ಮಂಚಕ್ಕೆ ಕರೆದಿದ್ದವನಿಗೆ ತಕ್ಕ ಪಾಠ ಕಲಿಸಿದ ಖ್ಯಾತ ನಟಿ...!

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನೆನ್ನೆ ಮೆನ್ನೆಯದಲ್ಲ ಹಿಂದಿನಿಂದಲ್ಲೂ ಮಹಿಳೆಯರು ಈ ಸಮಸ್ಯೆಯನ್ನುಎದುರಿಸುತ್ತ ಬಂದಿದ್ದಾರೆ. ಸಾಮಾನ್ಯ ಮಹಿಳೆಯರಿಗೆ ಮಾತ್ರವಲ್ಲ ದೊಡ್ಡ ದೊಡ್ಡ ಸ್ಟಾರ್ ನಟಿಯರು ಸಹ ಈ ಸಮಸ್ಯೆಗೆ ಒಳಗಾಗಿದ್ದಾರೆ.
ಅದರಲ್ಲಿ ಈ ನಟಿಯು ಒಬ್ಬರು, ಅಭಿಮಾನಿಗಳಿಂದ ದೇವಾಲಯವನ್ನು ಕಟ್ಟಿಸಿಕೊಂಡಿದ್ದ ನಟಿ ಖುಷ್ಬೂ ಅವರು ಜೀವನದಲ್ಲಿ ಕಹಿ ಘಟನೆಯೊಂದು ನಡೆದಿದೆ. ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿರುವ ಖುಷ್ಬೂ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ನಟನೊಬ್ಬ ಮಂಚಕ್ಕೆ ಆಹ್ವಾನಿಸಿದ್ದ ಆರೋಪ ಕೇಳಿ ಬಂದಿದೆ. 200 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಖುಷ್ಬೂ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ನಿರ್ದೇಶಕ ಸುಂದರ್ ಅವರನ್ನು ಮದುವೆಯಾಗಿದ್ದಾರೆ. ಹಿಂದೆ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ನಟರೊಬ್ಬರು ಹೊಂಚು ಹಾಕಿದ್ದರಂತೆ.
ಖುಷ್ಬೂ 18 ವರ್ಷದವರಾಗಿದ್ದಾಗ ತೆಲುಗಿನಲ್ಲಿ 'ಚಿನ್ನೋಡು ಪೆದ್ದೋಡು' ಚಿತ್ರದಲ್ಲಿ ಅಭಿನಯಿಸಿದ್ದು, ಆ ವೇಳೆಗಾಗಲೇ ದೊಡ್ಡ ಸ್ಟಾರ್ ಆಗಿದ್ದ ಚಂದ್ರಮೋಹನ್ ಮಂಚಕ್ಕೆ ಆಹ್ವಾನಿಸಿದ್ದ ಕಾರಣ ಖುಷ್ಬೂ ಪಾಠ ಕಲಿಸಿದ್ದರಂತೆ. ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ಅದರಲ್ಲಿಯೂ ಮಧ್ಯವಯಸ್ಸಿನಲ್ಲಿದ್ದ ನಟ ತನ್ನನ್ನು ಮಂಚಕ್ಕೆ ಕರೆದಿದ್ದರಿಂದ ಖುಷ್ಬೂ ಆಕ್ರೋಶಗೊಂಡಿದ್ದಾರೆ. ಚಂದ್ರಮೋಹನ್ ಕಾಟ ಜಾಸ್ತಿಯಾದಾಗ ಸೆಟ್ ಗೆ ಸಹೋದರನನ್ನು ಕರೆದುಕೊಂಡು ಹೋಗಿದ್ದಾರೆ. ನನ್ನ ತಮ್ಮನೊಂದಿಗೆ ನಿಮ್ಮ ಹೆಣ್ಣುಮಕ್ಕಳನ್ನು ಮಲಗಿಸಿ, ನೀವು ಹೇಳಿದಂತೆ ನಾನು ಸಹಕರಿಸುತ್ತೇನೆ ಎಂದು ಚಾಟಿ ಬೀಸಿದಂತೆ ಹೇಳಿದ್ದಾರೆ. ಇದರಿಂದಾಗಿ ಚಂದ್ರಮೋಹನ್ ದಿಕ್ಕೆಟ್ಟುಹೋಗಿದ್ದಾರೆ. ಆಗ ಅಲ್ಲಿದ್ದ ಚಿತ್ರತಂಡದವರು ವಿವಾದವನ್ನು ತಣ್ಣಗಾಗಿಸಿದ್ದರಂತೆ.
Comments