ಬ್ಯಾಂಕ್ ಗಳಿಗೆ ಮಾರ್ಚ್ 29 ರಿಂದ ಏಪ್ರಿಲ್ 2ರ ವರಗೆ ಸರಣಿ ರಜೆ ಇಲ್ಲ..!!

26 Mar 2018 12:09 PM | General
11395 Report

ಮಾರ್ಚ್ 29ರಿಂದ ಏಪ್ರಿಲ್ 2ರವರೆಗೂ ಬ್ಯಾಂಕ್ ಗಳಿಗೆ ಸತತ 5 ದಿನ ಸರಣಿ ರಜೆ ಎಂಬ ಸಂದೇಶವೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ಈ ಸಂದೇಶದಲ್ಲಿರುವ ಮಾಹಿತಿ ಸುಳ್ಳು ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ವತಃ ಕೇಂದ್ರ ಸಚಿವರು ಸ್ಪಷ್ಟನೆ ನೀಡಿದ್ದು, ಸತತ 5 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಮಾರ್ಚ್ 31 ಶನಿವಾರದಂದು ಬ್ಯಾಂಕ್ ಗಳು ಕಾರ್ಯ ನಿರ್ವಹಿಸಲಿದ್ದು, ಸಾಮಾಜಿಕ ಜಾಲಾಣಗಳಲ್ಲಿ ಹರಿದಾಡುತ್ತಿರುವ ಸಂದೇಶದಂತೆ ಸರಣಿ ರಜೆ ಇಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಥಾಮಸ್ ಫ್ರಾಂಕೋ ರಾಜೇಂದ್ರ ದೇವ್ ಅವರು ತಿಳಿಸಿದ್ದಾರೆ. ಇನ್ನು ವಾಟ್ಸಪ್ ನಲ್ಲಿ ಹರಿದಾಡುತ್ತಿರುವಂತೆ ಗುರುವಾರ ಮಹಾವೀರ ಜಯಂತಿ, ಶುಕ್ರವಾರ ಗುಡ್ ಫ್ರೈಡೇ, ಶನಿವಾರ, ಭಾನುವಾರ ಮತ್ತು ಏಪ್ರಿಲ್ 2 ಬ್ಯಾಂಕ್ ಗಳಿಗೆ ರಜೆ ಎಂದು ಸಂದೇಶವೊಂದು ಹರಿದಾಡುತ್ತಿದೆ. ಆದರೆ ಬ್ಯಾಂಕ್ ಗಳಿಗೆ ತಿಂಗಳ ನಾಲ್ಕನೇ ಶನಿವಾರ ರಜೆ ಇದ್ದು, ಏಪ್ರಿಲ್ 31ರ ಶನಿವಾರ ಐದನೇ ಶನಿವಾರವಾಗಿದೆ. ಹೀಗಾಗಿ ಅಂದು ಬ್ಯಾಂಕ್ ಗೆ ರಜೆ ಇರುವುದಿಲ್ಲ. ಇನ್ನು ಏಪ್ರಿಲ್ 2ರಂದು ವಾರ್ಷಿಕ ಖಾತೆಗಳ ಪರಿಶೀಲನೆ ನಿಮಿತ್ತ ಬ್ಯಾಂಕ್ ಗಳು ಮುಚ್ಚಲ್ಪಟ್ಟಿರುತ್ತವೆ ಎಂದು ತಿಳಿದು ಬಂದಿದೆ.

Edited By

Shruthi G

Reported By

Shruthi G

Comments