ಮಾರ್ಚ್ 31ಕ್ಕೆ ಜಿಯೋ ಪ್ರೈಮ್ ಮುಗಿದ ನಂತರ ಮುಂದಿನ ಪ್ಲಾನ್ ಏನು ಗೊತ್ತಾ..?

28 Mar 2018 5:58 PM | General
646 Report

ಜಿಯೋ ಬಳಕೆದಾರರು ಪ್ರೈಮ್ ಸದಸ್ಯತ್ಬವನ್ನು ಬಳಕೆ ಮಾಡಿಕೊಳ್ಳಲು ಮುಂದಾದರು. ಇದೇ ಮಾದರಿಯಲ್ಲಿ ರೂ.99 ಪಾವತಿ ಮಾಡಿ ಜಿಯೋ ಪ್ರೈಮ್ ಸದಸ್ಯತ್ವವನ್ನು ಹಲವು ಮಂದಿ ಪಡೆದುಕೊಂಡರು. ಈ ಪ್ರೈಮ್ ಸದಸ್ಯತ್ವವೂ ಒಂದು ವರ್ಷದ ಅವಧಿಗಾಗಿ ಘೋಷಣೆ ಮಾಡಿದ್ದಾಗಿದ್ದು, ಇದೇ ಮಾರ್ಚ್ 31ಕ್ಕೆ ಜಿಯೋ ಪ್ರೈಮ್ ಸದಸತ್ವದ ಅವಧಿಯೂ ಮುಗಿಯಲಿದೆ. ಈ ಹಿನ್ನಲೆಯಲ್ಲಿ ಜಿಯೋ ಬಳಕೆದಾರರು ಅಂಬಾನಿ ನೀಡುವ ಹೊಸಪ್ಲಾನ್ ನಿರೀಕ್ಷೆಯಲ್ಲಿದ್ದಾರೆ.

ಏಪ್ರಿಲ್ ನಿಂದ ಜಾರಿ:  2017ರ ಏಪ್ರಿಲ್‌ 1 ರಂದು ಜಾರಿಗೆ ಬಂದ ಜಿಯೋ ಪ್ರೈಮ್ ಇದೇ ಮಾರ್ಚ್ 31ರಂದು ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ಜಿಯೋ ಪ್ರೈಮ್ ಸದಸ್ಯತ್ವನ್ನು ಪಡೆದುಕೊಂಡು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಿದ್ದವರಿಗೆ ಮುಂದೇನಾಗುತ್ತದೆ ಎನ್ನುವ ಕಾತುರ ಇದೆ. ಈ ಹಿನ್ನಲೆಯಲ್ಲಿ ಜಿಯೋ ಏನು ಮಾಡಬಹುದು ಎನ್ನುವ ನಿರೀಕ್ಷೆಗಳು ಈ ಮುಂದಿನಂತಿದೆ.

ಜಿಯೋ ಸದಸ್ಯತ್ವ ಅವಧಿ ವಿಸ್ತರಣೆ: ಜಿಯೋ ಪ್ರೈಮ್ ಸದಸ್ಯತ್ವದ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಒಂದು ವೇಳ ಜಿಯೋ ಈ ನಿರ್ಧಾರವನ್ನು ಕೈಗೊಂಡರೆ ಬಳಕೆದಾರರು ಇನಷ್ಟು ದಿನ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಹೊಸ

ಸದಸ್ಯತ್ವ: ಇದಲ್ಲದೇ ಮತ್ತೆ ರೂ.99 ಪಾವತಿ ಮಾಡಿ ಜಿಯೋ ಸದಸ್ಯತ್ವವನ್ನು ಮತ್ತೆ ಒಂದು ವರ್ಷದ ಕಾಲ ನವೀಕರಣ ಮಾಡಿಕೊಳ್ಳುವ ಅವಕಾಶವನ್ನು ಜಿಯೋ ಮಾಡಿಕೊಡಬಹುದು, ಇದರಿಂದಲೂ ಸಹ ಬಳಕೆದಾರರಿಗೆ ಹೆಚ್ಚಿನ ನಷ್ಟವಾಗುವುದಿಲ್ಲ.

ಹೊಸ ಪ್ಲಾನ್: ಇದಲ್ಲದೇ ಜಿಯೋ ತನ್ನ ಪ್ರೈಮ್ ಸದಸ್ಯರಿಗೆ ಹೊಸ ಮಾದರಿಯ ಪ್ಲಾನ್ ವೊಂದನ್ನು ಘೋಷಣೆ ಮಾಡುವ ಸಾಧ್ಯತೆಯೂ ಇದೆ. ಮಗನ ಮದುವೆಯ ಸಂಭ್ರಮದಲ್ಲಿರುವ ಅಂಬಾನಿ ಬಳಕೆದಾರರಿಗೆ ಹೊಸ ಗಿಫ್ಟ್ ಏನನ್ನು ಕೊಡಬಹುದು ಎಂಬುದು ಸರ್ಪೈಸ್ ಆಗಿದೆ.

 

 

 

Edited By

Shruthi G

Reported By

Madhu shree

Comments