ಅತೀ ಕಡಿಮೆ ಬೆಲೆಗೆ ಸಿಗಲಿದೆ ಆಪಲ್ ಐ ಪಾಡ್

28 Mar 2018 12:26 PM | General
517 Report

ಭಾರತದಲ್ಲಿ ಆಪಲ್ ಸಂಸ್ಥೆಯಿಂದ ಲಾಂಚ್ ಆಗಿರುವ ಅತ್ಯಂತ ಕಡಿಮೆ ಬೆಲೆಯ ಈ ಐ ಪಾಡ್ ಏಪ್ರಿಲ್ ವೇಳೆಗೆ ಭಾರತದಲ್ಲಿ ದೊರೆಯುತ್ತದೆ. ಈ ಐ ಪಾಡ್ ಆರಂಭಿಕ ಬೆಲೆಯು 28,000ದಿಂದ ಆರಂಭವಾಗುತ್ತಿದೆ.

 ಇದರ ಸ್ಕ್ರೀನ್ 9.7 ಇಂಚುಗಳಾಗಿದೆ, ಅಲ್ಯುಮಿನಿ ಯುನಿಬಾಡಿಯನ್ನು ಹೊಂದಿದೆ. ಫೀಚರ್ ಟಚ್ ಐಡಿ ಹಾಗೂ ಫೇಸ್ ಐಡಿ ವ್ಯವಸ್ಥೆಯನ್ನು ಈ ಐ ಪಾಡ್ ಹೊಂದಿದೆ. ಎಚ್'ಡಿ ಫೇಸ್ ಟೈಮ್ ಕ್ಯಾಮರಾ ವ್ಯವಸ್ಥೆಯು ಈ ಐ ಪಾಡ್'ನಲ್ಲಿದೆ. ಈ ಐ ಪಾಡ್ ಮೂರು ಬಣ್ಣಗಳಲ್ಲಿ ಲಭ್ಯವಾಗುತ್ತದೆ. ಸಿಲ್ವರ್, ಸ್ಪೇಸ್ ಗ್ರೇ, ಬಂಗಾರದ ಬಣ್ಣದಲ್ಲಿ ಲಭ್ಯವಾಗುತ್ತದೆ. ಎ10 ಫ್ಯೂಷನ್ ಚಿಪ್ ವ್ಯವಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅತ್ಯಂತ ಹಗುರವಾಗಿದೆ.

 

Edited By

Shruthi G

Reported By

Madhu shree

Comments