ರಾಂಗ್ ರೂಟ್‌ನಲ್ಲಿ ಹೋಗೋರಿಗೆ ಬುದ್ದಿಕಲಿಸಲು ಹೊಸ ಐಡಿಯಾ

29 Mar 2018 2:46 PM | General
628 Report

ರಾಂಗ್ ರೂಟ್‌ನಲ್ಲಿ ಹೋಗುವ ವಾಹನ ಸವಾರರಿಗೆ ಸರಿಯಾಗಿಯೇ ಬುದ್ದಿಕಲಿಸಲು ಮುಂದಾಗಿರುವ ಪುಣೆ ಟ್ರಾಫಿಕ್ ಪೊಲೀಸರು ಹೊಸದೊಂದು ತಂತ್ರ ರೂಪಿಸಿದ್ದು, ರೋಡ್ ಹಂಪ್‌ಗಳ ಬದಲಾಗಿ ಟೈರ್ ಕಿಲ್ಲರ್ ಎನ್ನುವ ಹೊಸ ತಂತ್ರ ಬಳಕೆಗೆ ಚಾಲನೆ ನೀಡಿದ್ದಾರೆ.

ವಿಶೇಷವಾಗಿ ರಚನೆಗೊಂಡಿರುವ ಈ ಟೈರ್ ಕಿಲ್ಲರ್ ಸೌಲಭ್ಯವು ರಾಂಗ್ ರೂಟ್‌ನಲ್ಲಿ ಬರುವ ವಾಹನ ಸವಾರರಿಗೆ ಕಂಟಕವಾಗಲಿದ್ದು, ಒಂದು ವೇಳೆ ಟೈರ್ ಕಿಲ್ಲರ್‌ನ ವಿರುದ್ದ ದಿಕ್ಕಿನಲ್ಲಿ ಹೋಗಿದ್ದೆ ಆದಲ್ಲಿ ಟೈರ್ ಪಂಚರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೇಂದ್ರೆ ಟೈರ್ ಕಿಲ್ಲರ್‌ನಲ್ಲಿ ಬಳಸಲಾಗಿರುವ ಹರಿತವಾದ ಮೊಳೆಗಳು ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ಟೈರ್‌ಗಳಲ್ಲಿ ಸಿಕ್ಕಿಕೊಳ್ಳುವುದಲ್ಲದೇ ರಾಂಗ್ ರೂಟ್‌ನಲ್ಲಿ ಬರುವ ವಾಹನ ಸವಾರರಿಗೆ ಸರಿಯಾಗಿಯೇ ಬುದ್ದಿ ಕಲಿಸುತ್ತೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸರಿಯಾದ ಮಾರ್ಗದಲ್ಲಿ ಬರುವ ವಾಹನಗಳಿಗೆ ಟೈರ್ ಕಿಲ್ಲರ್‌ನಲ್ಲಿರುವ ಹರಿತವಾದ ಮೊಳೆಗಳಿಂದ ಯಾವುದೇ ತೊಂದರೆ ಆಗುವುದಿಲ್ಲ. ಜೊತೆಗೆ ರಾಂಗ್ ರೂಟ್‌ ಹವ್ಯಾಸ ತಪ್ಪಿಸಲು ಹರಸಾಹಸ ಪಡಬೇಕಾಗಿದ್ದ ಪೊಲೀಸರಿಗೂ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಸದ್ಯ ಪ್ರಾಯೋಗಿಕವಾಗಿ ಪುಣೆಯ ಪ್ರಮುಖ ರಸ್ತೆಗಳಲ್ಲಿ ಟೈರ್ ಕಿಲ್ಲರ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಬಹುತೇಕ ವಾಹನ ಸವಾರರು ರಾಂಗ್ ರೂಟ್ ಹವ್ಯಾಸಕ್ಕೆ ಗುಡ್ ಬೈ ಹೇಳಿ ಸರಿಯಾದ ರಸ್ತೆ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಇದರಿಂದಾಗಿ ಟೈರ್ ಕಿಲ್ಲರ್ ವ್ಯವಸ್ಥೆಯು ದೇಶದ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಅಳವಡಿಸುವ ಅವಶ್ಯಕತೆಯಿದ್ದು, ಇದರಿಂದ ದಿನಂಪ್ರತಿ ಸಂಭವಿಸುವ ನೂರಾರು ರಸ್ತೆ ಅಪಘಾತಗಳನ್ನು ಪರಿಣಾಮಕಾರಿ ತಗ್ಗಿಸಬಹುದಾಗಿದೆ.

Edited By

Shruthi G

Reported By

Madhu shree

Comments