ಓಲಾ-ಊಬರ್ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುವ ಸುದ್ದಿ

23 Mar 2018 6:26 PM | General
503 Report

ರಾಜ್ಯರಾಜಧಾನಿಯಲ್ಲಿರುವ ಜನರಿಗೆ ಸಾರಿಗೆ ಇಲಾಖೆ ಶಾಕಿಂಗ್ ನ್ಯೂಸ್ ವೊಂದನ್ನು ನೀಡಿದೆ. ಹೌದು,ಸಿಲಿಕಾನ್‌ ಸಿಟಿಯ ಜನರಿಗೆ ಓಡಾಟಕ್ಕೆ ಸದಾ ನೆರವಾಗುವ ಓಲಾ-ಊಬರ್ ಕ್ಯಾಬ್‌ಗಳು ಸದ್ಯದಲ್ಲೇ ತುಟ್ಟಿಯಾಗುವ ಸಾಧ್ಯತೆ ಎನ್ನಲಾಗಿದೆ.

ಈ ಹಿಂದೆ ಜ. 9 ರಂದು ಸಾರಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಇಲಾಖೆ ಹಿಂಪಡೆದಿದ್ದು, ಹೊಸದಾದ ಅಧಿಸೂಚನೆಯನ್ನು ಹೊರಡಿಸಿದೆ. ಸಾರಿಗೆ ಇಲಾಖೆ ಓಲಾ ಮತ್ತು ಊಬರ್ ಸೇರಿದಂತೆ ಇತರ ಕಂಪನಿಗಳ ಕ್ಯಾಬ್ ಪ್ರಯಾಣ ನಿಗದಿ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ದರ ಏರಿಕೆಯಾಗುವ ಮುನ್ಸೂಚನೆ ನೀಡಿದೆ.

ಈ ಹೊಸ ನಿಯಮದನ್ವಯ ದರ ಪ್ರಸ್ತುತ ದರಕ್ಕಿಂತ ಶೇ. 65 ರಷ್ಟು ಅಧಿಕವಾಗಲಿದ್ದು, ಮೊದಲಿನಂತೆಯೇ ಕಾಯುವಿಕೆಯ ಮೊದಲ 20 ನಿಮಿಷ ಉಚಿತವಾಗಿರಲಿದ್ದು, ನಂತರದ 15 ನಿಮಿಷಗಳಿಗೆ 10 ರೂಪಾಯಿ ಹಣ ಪಾವತಿಸಬೇಕಿದೆ. ಜಿಎಸ್‌ಟಿ ಹಾಗೂ ಟೋಲ್ ಶುಲ್ಕವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ನಗರದ ವ್ಯಾಪ್ತಿಯಲ್ಲಿ 25 ಕಿಲೋಮೀಟರ್‌ ಸಂಚರಿಸುವ ಕ್ಯಾಬ್‌ಗಳಿಗೆ ಈ ದರ ಅನ್ವಯವಾಗಲಿದೆ.

 

 

 

 

 

Edited By

Shruthi G

Reported By

Madhu shree

Comments