ಪರೀಕ್ಷಾ ಅಕ್ರಮ ತಡೆಗಾಗಿ ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿದ ತಪಾಸಕರು

05 Mar 2018 10:05 AM | General
547 Report

ಪರೀಕ್ಷಾ ಅಕ್ರಮ ತಡೆಗಾಗಿ ತಪಾಸಕರು ಅನೇಕ ರೀತಿಯಲ್ಲಿ ಅವರನ್ನು ಪರಿಶೀಲನೆಗೊಳಪಡಿಸುತ್ತಾರೆ.ಇದಲ್ಲದೆ ಈಗಾಗಲೇ ವಿದ್ಯಾರ್ಥಿಗಳಿಗೆ ಶೂ ಗಳನ್ನೂ ಹಾಕಿ ಕೊಂಡು ಬರುವಂತಿಲ್ಲ ಎಂಬ ನಿಯಮವನ್ನು ಆದೇಶಿಸಿದೆ. ಆದರೆ ಇಲ್ಲೋದು ಕಾಲೇಜಿನಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸುವಂತಿದೆ.

ಪರೀಕ್ಷಾ ಅಕ್ರಮ ತಡೆಗಾಗಿ ತಪಾಸಕರು ವಿದ್ಯಾರ್ಥಿನಿಯರ ಬಟ್ಟೆಬಿಚ್ಚಿಸಿ ಪರಿಶೀಲನೆಗೊಳಪಡಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರವೇ ದೂರು ದಾಖಲಿಸಿದ್ದಾರೆ. ಪುಣೆಯಲ್ಲಿನ ಎಂಐಟಿ ವಿಶ್ವಶಾಂತಿ ಗುರುಕುಲ ಶಾಲೆಗೆ ತಮ್ಮ ಪ್ರೌಢ ಶಿಕ್ಷಣ ಪ್ರಮಾಣಪತ್ರ(ಎಚ್‌ಎಸ್ಸಿ-12ನೇ ತರಗತಿ) ಪರೀಕ್ಷೆ ಬರೆಯಲು ಲೋನಿ ಕಾಲ್ಭೋರ್ನಲ್ಲಿರುವ ಪೃಥ್ವಿರಾಜ್ ಕಪೂರ್ ಜೂನಿಯರ್ ಕಾಲೇಜಿನ ಸುಮಾರು 219 ವಿದ್ಯಾರ್ಥಿಗಳು ಆಗಮಿಸಿದ್ದರು. ಇದರಲ್ಲಿ ಪರೀಕ್ಷಾ ಪ್ರವೇಶಕ್ಕೂ ಮುನ್ನ ತಪಾಸಕರು 80 ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿ ಪರಿಶೀಲನೆ ನಡೆಸಿದ್ದಾರೆ ಎಂಬುದು ವಿವಾದದ ಕೇಂದ್ರ ಬಿಂದು. ಈ ಸಂಬಂಧ ಇಬ್ಬರು ಮಹಿಳಾ ಸಿಬ್ಬಂದಿ ವಿರುದ್ಧದ ದೂರು ಸ್ವೀಕರಿಸಲಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Edited By

Shruthi G

Reported By

Madhu shree

Comments