ಪತಂಜಲಿ ಬ್ರ್ಯಾಂಡ್ ಈಗ ವಾಟರ್ ಬಾಟಲ್ ನತ್ತ ...!

29 Mar 2018 1:32 PM | General
474 Report

ಪತಂಜಲಿ ಬಾಟಲ್ ನೀರಿಗೆ ದಿವ್ಯ ವಾಟರ್ ಎಂದು ಹೆಸರಿಟ್ಟಿದೆ. ಉತ್ತರ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಲು ಪತಂಜಲಿ ಮುಂದಾಗಿದೆ. ಪತಂಜಲಿ ಉತ್ತರ ಭಾರತದ ದೆಹಲಿ-ಎನ್ಸಿಆರ್, ಪಂಜಾಬ್, ಉತ್ತರ ಪ್ರದೇಶ, ಉತ್ತರಖಂಡ ಮತ್ತು ಹರ್ಯಾಣದಲ್ಲಿ ದಿವ್ಯ ವಾಟರ್ ವಿತರಿಸಲು ಮುಂದಾಗಿದೆ.

ಇದಕ್ಕಾಗಿ ವಿತರಕರ ಅಗತ್ಯವಿದೆ ಎಂದು ಕಂಪನಿ ಹೇಳಿದೆ. ಪತಂಜಲಿ 250 ಮಿಲಿ ಲೀಟರ್, 500 ಮಿಲಿ ಲೀಟರ್, 1 ಲೀಟರ್, 2 ಲೀಟರ್, 5 ಲೀಟರ್ ಮತ್ತು 20 ಲೀಟರ್ ಪ್ಯಾಕಿಂಗ್ ವಿತರಿಸಲು ನಿರ್ಧರಿಸಿದೆ. ಐದು ರಾಜ್ಯಗಳಲ್ಲಿ ದಿವ್ಯ ವಾಟರ್ ಮಾರಾಟಕ್ಕೆ ವಿತರಕರ ಹುಡುಕಾಟದಲ್ಲಿರುವ ಪತಂಜಲಿ ಈ ಬಗ್ಗೆ ಜಾಹೀರಾತು ನೀಡಿದೆ. ಈಗಾಗಲೇ ಅನುಭವವುಳ್ಳ,ಆಯಾ ಕ್ಷೇತ್ರದಲ್ಲಿ ನೀರಿನ ಬಾಟಲಿ ವಿತರಣೆಯಲ್ಲಿ ಹೆಸರು ಮಾಡಿರುವ, ಆರ್ಥಿಕವಾಗಿ ಬಲವುಳ್ಳ, ನೀರನ್ನು ಸಂಗ್ರಹಿಸಲು ವ್ಯವಸ್ಥೆಯಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

 

Edited By

Shruthi G

Reported By

Madhu shree

Comments