ಸಿಎಂ ಸಿದ್ದರಾಮಯ್ಯ ನವರ ಹೇಳಿಕೆಗೆ ತಿರುಗೇಟು ಕೊಟ್ಟ ಮೈಸೂರು ಮಹಾರಾಜ

14 Mar 2018 9:50 AM | General
2061 Report

ರಾಜ್ಯದಲ್ಲಿ ಮೈಸೂರು ರಾಜರ ನಂತರ ಯಾವುದಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ ಎಂದರೇ ಅದು ನಮ್ಮ ಸರ್ಕಾರ ಮಾತ್ರ' ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಅವರು ಈ ರೀತಿ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,' ರಾಜರ ಆಳ್ವಿಕೆ ಸಿದ್ದರಾಮಯ್ಯ ಆಳ್ವಿಕೆ ಹೋಲಿಕೆ ಮಾಡುವುದು ಸರಿಯಲ್ಲ. ಅಂದಿನ ರಾಜರ ಕಾಲಕ್ಕೂ, ಇಂದಿನ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ.

ಸಿಎಂ ಸಿದ್ದರಾಮಯ್ಯ ಅವರು ಕಳೆದ ಐದು ವರ್ಷದಲ್ಲಿ ಏನು ಮಾಡಿದ್ದಾರೆ ಅನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ಜನರಿಗೆ ಎಲ್ಲವೂ ಗೊತ್ತಿದೆ. ರಾಜರು ನೀಡಿದ ಕೊಡುಗೆಯನ್ನು ಜನರು ಯಾವತ್ತು ಮರೆಯುವುದಿಲ್ಲ. ಮೈಸೂರು ಸಂಸ್ಥಾನ ಕೊಡುಗೆ ಎಲ್ಲರಿಗೂ ಗೊತ್ತಿದೆ' ಎಂದು ಹೇಳಿದ್ದಾರೆ.

Edited By

Shruthi G

Reported By

Shruthi G

Comments

Cancel
Done