ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇರಲೇಬೇಕಾದ ಸರ್ಕಾರಿ ಆಪ್ ಗಳಿವು..!

07 Mar 2018 11:46 AM | General
353 Report

33 ರಾಜ್ಯಗಳು ಮತ್ತು ಕೇಂದ್ರ ಸರಕಾರದ ಇಲಾಖೆಗಳೂ ಸೇರಿದಂತೆ ಇಪಿಎಫ್‌ಓ, ಪಾನ್ ಕಾರ್ಡ್, ಪಾಸ್ಪೋರ್ಟ್ ಹೀಗೆ 162 ಸರಕಾರಿ ಸೇವೆಗಳನ್ನು ಪಡೆಯಬಹುದಾದ ಈ ' ಉಮಂಗ್' ಆಪ್ ಡಿಜಿ ಲಾಕರ್, ಕ್ಷಿಪ್ರ ತೆರಿಗೆ ಲೆಕ್ಕಾಚಾರ ವ್ಯವಸ್ಥೆ ಮತ್ತು ಭಾರತ್ ಬಿಲ್ ಪೇಮೆಂಟ್ ಸಿಸ್ಟಂಗಳನ್ನು ಸಹ ಒಳಗೊಂಡು ಭಾರತೀಯರಿಗೆ ವರವಾಗಿದೆ.

ನಾನಾ ಸೇವೆಗಳು ಒಂದೇ ಆಪ್ನಲ್ಲಿ ಸಿಗುವಂತಿದ್ದರೆ ಎಂದು ಹುಟ್ಟಿದ ಉಮಂಗ್ ಆಪ್ ಇಂದು ಜನರ ಸುರಕ್ಷತೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. ದೇಶದ ಎಲ್ಲಾ ಬಳಕೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಉಮಂಗ್ ಸೇವೆ ಲಭ್ಯವಿದೆ. ನಾಗರಿಕರ ಅನುಮಾನ ನಿವಾರಣೆಗಾಗಿ ಆಪ್ನಲ್ಲಿ ಲೈವ್ ಚಾಟ್ ವೈಶಿಷ್ಟ್ಯವಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಸರ್ಕಾರಿ ಆಪ್ಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ತಿಳಿಸಿಕೊಡಲು ಪ್ರಯತ್ನಿಸುತ್ತೇವೆ.

ಪ್ರಮುಖವಾಗಿ ಸರ್ಕಾರಿ ನೌಕರರ ಪ್ರಾವಿಡೆಂಟ್ ಫಂಡ್, ನಿವೃತ್ತಿ ಪಿಂಚಣಿ ಯೋಜನೆ, ಮೈ ಪ್ಯಾನ್ ಅಥವಾ ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ ಹಾಕಲು, ಡಿಜಿಲಾಕರ್, ಪಿಂಚಣಿದಾರರಿಗೆ ನೆರವಾಗುವ ಪೆನ್ಷನರ್ಸ್ ಪೋರ್ಟಲ್ ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ ವಿವರ ನೀಡುವ ಡಿಜಿ ಸೇವಕ್ ಎಲ್ಲವೂ ಈ ಆಪ್ ನಲ್ಲಿ ಅಡಕಗೊಂಡಿವೆ.

Edited By

Shruthi G

Reported By

Madhu shree

Comments