ಈ ವ್ಯಕ್ತಿ ಒಂದು ಬಾರಿಯೂ ಕೂಡ ಹೆಣ್ಣನ್ನು ನೋಡೆ ಇಲ್ಲ…! ಅಚ್ಚರಿ ಅನಿಸಿದರೂ ನಿಜ

02 Apr 2018 12:49 PM | General
2100 Report

ನಾವು ಈಗ ಹೇಳೋ ಕಥೆಯನ್ನು ನೀವು ಓದಿದರೆ ನಿಜಕ್ಕೂ ಆಶ್ಚರ್ಯದ ಜೊತೆಗೆ ಒಂದು ಸಲ ಮೂಗಿನ ಮೇಲೆ ಕೈ ಇಟ್ಟುಕೊಳ್ಳುತ್ತಿರಾ.. ಆದರೆ ನಾವು ಈಗ ಹೇಳೋ ವಿಷಯ ನಿಜಕ್ಕೂ ಕೂಡ ನಿಜ. ಈ ಪುರುಷ  ಈಗ ಬದುಕಿಲ್ಲ.. ಆದರೆ ಬದುಕಿದ್ದ 82 ವರ್ಷಗಳ ಅವಧಿಯಲ್ಲಿಯೂ ಕೂಡ  ಈತ ಹೆಣ್ಣನ್ನು ನೋಡೆ ಇಲ್ಲ ಎಂಬುದು ಕುತೂಹಲ.

ಗಂಡು ಹೆಣ್ಣು ಪ್ರಕೃತಿ ನಿಯಮ ಅನ್ನೋದು ತಿಳಿದೆ ಇರಲಿಲ್ಲ. ಕೇವಲ ಈ ಪ್ರಪಂಚದಲ್ಲಿ ಬರಿ ಗಂಡಸರೇ ಇದ್ದಾರೆ ಅಂದುಕೊಂಡಿದ್ದರಂತೆ. ಮೇಲ್ನೋಟಕ್ಕೆ ಇದು ಸುಳ್ಳು ಅನಿಸಿದರೂ ಕೂಡ ವಾಸ್ತವವನ್ನು ತೋರಿಸುವ ದಾಖಲೆಗಳು ಸಿಕ್ಕಿದ ಮೇಲೆ ನಂಬಲೇ ಬೇಕಾಯಿತು. ಈ ಕಥೆ ಮಿಹಾಯ್ಲೋ ಟೋಲೋಟಾಸ್ ಎಂಬ ಗ್ರೀಸ್ ದೇಶದ ಬೌದ್ಧ ಭಿಕ್ಷುವಿನ ಕಥೆ ಮಿಹಾಯ್ಲೋ ಟೋಲೋಟಾಸ್ ಎಂಬ ಈ ಬೌದ್ಧ ಭಿಕ್ಷುಕ ಕಡು ಸಂಪ್ರದಾಯವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದನು. 82  ವರ್ಷಗಳ ಪೂರ್ಣ ಜೀವನವನ್ನು ಕಳೆದು 1938 ರಲ್ಲಿ ಈತ ಮರಳಿ ಬಾರದ ಲೋಕಕ್ಕೆ ತ್ಯಜಿಸಿದ. ಇಷ್ಟೂ ವರ್ಷಗಳಲ್ಲಿ ಆತನ ಜೀವನದಲ್ಲಿ ಕೇವಲ ದೇವರು, ಧರ್ಮ, ಭಕ್ತರು ಹಾಗೂ ತನ್ನ ಊಟ ಉಪಚಾರ ಆರೋಗ್ಯ ಇಷ್ಟಕ್ಕೇ ತನ್ನ ಸಮಯವನ್ನೆಲ್ಲಾ ಮೀಸಲಿರಿಸಿಕೊಂಡಿದ್ದರು.

ಈತನಿಗೆ ಈ ಜಗತ್ತಿನಲ್ಲಿ ಹೆಣ್ಣು ಎಂಬ ಮನುಷ್ಯಜಾತಿಯೂ ಇದೆ ಎಂದೇ ತಿಳಿದಿರಲಿಲ್ಲ, ತಿಳಿದುಕೊಳ್ಳಲು ಅವಕಾಶವೂ ಇರಲಿಲ್ಲ, ಈತ ಹುಟ್ಟಿದ ಕೇವಲ ನಾಲ್ಕು ತಿಂಗಳ ಬಳಿಕ ಈತನ ತಾಯಿ ಅಕಾಲಮೃತ್ಯುವಿಗೆ ತುತ್ತಾದಳು. ಈ ಮಗುವಿನ ಪಾಲನೆಯ ಹೊಣೆಯನ್ನು ಹೊತ್ತಿದ್ದು ಬೌದ್ಧ ಮಠ. ಗ್ರೀಸ್ ನ ಮೌಂಟ್ ಆಥೋಸ್ ಎಂಬ ಬೆಟ್ಟದ ಮೇಲೆ ಇರುವ ಈ ಮಠಕ್ಕೆ ಕೇವಲ ಪುರುಷರು ಮಾತ್ರವೇ ಪ್ರವೇಶ ಮಾಡಬಹುದು.. ಇಲ್ಲಿನ ಬೌದ್ಧ ಭಿಕ್ಷುಗಳೇ ಮಗುವಿನ ಲಾಲನೆ ಪಾಲನೆಯನ್ನು ನೋಡಿಕೊಂಡರು. ಅಂದಿನಿಂದ ಈ ಮಠವೇ ಆತನ ಮನೆಯಾಗಿ ಮಾರ್ಪಾಟ್ಟಾಯಿತು. ಈ ಮಠದಿಂದ ಆತ ತನ್ನ ಜೀವಮಾನವಿಡೀ ಆ ಮಠದಿಂದ ಹೊರಬರಲೇ ಇಲ್ಲ! ಕ್ರಿ. ಶ 1046ರಲ್ಲಿ ಅಂದಿನ ಬೈಜಂಟೈನ್ ಚಕ್ರವರ್ತಿ ಕಾನ್ಸ್ಟಾಂಟೈನ್ ಮೋನೋಮಾಖೋ ರವರು ಜಾರಿಗೊಳಿಸಿದ ಅವಟಾನ್ ಎಂಬ ಕಾನೂನಿನ ಅನ್ವಯ ಮಹಿಳೆಯರಿಗೆ ಮತ್ತು ಪ್ರಾಣಿಗಳಿಗೆ ಪ್ರವೇಶವಿಲ್ಲ! ಇವತ್ತಿಗೂ ಕೂಡ ಈ ಕಾನೂನು ಕಟ್ಟುನಿಟ್ಟಾಗಿದ್ದು ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಫಲಕವನ್ನು ಮುಖ್ಯದ್ವಾರದ ಹೊರಗೆ ಹಾಕಲಾಗಿದೆ. ಆದರೆ ಇದರಲ್ಲಿ ವಾಸವಾಗಿರುವ ಬೌದ್ಧ ಭಿಕ್ಷುಗಳು ಅತಿ ಕಠಿಣವಾದ ಸಂಪ್ರದಾಯವನ್ನು ಪಾಲಿಸುವುದು ಕಡ್ಡಾಯವಾಗಿದೆ. 

 

Edited By

Shruthi G

Reported By

Shruthi G

Comments