ಪೋಷಕರೇ ಮಕ್ಕಳ ಕೈಗೆ ಮೊಬೈಲ್‌ ಕೊಡುವ ಮುನ್ನ ಎಚ್ಚರ ..!!

31 Mar 2018 11:46 AM | General
539 Report

ಕೆಲವು ಮೊಬೈಲ್‌ ಗೇಮ್‌ಗಳು ತೀರಾ ಅಪಾಯಕಾರಿಯಾಗಿವೆ. ಮಕ್ಕಳೇ ಕೈಗೆ ಸಿಗದಂತೆ ಆಗುವ ಮೊದಲು ಮಕ್ಕಳಿಗೆ ಮೊಬೈಲ್‌ ಸಿಗದಂತೆ ಮಾಡಿ. ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ.

ಕುಂದಾಪುರ: ಪ್ರಾಣೋತ್ಕ್ರಮಣ ಸ್ಥಿತಿಗೆ ಒಯ್ಯುತ್ತಿದ್ದ ಮೊಬೈಲ್‌ನ ಬ್ಲೂವೇಲ್‌ ಗೇಮ್‌ ಭಾರತದಲ್ಲಿ ನಿಷೇಧವಾಗಿದ್ದರೂ ಅದೇ ಮಾದರಿಯಲ್ಲಿ ಅಪಾಯದ ಉಚ್ಛ್ರಾಯದ ಸ್ಥಿತಿಗೆ ಕೊಂಡೊಯ್ಯುವ ಇನ್ನಷ್ಟು ಗೇಮ್‌ಗಳಿವೆ. ಇವು ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿವೆ. ಅಂತಹ ಕೆಲವು ಘಟನೆಗಳು ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ನಡೆದಿದ್ದು, ಶಿಕ್ಷಕರು, ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ. ಮಾದಕ ದ್ರವ್ಯ ವ್ಯಸನಕ್ಕಿಂತ ಅಧಿಕವಾಗಿ ಮೊಬೈಲ್‌ ಗೇಮ್‌ ಬಾಧಿಸುತ್ತಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ಗೇಮ್‌ಗಳ ಕುರಿತು ಮಕ್ಕಳು 'ಅತಿಯಾಗಿ ಆಡತೊಡಗಿದ್ದರಿಂದ' ಕೆಲವು ಶಿಕ್ಷಣ ಸಂಸ್ಥೆಗಳು ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಮನಶ್ಯಾಸ್ತ್ರಜ್ಞರನ್ನು ನೇಮಿಸಿಕೊಳ್ಳಲು ಮುಂದಾಗಿವೆ. ಮೊಬೈಲ್‌ ಗೇಮ್‌ ವ್ಯಸನಕ್ಕೆ ಒಳಗಾದ ಅನೇಕರು ಮನೋ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವ ಬೆಚ್ಚಿ ಬೀಳಿಸುವ ಅಂಕಿಅಂಶಗಳಿವೆ.ಇನ್ನು ಅನೇಕ ಮಕ್ಕಳ ಬಾಳಲ್ಲಿ ಆಟವಾಡಿರುವ ಈ ಮೊಬೈಲ್ ಗೇಮ್ ಬಗ್ಗೆ ಎಚ್ಚರವಹಿಸಿ.

Edited By

Shruthi G

Reported By

Madhu shree

Comments