ಲಾಲ್‌ಬಾಗ್‌ಗೆ ಪರ್ಫ್ಯೂಮ್ ಹಾಕಿಕೊಂಡು ಹೋಗುತ್ತಿದ್ದೀರಾ.. ಹಾಗಾದ್ರೆ ಸ್ವಲ್ಪ ವೇಟ್  ಮಾಡಿ..?    

03 Apr 2018 12:16 PM | General
566 Report

ಬೆಂಗಳೂರು:- ಬೆಂಗಳೂರಿನಲ್ಲಿ ಜೇನು ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಹಾಗೇಯೆ ಇದೆ. ಅದೇ ರೀತಿ ಲಾಲ್ ಬಾಗ್ ನಲ್ಲೂ ಕೂಡ ಮಕ್ಕಳು ಬಲಿಯಾಗಿರುವ ಉದಾಹರಣೆಗಳಿವೆ. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅಂತಹ ಘಟನೆಗಳು ನಡೆಯದಂತೆ ಅಧಿಕಾರಿಗಳು ಹೊಸದೊಂದು ಉಪಾಯ ಮಾಡಿದ್ದಾರೆ. 

ಲಾಲ್ ಬಾಗ್ ಗೆ ಹೋಗುವವರು ಇನ್ನು ಮುಂದೆ ಹೆಚ್ಚು ಪರಿಮಳ ಬೀರುವ ಪರ್ಫ್ಯೂಮ್ಗಳನ್ನು ಹಾಕಿಕೊಂಡು ಹೋಗುವಂತಿಲ್ಲ. ಜೀನುನೊಣಗಳ ದಾಳಿಯನ್ನು ತಪ್ಪಿಸಲು ತೋಟಗಾರಿಕೆ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ. ಲಾಲ್‌ಬಾಗ್‌ನಲ್ಲಿ ಸಾಕಷ್ಟು ಹೂವುಗಳು ಅರಳಿರುವುದರಿಂದ ಮಕರಂದ ಹೀರಲು ಜೇನು ನೊಣಗಳು ಮರಗಳಲ್ಲಿಯೇ ಜೇನು ಕಟ್ಟಿಕೊಂಡಿದೆ. ಉದ್ಯಾನದಲ್ಲಿ ಮಕರಂದ ಹೀರಲು ಸಂಚರಿಸುತ್ತಿರುವ ಜೇನು ನೊಣಗಳು ಮಳೆಗಾಲಕ್ಕೆ ಆಹಾರ ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯದಲ್ಲಿ ನಿರತವಾಗಿವೆ. ಅದರಿಂದಾಗಿ ಕಪ್ಪು ಬಟ್ಟೆ ಹಾಗೂ ಸುಗಂಧ ದ್ರವ್ಯವನ್ನು ಆಕರ್ಷಿಸುತ್ತದೆ. ಇದರಿಂದ ಎಲ್ಲರಿಗೂ ಕೂಡ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.ಬೇಸಿಗೆ ರಜೆಯಾಗಿರುವುದರಿಂದ ದಿನಕ್ಕೆ ಸಾವಿರಾರು ಮಂದಿ ಮಕ್ಕಳು ಪೋಷಕರೊಂದಿಗೆ ಭೇಟಿ ನೀಡುತ್ತಾರೆ. ಹೆಚ್ಚು ಜನಸಂದಣಿ ನಡುವೆ ಗಾಢ ಪರ್ಫ್ಯೂಮ್ ಬಳಸಿದವರು ನಡೆದರೆ ಆಗ ಜೇನು ನೊಣಗಳು ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಈ ಎರಡನ್ನೂ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಮುಂದೆ ಲಾಲ್ ಬಾಗ್ ಹೋಗುವ ಮುನ್ನ ಇದರ ಬಗ್ಗೆ ಎಚ್ಚರ ವಹಿಸಿ.

Edited By

Shruthi G

Reported By

Shruthi G

Comments