ನಿರುದ್ಯೋಗಿಗಳಿಗೆ ಈ ಯೋಜನೆ ಯೂಸ್ ಫುಲ್ ಆಗಿದ್ಯಾ?

03 Apr 2018 3:44 PM | General
1646 Report

ಭಾರತಾದ್ಯಂತ ಲಕ್ಷಾಂತರ ಮಂದಿ ನಾನಾ ಪದವಿ, ನಾನಾ ವೃತ್ತಿಪರ ಕೋರ್ಸ್‍ಗಳನ್ನು ಮಾಡಿಕೊಂಡು ನೂರಾರು ಕನಸುಗಳನ್ನು ಕಟ್ಟಿಕೊಂಡು ಬದುಕುವ ಆಸೆ ಹೊಂದಿರುತ್ತಾರೆ. ಆದರೆ ಅಂದಾಜು 138 ಕೋಟಿ ಜನಸಂಖ್ಯೆ ಇರುವ ನಮ್ಮ ರಾಷ್ಟ್ರದಲ್ಲಿ ಜನಸಂಖ್ಯೆ ಹೆಚ್ಚಾದಂತೆ ನಿರುದ್ಯೋಗ ಸಮಸ್ಯೆಯು ಕೂಡ ಹೆಚ್ಚಾಗುತ್ತಿದೆ ಅಂತಾನೇ ಹೇಳಬಹುದು.

ನಿತ್ಯವೂ ಯುವಕರಿಗೆ ಕೆಲಸ ಹುಡುಕುವುದೇ ಕೆಲಸವಾಗಿ ಹೋಗಿದೆ. ಯುವಜನತೆಗೆ ಕೆಲಸ ಕೊಡಬೇಕಾದ ಸರ್ಕಾರ ಕಣ್ಣುಮುಚ್ಚಿಕೊಂಡು ಕುಳಿತ್ತಿದೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಅಭಿವೃದ್ಧಿಗೆ ತೊಡಕಾಗಿದೆ. ಮುಂದುವರೆದ ರಾಷ್ಟ್ರವಾಗಿ ಜನರಿಗೆ ಕೆಲಸ ನೀಡದೆ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ.

ಉದ್ಯೋಗದ ಮಾರುಕಟ್ಟೆಗೆ ದಿನ ನಿತ್ಯವೂ 30000 ಜನರು ಬರುತ್ತಾರೆ. ಇವರಲ್ಲಿ ಕೇವಲ 450 ಜನರಿಗಷ್ಟೇ ಉದ್ಯೋಗ ಸಿಗುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಯುವಕರನ್ನು ಅತೀಯಾಗಿ ಕಾಡುತ್ತಿರುವ ಸಮಸ್ಯೆಯೇ ಕೆಲಸ. ಕೆಲಸ. ಕಷ್ಟು ಪಟ್ಟು ಓದಿ ಪಡೆದುಕೊಂಡ ಪದವಿ, ಪ್ರಮಾಣ ಪತ್ರ, ಅಂಕಪಟ್ಟಿಯನ್ನು ಕೈಯಲ್ಲಿ ಹಿಡಿದು ಉದ್ಯೋಗದ ಹುಡುಕಾಟದಲ್ಲಿ ಲಕ್ಷಾಂತರ ಮಂದಿ ತಮ್ಮ ಜೀವನವನ್ನು ಸವೆಸುತ್ತಿದ್ದಾರೆ.

ಈ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುದ್ರಾ ಯೋಜನೆಗೆ ಅಡಿಪಾಯ ಹಾಕಿ ಜಾರಿಗೆ ತಂದಿತು. ಇದರ ಉದ್ದೇಶ ಸರ್ವಶಕ್ತರಿಗೂ ಉದ್ಯೋಗ ಕಲ್ಪಿಸುವ ಭರವಸರೆ ನೀಡಿತು.. ಉದ್ಯೋಗ ಸೃಷ್ಟಿಯಲ್ಲ ಆದರೆ ಯುವಕ ಯುವತಿಯರಿಗೆ ಸ್ವ ಉದ್ಯೋಗ ಆರಂಭಿಸುವ ಅವಕಾಶವನ್ನೂ ಸೃಷ್ಠಿಸುವುದು. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕೇಂದ್ರ ಸರ್ಕಾರ 2015 ರಲ್ಲಿ ಯೋಜನೆಗೆ ಚಾಲನೆ ನೀಡಿತು.

