ಖಾಸಗಿ ಶಾಲೆಗಳ ದುರಾಡಳಿತಕ್ಕೆ ಬ್ರೇಕ್ ಹಾಕಲು ಹೊಸ ಕಾನೂನು ಕ್ರಮ

29 Mar 2018 12:54 PM | General
379 Report

ಹೆಚ್ಚುವರಿ ಶುಲ್ಕ ಪಡೆಯುವ ಖಾಸಗಿ ಮತ್ತು ಅನುದಾನರಹಿತ ಶಾಲೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್‌ಟಿಐ ಕಾಯಿದೆಯ ಕಲಂ 13ರಲ್ಲಿ ಯಾವುದೇ ಶಾಲೆಯು ಡೊನೇಷನ್‌, ಕ್ಯಾಪಿಟೇಷನ್‌ ಹೆಸರಿನಲ್ಲಿ ಪೋಷಕರಿಂದ ಹಣ ಪಡೆಯುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಇದಲ್ಲದೇ ಈ ಸಂಬಂಧ ಶಿಕ್ಷಣ ಇಲಾಖೆಯು ಎರಡು ಸುತ್ತೋಲೆಗಳನ್ನು ಸಹ ಹೊರಡಿಸಿದೆ.

ಆದರೆ ಖಾಸಗಿ ಮತ್ತು ಅನುದಾನರಹಿತ ಶಾಲೆಗಳು ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳ ಪೋಷಕರಿಂದ ಪುಸ್ತಕ, ಸಮವಸ್ತ್ರ, ಕಲಿಕಾ ಸಾಮಗ್ರಿ, ಕಂಪ್ಯೂಟರ್‌ ಕಲಿಕೆ ಇತ್ಯಾದಿ ಕಾರ್ಯಗಳಿಗೆ ರಸೀದಿ ನೀಡದೆ ಸಾವಿರಾರು ರೂ.ಗಳನ್ನು ವಸೂಲಿ ಮಾಡುತ್ತಿವೆ. ಈ ಬಗ್ಗೆ ಈಗಾಗಲೇ ಸುಮಾರು 20ಕ್ಕೂ ಹೆಚ್ಚು ದೂರುಗಳು ಆಯೋಗಕ್ಕೆ ಬಂದಿವೆ," ಅಂತ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಆಯೋಗದ ಸದಸ್ಯ ವೈ.ಮರಿಸ್ವಾಮಿ, ಶಿಕ್ಷಣ ಹಕ್ಕುಗಳ ಹೋರಾಟಗಾರ ನಾಗಸಿಂಹ ಉಪಸ್ಥಿತರಿದ್ದರು.

 

Edited By

Shruthi G

Reported By

Madhu shree

Comments