ಕೈ ಜಾರಿ ಮೊಬೈಲ್ ಫೋನ್ ನೀರಿಗೆ ಬಿದ್ರೆ ಹೀಗೆ ಮಾಡಿ...!

28 Feb 2018 6:31 PM | General
624 Report

ಸಾಮಾನ್ಯವಾಗಿ ಬಳಸುವ ಸ್ಮಾರ್ಟ್ಫೋನ್ ಗಳು ವಾಟರ್ ಪ್ರೂಫ್ ಆಗಿರುವುದಿಲ್ಲ. ಅಂತಹ ಸ್ಮಾರ್ಟ್ಫೋನ್ ಗಳು ನೀರಿನಲ್ಲಿ ಬಿದ್ದರೆ ಅಯ್ಯೋ ಏನ್ಮಾಡೋದಪ್ಪಾ ಅಂತ ತಲೆ ಕೆಡಿಸ್ಕೊಬೇಡಿ ಅದಕ್ಕೆ ಪರಿಹಾರವಾಗಿ ಏನು ಮಾಡಬೇಕು ಅಂತ ಈ ಕೆಳಗೆ ಒಂದು ಉಪಾಯ ಕೊಟ್ಟಿದ್ದೇವೆ ನೋಡಿ.

* ಮೊಬೈಲ್ ಫೋನ್ ನೀರಿನಲ್ಲಿ ಬಿದ್ದ ತಕ್ಷಣ, ಮೊದಲು ಫೋನ್ ಬ್ಯಾಟರಿಯನ್ನು ತೆಗೆದು, ಮೊಬೈಲ್ನಲ್ಲಿ ನೀರಿನ ಅಂಶವಿರದ ರೀತಿಯಲ್ಲಿ ಸ್ವಚ್ಛಗೊಳಿಸಿ.

* ಇನ್ಬಿಲ್ಟ್ ಬ್ಯಾಟರಿ ಫೋನ್ ಆಗಿದ್ದರೆ, ಸಿಮ್ ಸ್ಲೋಟ್ ತೆಗೆದರೆ ಸಾಕು.

* ಮೊಬೈಲ್ ಫೋನ್ ನಲ್ಲಿರುವ ನೀರನ್ನು ಸ್ವಚ್ಛಗೊಳಿಸಿ, ಹೆಚ್ಚುವರಿ ನೀರನ್ನು ತೆಗೆದುಹಾಕಲು ನಿಮ್ಮ ಮೊಬೈಲ್ ಫೋನ್ ಅನ್ನು ಅಲ್ಲಾಡಿಸಿ.

* ಒಂದು ಪ್ಲ್ಯಾಸ್ಟಿಕ್ ಕವರ್ನಲ್ಲಿ ಅಕ್ಕಿಯನ್ನು ಹಾಕಿ, ಅದರೊಳಗೆ ಮೊಬೈಲ್ ಫೋನ್ ಹಾಕಿ ಪ್ಯಾಕ್ ಮಾಡಿ 2-3 ದಿನಗಳಕಾಲ ಇರಿಸಿ. ಹೀಗೆ ಮಾಡುವುದರಿಂದ ಮೊಬೈಲ್ ಫೋನ್ನಲ್ಲಿರುವ ತೇವಾಂಶವನ್ನು ಅಕ್ಕಿ ಹೀರಿಕೊಳ್ಳುತ್ತದೆ.

* 2-3 ದಿನಗಳ ನಂತರ ಮತ್ತೆ ಫೋನ್ನಿಂದ ತೆಗೆದ ಬ್ಯಾಟರಿ, ಮೆಮೊರಿ ಕಾರ್ಡ್, ಸಿಮ್ ಸ್ಲೋಟ್ ಅನ್ನು ಹಾಕಿ ಫೋನ್ ಆನ್ ಮಾಡಿ.

* ಹೀಗೆ ಮಾಡಿದ ನಂತರವೂ ಫೋನ್ ಆನ್ ಆಗದಿದ್ದರೆ, ಸರ್ವಿಸ್ ಸೆಂಟರ್ಗೆ ಭೇಟಿ ನೀಡಬೇಕಾಗುತ್ತದೆ.

ಮಾಡಬಾರದು -

* ಹೇರ್ ಡ್ರೈಯರ್ ಬಳಸಿ ಮೊಬೈಲ್ ಅನ್ನು ಒಣಗಿಸಬೇಡಿ.

* ಮೊಬೈಲ್ನಲ್ಲಿ ನೀರು ಹೋದಾಗ ಹೇಡ್ಫೋನ್, ಯುಎಸ್ಬಿ ಕೇಬಲ್ಗಳನ್ನು ಪ್ಲಗ್ ಮಾಡಬೇಡಿ.

* ನೀರು ಸೇರಿಕೊಂಡ ಸಾಧನವನ್ನು ಬೇರೆ ಸಾಧನದೊಂದಿಗೆ ಪ್ಲಗ್ ಮಾಡಬೇಡಿ.

* ನೀರು ಸೇರಿಕೊಂಡ ಸಾಧನದಿಂದ ತೇವಾಂಶವನ್ನು ತೆಗೆಯುವ ವಿಚಾರದಲ್ಲಿ ಮೊಬೈಲ್ ಅನ್ನು ಮೈಕ್ರೋವೇವ್ ನಲ್ಲಿ ಇರಿಸಬೇಡಿ.

 

 

Edited By

Shruthi G

Reported By

Madhu shree

Comments