ಈ ಹಿಂದೆ ಇದ್ದ ಸರಕಾರಗಳು ಕೂಡ ನಿರುದ್ಯೋಗಿಗಳಿಗೆ ಸಾಲ ನೀಡಿ ಗುಡಿ ಕೈಗಾರಿಕೆಗಳನ್ನು ಆರಂಭಿಸಲು, ಉದ್ಯಮಿಗಳಿಗೆ ಉತ್ತೇಜನ ನೀಡುವ ಪ್ರಕ್ರಿಯೆ ನಡೆಯಿತು. ಇದು ಯಾವ ಕಾರಣಕ್ಕೊ ಈ ಯೋಜನೆಗಳು ಯಶಸ್ವಿಯಾಗಲಿಲ್ಲ.

2004-05 ರಿಂದ 2009 -10 ವರರೆಗೆ 0.7% ಉದ್ಯೋಗದಲ್ಲಿ ವಾರ್ಷಿಕವಾಗಿ ಹೆಚ್ಚಳವಾಗಿತ್ತು. ನಿರುದ್ಯೋಗ ಸಮಸ್ಯೆಯಿಂದ ಒದ್ದಾಡುತ್ತಿದ್ದ ಯುವಕ ಯುವತಿಯರಿಗೆ ಕೆಲಸ ಸಿಕ್ಕಿತು. 2009 -10 ರಿಂದ 2011-12 0.4% ನಷ್ಟು ಮತ್ತಷ್ಟು ಉದ್ಯೋಗ ಸೃಷ್ಟಿಯಾಯಿತು.

ಆದರೆ 2013 – 14 ರಿಂದ 2015 – 16 -4% ನಷ್ಟು ಗಣನೀಯವಾಗಿ ಉದ್ಯೋಗ ಕ್ಷೀಣಿಸಿದೆ. ಪ್ರತಿ ವರ್ಷ 0.7% ರಿಂದ 0.4% ರವರೆಗೆ ಉದ್ಯೋಗ ಹೆಚ್ಚಳವಾಗಿದ್ದು 2013 -14 ನೇ ಸಾಲಿನಲ್ಲಿ – 4% ನಷ್ಟು ಕಡಿಮೆಯಾಗಿದೆ. ಇನ್ನೂ ಭಾರತದಲ್ಲಿ ಜನಸಂಖ್ಯೆ 1.2 ರಿಂದ 1.3 ರವರೆಗೆ ಹೆಚ್ಚುತ್ತಲೆ. 2013 -16 ರ ಮಧ್ಯೆ ಸ್ವತಂತ್ರ ಭಾರತದಲ್ಲಿ ಮೊದಲ ಸಲ ಹೆಚ್ಚಾಗಿದ್ದ ಉದ್ಯೋಗ ಸಮಸ್ಯೆ ಕಡಿಮೆ ಆಗುತ್ತಾ ಬಂದಿದೆ.

ಮೂರು ವರ್ಷದಲ್ಲಿ ಹೆಚ್ಚಿದ ನಿರುದ್ಯೋಗಗಳ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಲ್ಲಿ ಸರ್ಕಾರ ಹಲವಾರು ಯೋಜನಗಳನ್ನು ಕೈಗೊಂಡಿದೆ. ಶಿಕ್ಷಣಕ್ಕೆ ತಕ್ಕಂತೆ ಕೆಲಸ ಹುಡುಕುವು ಸ್ವಲ್ಪ ಕಷ್ಟವಾದರೂ ಸಿಕ್ಕ ಕೆಲಸ ಮಾಡುವುದು ಅನಿವಾರ್ಯ. ಸರ್ಕಾರ ಯಾವುದೇ ರೀತಿಯ ಯೋಜನೆಗಳನ್ನು ತಂದರೂ ಕೂಡ ನಮ್ಮ ಯುವ ಜನತೆ ದುಡಿಯುವ ನಿರ್ಧಾರ ಮಾಡಬೇಕು ಅಷ್ಟೆ.

Edited By

Shruthi G

Reported By

Manjula M

Comments