ಸಾಲ ಪಡೆದುಕೊಂಡ ಗ್ರಾಹಕರಿಗೆ ಆರ್ ಬಿಐ ನಿಂದ ಬಂಪರ್ ಗಿಫ್ಟ್

02 Apr 2018 11:19 AM | General
416 Report

ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತ ಮಾಡಿದ ಸಂದರ್ಭದಲ್ಲಿ ಬ್ಯಾಂಕ್ ಗಳು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣದಿಂದ ಆರ್.ಬಿ.ಐ. ಸೂಚನೆಯಂತೆ ಏಪ್ರಿಲ್ 1, 2016 ರಿಂದ ಎಂ.ಸಿ.ಎಲ್.ಆರ್. ವ್ಯವಸ್ಥೆ ಜಾರಿಗೆ ತರಲಾಗಿದೆ.

ಇದರ ಆಧಾರದ ಮೇಲೆ ಬದಲಾಗುವ ಬಡ್ಡಿದರದ ಸಾಲಗಳನ್ನು ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚವನ್ನಾಧರಿಸಿದ ಬಡ್ಡಿದರಕ್ಕೆ(MCLR) ಜೋಡಿಸಲಾಗುತ್ತದೆ. ಮೂಲ ದರ ಆಧರಿಸಿ ಮಂಜೂರು ಮಾಡಲಾದ ಸಾಲಗಳು ಬದಲಾಗಬೇಕಿತ್ತಾದರೂ, ಬ್ಯಾಂಕ್ ಗಳು ಅದನ್ನು ಪಾಲಿಸುತ್ತಿರಲಿಲ್ಲ. ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿದರಕ್ಕೆ ಜೋಡಣೆ ಮಾಡಿರುವುದರಿಂದ ತಿಂಗಳ ಸಾಲದ ಕಂತಿನಲ್ಲಿ ಇಳಿಕೆಯಾಗಲಿದೆ.

ಏಪ್ರಿಲ್ 1 ರಿಂದ ಬ್ಯಾಂಕ್ ಗಳು ಹೊಸ ವಿಧಾನವನ್ನು ಅಳವಡಿಸಿಕೊಳ್ಳಬೇಕಿದ್ದು, ಮೂಲ ದರಕ್ಕೆ ಹೋಲಿಸಿದಾಗ, ಹೊಸ ದರದಲ್ಲಿ ಶೇ. 0.50 ರಷ್ಟರವರೆಗೂ ಕಡಿಮೆಯಾಗಲಿದೆ.  ಇದರಿಂದ 2016 ರ ಏಪ್ರಿಲ್ ಗಿಂತ ಮೊದಲು ಪಡೆದ ಗೃಹಸಾಲಗಳ ಕಂತಿನ ಪ್ರಮಾಣ ಕಡಿಮೆಯಾಗಲಿದೆ. ಸ್ಥಿರ ಬಡ್ಡಿ ದರ ಆಧರಿಸಿರುವ ಕಾರಣ, ವೈಯಕ್ತಿಕ ಸಾಲ, ಕಾರು ಖರೀದಿ ಸಾಲಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ. 2016 ರ ಏಪ್ರಿಲ್ ನಂತರದ ಗೃಹಸಾಲಗಳಿಗೆ ಮಾತ್ರ ಅನ್ವಯವಾಗುತ್ತಿದ್ದ ಪ್ರಯೋಜನವನ್ನು 2016 ರ ಏಪ್ರಿಲ್ ಗಿಂತ ಮೊದಲು ಪಡೆದುಕೊಂಡ ಸಾಲಗಳಿಗೂ ಅನ್ವಯಿಸಲಾಗುವುದು. ಇದರಿಂದ ಗೃಹಸಾಲದ ಕಂತಿನ ಪ್ರಮಾಣ ಇಳಿಕೆಯಾಗಲಿದೆ.

Edited By

Shruthi G

Reported By

Madhu shree

Comments