ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ

24 Mar 2018 2:03 PM | General
555 Report

ಕೇವಲ BFF ಎಂದು ಟೈಪ್‌ ಮಾಡುವ ಮೂಲಕ ನಿಮ್ಮ ಫೇಸ್‌ಬುಕ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಸಾಧ್ಯವಿಲ್ಲ. ಸದ್ಯ ಫೇಸ್‌ಬುಕ್‌ನಲ್ಲಿ BFF ಎಂದು ಕಮೆಂಟ್ ಮಾಡಿ, ನಿಮ್ಮ ಫೇಸ್ಬುಕ್ ಖಾತೆ ರಕ್ಷಿಸಿಕೊಳ್ಳಿ ಎಂಬ ಮಾಹಿತಿಯನ್ನು ಕಂಡರೆ ಅದನ್ನು ನಿರ್ಲಕ್ಷಿಸುವುದು ಉತ್ತಮ. ಇದರಿಂದ ನಿಮ್ಮ ಸಮಯವೂ ಉಳಿತಾಯವಾಗಲಿದೆ. ಅಲ್ಲದೇ ಬೇರೆ ಯಾರದೂ ಜಾಲಕ್ಕೆ ಸಿಲುಕಿಹಾಕಿಕೊಳ್ಳುವುದು ತಪ್ಪಲಿದೆ.

BFF ಎಂದು ಕಾಮೆಂಟ್ ಮಾಡಿ ಎನ್ನುವುದು ಫೇಸ್‌ಬುಕ್‌ ಪೇಜ್‌ ಟ್ರಾಫಿಕ್ ಹೆಚ್ಚು ಮಾಡಿಕೊಳ್ಳುವ ವಿಧಾವವಾಗಿದ್ದು, ನೀವು ಹಾಗೇ ಮಾಡಿದರೆ ನಿಮಗೇನು ಲಾಭವಿಲ್ಲ ಆದರೆ ಫೇಸ್‌ಬುಕ್‌ ಪೇಜ್ ಮಾಲೀಕರಿಗೆ ಹೆಚ್ಚಿನ ಲಾಭವಾಗಲಿದೆ ಅಷ್ಟೆ. ಫೇಸ್‌ಬುಕ್ ಈ ರೀತಿ ಯಾವುದೇ ಸುರಕ್ಷಿತಾ ನಿಯಮ ಪಾಲಿಸುತ್ತಿಲ್ಲ. ಮತ್ತು ಒಂದೇ ಕಾಮೆಂಟ್ ಮೂಲಕ ನಿಮ್ಮ ಅಕೌಂಟ್ ಅನ್ನು ಸೇಫ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

ಫೇಸ್‌ಬುಕ್ ಮಾಹಿತಿ ಲೀಕ್ ಆಗಿದೆ ಎನ್ನುವ ವಿಚಾರವನ್ನು ಇಟ್ಟುಕೊಂಡು ಈ ರೀತಿಯ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹಬ್ಬಿಸುತ್ತಿದ್ದಾರೆ. ಈ ಭಯವನ್ನು ಬಂಡಾವಳ ಮಾಡಿಕೊಂಡು ತಮ್ಮ ಫೇಸ್‌ಬುಕ್ ಟ್ರಾಫಿಕ್ ಹೆಚ್ಚು ಮಾಡಿಕೊಳ್ಳಲು BFF ಎಂದು ಕಾಮೆಂಟ್ ಮಾಡಿ ಎನ್ನು ಪೋಸ್ಟ್‌ ಮಾಡಿ ಹಾಕುತ್ತಿದ್ದಾರೆ. ಫೇಸ್‌ಬುಕ್‌ ಬಳಕೆದಾರು ಇದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯತೆ ಇಲ್ಲ.

ಈ ರೀತಿ ಭದ್ರತೆ ಬಗ್ಗೆ ಪರೀಕ್ಷೆ ನಡೆಲು ಫೇಸ್‌ಬುಕ್ ಮುಂದಾಗುವುದಿಲ್ಲ. ಮಾಡಿದರೂ ಸಹ ಕಾಮೆಂಟ್ ಮಾಡಿ, ಲೈಕ್ ಮಾಡಿ ಎನ್ನುವ ಯಾವುದೇ ಕಾರ್ಯವನ್ನು ತಿಳಿಸುವುದಿಲ್ಲ. ಬದಲಾಗಿ ಪಾನ್ ವರ್ಡ್ ಬದಲಾಯಿಸಿ, ಡಿವೈಸ್ ಲಾಗ್‌ಔಟ್ ಮಾಡಿ ಎನ್ನುವ ಮಾಹಿತಿಯನ್ನಷ್ಟೆ ನೀಡಲಿದೆ. ಇನ್ನೊಂದು ವಿಚಾರ BFF ಅಂದರೆ ಬೆಸ್ಟ್ ಫ್ರೆಂಡ್ ಫಾರ್‌ಎವರ್ ಎನ್ನುವುದಾಗಿದೆ.

 

Edited By

Shruthi G

Reported By

Madhu shree

Comments