ಸದ್ಯದಲ್ಲೇ ರಾಜ್ಯದ ಜನರಿಗೆ ಸಿಗಲಿದೆ ಜನರಿಕ್ ಔಷಧ

06 Mar 2018 6:02 PM | General
431 Report

ಅನಾರೋಗ್ಯದಿಂದ ಬಳಲುವವರಿಗೆ ಕಡಿಮೆ ದರದಲ್ಲಿ ಔಷಧಿ ಸಿಗುವಂತೆ ಮಾಡಲು ಬೆಂಗಳೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯ ಪಾಲಿಕೆ ಆಸ್ಪತ್ರೆಗಳಲ್ಲಿ ಮತ್ತು ಇಂದಿರಾ ಕ್ಯಾಂಟೀನ್‍ಗಳಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲಿದೆ.

ಈಗಾಗಲೇ ಬೆಂಗಳೂರಿನ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಮೂಲಕ, ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುತ್ತಿರುವ ಮಹಾನಗರ ಪಾಲಿಕೆ ಇನ್ನುಮುಂದೆ ಬಡಜನರ ಅರೋಗ್ಯ ರಕ್ಷಣೆಗಾಗಿ ಇಂದಿರಾ ಕ್ಯಾಂಟೀನ್ ಮತ್ತು ಪಾಲಿಕೆಯ ಆಸ್ಪತ್ರೆಗಳಲ್ಲೂ ಜನರಿಕ್ ಔಷಧ ಕೇಂದ್ರಗಳನ್ನು ತೆರೆಯುವ ಮೂಲಕ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಬಡವರಿಗೆ ಔಷಧ ನೀಡಲು ಬಿಬಿಎಂಪಿ ಮುಂದಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಯೋಜನೆ, ಮಹತ್ವ ಪಡೆದಿದ್ದು, ಈಗಾಗಲೇ ಬಿಬಿಎಂಪಿ ಮಂಡಿಸಿದ ಬಜೆಟ್ ನಲ್ಲಿ ಹಲವಾರು ಸಾಮಾಜಿಕ, ಸುರಕ್ಷಿತ ಕಾರ್ಯಕ್ರಮಗಳನ್ನು ಘೋಷಿಸಿದೆ. ಅದರ ಭಾಗವಾಗಿ ಈಗ ಜನರಿಕೆ ಔಷಧ ಮಳಿಗೆಯನ್ನು ಬಿಬಿಎಂಪಿ ತೆರೆಯಲು ಮುಂದಾಗಿದೆ. ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಂದಿರಾ ಕ್ಯಾಂಟೀನ್ ನಲ್ಲಿ ಅಂದು ಮಹಿಳೆಯರಿಗೆ ಉಚಿತ ಊಟವನ್ನು ವಿತರಿಸಲಾಗುತ್ತಿದೆ.

Edited By

Shruthi G

Reported By

Madhu shree

Comments