟರ್ ಐಡಿಯನ್ನು ಸೇರಿಸಬೇಕು. ಒಂದು ವೇಳೆ ಗುರುತಿನ ಐಡಿ ಕಳೆದು ಹೋಗಿದ್ದರೆ ಮೊಬೈಲ್ ನಂಬರ್, ತಂದೆ ತಾಯಿ ಯ ಹೆಸರನ್ನು ನಮೂದಿಸಿದರೆ ಗುರುತಿನ ಚೀಟಿಯ ಸಂಖ್ಯೆ ಲಭ್ಯವಾಗುತ್ತದೆ. ಒಂದು ವೇಳೆ ನೀವು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  ಮನೆಯನ್ನು ಬದಲಿಸಿದ್ದರೆ  ನಮೂನೆ 8 ಎ ಅರ್ಜಿಯನ್ನು ಸಲ್ಲಿಸಬೇಕು.  ಬಾಡಿಗೆ ಕರಾರು ಪತ್ರ ಅಥವಾ ಯಾವುದೇ ವಾಸಸ್ಥಳದ ದಾಖಲೆಗಳನ್ನು ಸಲ್ಲಿಸಿ ವಿಳಾಸವನ್ನು ಬದಲಾವಣೆ ಮಾಡಿಕೊಳ್ಳಬಹುದು. ವಿವಾಹದ ನಂತರ ಗಂಡನ ಮನೆ ಸೇರಿರುವ ಹೆಣ್ಣು ಮಕ್ಕಳು ನಮೂನೆ 6 ಅರ್ಜಿಯನ್ನು ಭರ್ತಿ ಮಾಡಿ ಅದರ ಜೊತೆಗೆ ಪತಿಯ ಮತದಾರರ ಗುರುತಿನ ಚೀಟಿ, ಮದುವೆ ಆಮಂತ್ರಣ ಪತ್ರಿಕೆ ಯನ್ನು ನೀಡಿ ಹೆಸರನ್ನು ಸೇರಿಸಬಹುದು.

ಯಾವುದೇ ದಾಖಲೆಗಳಿಲ್ಲದೆ ಮತದಾನದ ಗುರುತಿನ ಚೀಟಿಯನ್ನು ಪಡೆಯುವುದು ಹೇಗೆ ಎಂಬ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿರುತ್ತದೆ. ಅಂತಹವರು ಹೊಸದಾಗಿ ಹೆಸರನ್ನು ಸೇರಿಸಲು ನಮೂನೆ 6 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಶಾಲಾ ಕಾಲೇಜುಗಳು ನೀಡಿರುವ ಗುರುತಿನ ಚೀಟಿ ಮತ್ತು ಭಾವಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ನಿಮ್ಮ ಮತದಾನದ ಗುರುತಿನ ಚೀಟಿಯನ್ನು ಈ ಮೇಲಿನ ಮಾಹಿತಿಯ ಮುಖಾಂತರ ಪಡೆದುಕೊಳ್ಳಿ.

Edited By

Manjula M

Reported By

Manjula M

Comments