ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೆ ಶಿಕ್ಷೆ ಖಂಡಿತ

31 Mar 2018 2:18 PM | General
466 Report

ಯಾವುದೇ ವ್ಯಕ್ತಿಯಿಂದ ಹಣ ಅಥವಾ ಇನ್ಯಾವುದೇ ರೂಪದಲ್ಲಿ ಉಡುಗೊರೆಯನ್ನು ಪಡೆದಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1960ರ ಕಲಂ 171ಬಿ ಅನ್ವಯ ಒಂದು ವರ್ಷದವರೆಗಿನ ಸೆರೆಮನೆ ವಾಸ ಅಥವಾ ದಂಡ ಅಥವಾ ಇವೆರಡನ್ನೂ ಒಳಗೊಂಡು ಶಿಕ್ಷೆಗೆ ಗುರಿಯಾಗಬೇಕಾಗಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮತದಾನ ಕೋರಿಕೆ ದೃಷ್ಟಿಯಿಂದ ಲಂಚ ನೀಡುವ ಮತ್ತು ತೆಗೆದುಕೊಳ್ಳುವ ವ್ಯಕ್ತಿಗಳ ವಿರುದ್ಧ ಹಾಗೂ ಬೆದರಿಕೆ ಹಾಗೂ ಆಮಿಷ ಒಡ್ಡುವವರ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಮತದಾನ ಕೋರುವ ಪ್ರಕ್ರಿಯೆಯಲ್ಲಿ ಲಂಚ ನೀಡುವುದು ಹಾಗೂ ಪಡೆಯುವುದರಿಂದ ದೂರವಿರಲು ಕೋರಲಾಗಿದೆ. ಲಂಚ ನೀಡುವುದು, ಆಮಿಷ ಒಡ್ಡುವುದು, ಬೆದರಿಕೆ ಹಾಕುವುದು ಗಮನಕ್ಕೆ ಬಂದಲ್ಲಿ ಜಿಲ್ಲಾ ಕೇಂದ್ರದಲ್ಲಿ ವಾರದ 7 ದಿನ ಹಾಗೂ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ.ಗೆ ಕರೆ ಮಾಡಬಹುದು. ಉಚಿತ ಕರೆ ಸಂಖ್ಯೆ 18004252099 ಎಂದು ಪ್ರಕಟನೆ ತಿಳಿಸಿದೆ.

 

Edited By

Shruthi G

Reported By

Madhu shree

Comments