350 ರೂ ನಾಣ್ಯದ ಬಗ್ಗೆ ನಿಮಗೆಷ್ಟು ಗೊತ್ತು ...?

29 Mar 2018 4:55 PM | General
627 Report

10ನೆಯ ಹಾಗೂ ಸಿಖ್ಖರ ಕೊನೆಯ ಧರ್ಮಗುರು, ಗುರು ಗೋಬಿಂದ್ ಸಿಂಗ್ ಅವರ ಸ್ಮರಣಾರ್ಥ ಕೇಂದ್ರ ಸರ್ಕಾರ 350 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಗುರು ಗೋಬಿಂದ್ ಸಿಂಗ್ ರ 350ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಈ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ನಾಣ್ಯದ ತೂಕ 35 ಗ್ರಾಂ ಇದೆ. ಶೇ.50ರಷ್ಟು ಭಾಗ ಬೆಳ್ಳಿ, ಹಾಗೂ ಶೇ.45ರಷ್ಟು ತಾಮ್ರದಿಂದ ಮಾಡಲ್ಪಟ್ಟಿದೆ. ಶೇ.5ರಷ್ಟು ನಿಕ್ಕಲ್ ಹಾಗೂ ಸತುವನ್ನು ಬಳಸಲಾಗಿದೆ. ನಾಣ್ಯದಲ್ಲಿ ರೂಪಾಯಿ ಚಿಹ್ನೆಯಿದೆ. ಜೊತೆಗೆ 350 ಎಂಬ ಮುಖಬೆಲೆಯನ್ನು ಇದು ಹೊಂದಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ 'ತಖ್ತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್' ಚಿತ್ರವಿದೆ. ನಾಣ್ಯದ ಎಡ ಮತ್ತು ಬಲಭಾಗದಲ್ಲಿ 1666 ಹಾಗೂ 2016 ಎಂದು ಚಿತ್ರಿಸಲಾಗಿದೆ.

 

 

Edited By

Shruthi G

Reported By

Madhu shree

Comments