ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರಯಾಣಿಕರ ಸಹಾಯಕ್ಕೆ ನೂತನ ಯೋಜನೆ...!!

10 Mar 2018 12:16 PM | General
590 Report

ರಾಷ್ಟ್ರೀಯ ಹೆದ್ದಾರಿಗಳಲ್ಲಿ ತುರ್ತು ಸೇವೆಗಳಿಗಾಗಿ 1033 ಸಹಾಯವಾಣಿಯನ್ನು ಬಿಡುಗಡೆಗೊಳಿಸಿರುವ ಹೆದ್ದಾರಿ ಪ್ರಾಧಿಕಾರವು, ಎಮರ್ಜೆನ್ಸಿ ನಂಬರ್ ಜೊತೆಗೆ ಹೆದ್ದಾರಿಯಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ 'ಸುಖದ್ ಯಾತ್ರೆ' ಎನ್ನುವ ಮೊಬೈಲ್ ಆ್ಯಪ್‍ ಒಂದನ್ನು ಬಿಡುಗಡೆಗೊಳಿಸಲಾಗಿದೆ. ಈ ಆಪ್ ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಹತ್ತಿರವಿರುವ ಟೋಲ್ ಪ್ಲಾಜ್‌ಗಳನ್ನು ಹುಡುಕಬಹುದಾಗಿದ್ದು, ಹಾಗೆಯೇ ಟೋಲ್ ವೆಚ್ಚವನ್ನು ಸಹ ಇದರಲ್ಲಿ ತಿಳಿದುಕೊಳ್ಳಬಹುದಾಗಿದೆ.

ಸುಖದ್ ಯಾತ್ರೆ' ಭಾರತೀಯ ರಾಷ್ಟ್ರೀಯಾ ಹೆದ್ದಾರಿ ಪ್ರಾಧಿಕಾರವೇ ಸಿದ್ದಪಡಿಸಿದ್ದು, ಬಳಕೆದಾರರು ಹೆದ್ದಾರಿಗಳಲ್ಲಿ ತಮಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಇದರಲ್ಲಿ ಹೇಳಿಕೊಳ್ಳಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದ್ರೆ ಸರಿಯಾದ ತುರ್ತುಸೇವೆಗಳು ಸಿಗದೆ ಹಲವರು ಸಾವಿಗೀಡಾಗಿದುಲ್ಲದೇ ಪ್ರಾಥಮಿಕ ಚಿಕಿತ್ಸೆ ಪರದಾಟು ಪರಿಸ್ಥಿತಿ ಎದುರುಗಾತ್ತಿವೆ. ಈ ಹಿನ್ನೆಲೆ ತುರ್ತು ಸೇವೆಗಳಿಗಾಗಿ ಹೊಸ ಯೋಜನೆ ರೂಪಿಸಿರುವ ಕೇಂದ್ರವು ಹೈವೇ ಹೆಲ್ಪ್ ಲೈನ್ ನಂಬರ್‍ ಜೊತೆಗೆ ಆ್ಯಪ್ ಒಂದನ್ನು ಪರಿಚಯಿಸಿದೆ. ಟೋಲ್-ಫ್ರೀ ತುರ್ತು ಹೆದ್ದಾರಿ ಹೆಲ್ಪ್ಲೈನ್ ಸಂಖ್ಯೆಯಂತೆಯೇ ಇದು ಕೂಡಾ ತುರ್ತು ಪರಿಸ್ಥಿತಿ ಅಥವಾ ಹೆದ್ದಾರಿ ಸಂಬಂಧಿತ ಪ್ರತಿಕ್ರಿಯೆಯನ್ನು ವರದಿ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಹೆದ್ದಾರಿಗಳಲ್ಲಿ ಆಂಬ್ಯುಲೆನ್ಸ್ ಮತ್ತು ಟೋವಿಂಗ್ ಸೇವೆಗಳಂತಹ ಅನೇಕ ತುರ್ತು ಸೇವೆಗಳೊಂದಿಗೆ ಅಧಿಕಾರಿಗಳು ಪಾಲುದಾರಿಕೆ ಹೊಂದಿದ್ದು, ಒಟ್ಟಿನಲ್ಲಿ ಸುರಕ್ಷಿತ ಚಾಲನೆಗಾಗಿ ಉದ್ದೇಶಕ್ಕಾಗಿ ಈ ಹೊಸ ಸೇವೆಗಳನ್ನು ಹೆದ್ದಾರಿ ಬಳಕೆದಾರರಾಗಿ ಲೋಕಾರ್ಪಣೆ ಮಾಡಲಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರು ಯಾವ ರೀತಿ ಸುರಕ್ಷಿತ ಚಾಲನೆ ಮಾಡಬೇಕು ಎಂಬುವ ಬಗ್ಗೆ ವಿಶೇಷ ಟ್ರೈನಿಂಗ್ ನೀಡುವ ಉದ್ದೇಶ ಕೂಡಾ ಹೊಂದಲಾಗಿದ್ದು, ಸದ್ಯದಲ್ಲೇ ಪ್ರತಿ ರಾಜ್ಯಕ್ಕೂ ಒಂದೊಂದು ಡ್ರೈವಿಂಗ್ ಟ್ರೈನಿಂಗ್ ಸೆಂಟರ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ.

Edited By

Reported By

Madhu shree

Comments