Report Abuse
Are you sure you want to report this news ? Please tell us why ?
ಚುನಾವಣಾ ಗೀತೆಗೆ ಪದ ರಚಿಸಲಿದ್ದಾರಂತೆ ವಿಕಟ ಕವಿ ಯೋಗರಾಜ್ ಭಟ್ರು
27 Mar 2018 5:15 PM | General
764
Report
ಮತದಾನದ ಅರಿವು ಮೂಡಿಸೋ ಸಲುವಾಗಿ ಗೀತೆ ರಚಿಸಲು ಚುನಾವಣಾ ಆಯೋಗ ಖ್ಯಾತ ನಿರ್ದೇಶಕ, ಬರಹಗಾರ ಯೋಗರಾಜ್ ಭಟ್ಟರನ್ನು ಸಂಪರ್ಕ ಮಾಡಿದೆ. ಇನ್ನು ರಾಜ್ಯ ವಿಧಾನಸಭಾ ಚುನಾವಣೆಗಾಗಿ ಭಟ್ಟರು ರಚನೆ ಮಾಡುವ ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ ನೀಡಿದರೆ, ಇಮ್ರಾನ್ ಸರ್ಧಾರಿಯಾ ನೃತ್ಯ ಸಂಯೋಜನೆ ಮಾಡಲಿದ್ದಾರಂತೆ. ಗೀತೆಯನ್ನು ಪಂಚತಂತ್ರ ಚಿತ್ರತಂಡ ಚಿತ್ರೀಕರಣ ಮಾಡಲಿದೆಯಂತೆ.
ಇದೇ ವೇಳೆ ಈ ಬಗ್ಗೆ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಭಟ್ಟರು ಇದು ನನ್ನ ಹಾಗೂ ನನ್ನ ತಂಡದ ಅತಿ ದೊಡ್ಡ ಹೆಮ್ಮೆಗಳಲ್ಲೊಂದು, ಚುನಾವಣಾ ಆಯೋಗ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಂತಸವಾಗಿದೆ ಅಂತ ಹೇಳಿಕೊಂಡಿದ್ದಾರೆ.
Edited By
Shruthi G




Comments