125 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮ..!!

17 Mar 2018 5:37 PM | General
838 Report

ದೇಶಾದ್ಯಂತ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ 125 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮವೊಂದನ್ನು ಜಾರಿಗೆ ತರುತ್ತಿದೆ.

ಈ ಹಿಂದೆ 2017ರ ಏಪ್ರಿಲ್ 1 ರಿಂದ ಬಿಎಸ್ 3 ಎಂಜಿನ್ ವಾಹನಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು, ಇದೀಗ 125ಸಿಸಿ ಮೇಲ್ಪಟ್ಟ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಕಡ್ಡಾಯವಾಗಿ ಎಬಿಎಸ್ ಹೊಂದರಬೇಕೆಂಬ ಮಹತ್ವದ ಆದೇಶವನ್ನು ಹೊರಡಿಸಲಿದೆ. ಬೈಕ್‌ಗಳು ಮತ್ತು ಸ್ಕೂಟರ್‌ಗಳಲ್ಲಿ ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು ಕಡ್ಡಾಯಗೊಳಿಸುವ ಮೂಲಕ ಅಪಘಾತಗಳ ಸಂಖ್ಯೆ ತಗ್ಗಿಸುವ ಉದ್ದೇಶ ಹೊಂದಿದ್ದು, ಇದು ಬೈಕ್ ಸವಾರರಿಗೂ ಕೂಡಾ ಸಹಕಾರಿಯಾಗಿರಲಿದೆ ಎನ್ನಲಾಗಿದೆ.

ಈಗಾಗಲೇ ಕೆಲವು ಸುಧಾರಿತ ಬೈಕ್ ಮತ್ತು ದುಬಾರಿ ಬೈಕ್‌ಗಳಲ್ಲಿ ಮಾತ್ರ ಈ ಸೌಲಭ್ಯವಿದ್ದು, ಕೇಂದ್ರ ಸರ್ಕಾರ ಹೊಸ ನಿಮಯದಂತೆ 125 ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್‌ಗಳಲ್ಲೂ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ಮಾಡಲಿದೆ. ಜೊತೆಗೆ ಏಪ್ರಿಲ್ 1ರಿಂದಲೇ ಎಬಿಎಸ್ ಇಲ್ಲದ 125 ಸಿಸಿ ಮೇಲ್ಪಟ್ಟ ಬೈಕ್‌ಗಳ ಮಾರಾಟಕ್ಕೂ ಬ್ರೇಕ್ ಬೀಳಲಿದ್ದು, ಒಂದು ವೇಳೆ ನೀವು ಅಂತಹ ಬೈಕ್‌ಗಳನ್ನು ಖರೀದಿ ಮಾಡಿದರೂ ನೋಂದಣಿ ಕೂಡಾ ಆಗುವುದಿಲ್ಲ. ಮತ್ತೊಂದು ಮುಖ್ಯ ವಿಚಾರ ಏನೆಂದರೆ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

Edited By

Shruthi G

Reported By

Madhu shree

Comments