ನಿದ್ರೆ ಬರುತ್ತಿಲ್ವಾ ಹಾಗಿದ್ರೆ ಹೀಗೆ ಮಾಡಿ ಥಟ್ಟಂತ ನಿದ್ರೆ ಬರುತ್ತೆ..!

27 Feb 2018 5:32 PM | General
1755 Report

ಇತ್ತಿಚ್ಚಿನ ಆಧುನೀಕರಣದ ಪರಿಣಾಮ ಹೆಚ್ಚು ಕೆಲಸದ ಒತ್ತಡ , ದೈನಂದಿನ ಜಂಜಾಟಗಳ ನಡುವೆ ನಿದ್ರೆ ಬರುವುದು ಕಷ್ಟಕರವೇ ಸರಿ. ಇದರಿಂದ ಜನ ನಿದ್ರೇನೆ ಬರಲ್ಲಾ ಎಂದು ರಾಗ ಎಳಿತಿರುತ್ತಾರೆ. ಮತ್ತೆ ಕೆಲವರು ಹಾಸಿಗೆಯ ಮೇಲೆ 2-3 ತಾಸು ಹೊರಳಾಡಿದ ನಂತ್ರ ನಿದ್ದೆ ಬರುತ್ತೆ ಅಂತ ಪೇಚಾಡುವವರೇ ಹೆಚ್ಚು. ಅಲ್ಲದೆ ಕಣ್ತುಂಬ ನಿದ್ದೆ ಮಾಡಿ ತುಂಬಾ ದಿನಗಳಾಯ್ತು ಅಂತ ಬೇಸರ ಪಡುತ್ತಾರೆ. ಇನ್ನು ರಾತ್ರಿ ಲೇಟ್ ಹಾಗೆ ಮಲಗಿದ್ರೆ ಬೆಳಗ್ಗೆ ಏಳಲು ಮನಸ್ಸೇ ಇರೋಲ್ಲ, ಅಲ್ಲದೆ ನಮ್ಮ ದೇಹ ನಮ್ಮ ಮಾತು ಕೇಳೋ ಸ್ಥಿತಿಯಲ್ಲಿ ಇರೋಲ್ಲ. ಇವೆಲ್ಲದರ ಪರಿಣಾಮದಿಂದ ಕೆಲಸದ ಸಮಯದಲ್ಲಿ ಸುಸ್ತು, ಏಕಾಗ್ರತೆ ಇಲ್ಲದಿರುವುದು ಇನ್ನು ಅನೇಕ ಮಾನಸಿಕ ತೊಂದರೆ ಎದುರಾಗುವುದು. ಇವೆಲ್ಲವನ್ನೂ ತಳ್ಳಿ ಹಾಕಲು ನಾವು ಕೊಡೊ ಟಿಪ್ಸ್ ನ್ನು ಅಳವಡಿಸಿಕೊಳ್ಳಿ ಸುಲಭವಾಗಿ ನಿದ್ರೆ ಬರೋದು ಖಂಡಿತ.

ಬೇಗ ನಿದ್ರೆಗೆ ಜಾರಲು ಇಲ್ಲಿದೆ ನೋಡಿ ಟಿಪ್ಸ್ :

 ನಮ್ಮ ಮೈಂಡ್ ಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಕೆಲಸದ ಒತ್ತಡವೇರಿರುವುದರಿಂದ ಮೈಂಡ್ ನ್ನು ಪ್ರಶಾಂತಗೊಳಿಸಲು ಮೈಂಡ್ ಫುಲ್ ಬ್ರಿತ್ ಇಂಗ್ ಎಕ್ಸಸೈಜ್ ಮಾಡಬೇಕು . ಈ ಎಕ್ಸಸೈಜ್ ಮಾಡುವುದರಿಂದ ನಿಮಿಷಗಳಲ್ಲಿ ನಿದ್ರೆಗೆ ಜಾರುವುದು ಖಂಡಿತ.

ಈ ಬ್ರಿತ್ ಇಂಗ್ ಎಕ್ಸಸೈಜ್ ಮಾಡುವುದು ಹೇಗೆ ? ಎಂದರೆ ಮಲಗುವ ಮುನ್ನ ಯೋಗ ಮ್ಯಾಟ್ ಅಥವಾ ಬೆಡ್ ಶೀಟ್ ನ್ನು ಹಾಸಿಕೊಂಡು ಹಾಸನದ ಸ್ಥಿತಿಯಲ್ಲಿ ಕುಳಿತು 7 - 8 ಬಾರಿ ಬ್ರಿತ್ ಇನ್ ಔಟ್ ಮಾಡಬೇಕು. ತದಾನಂತರ ನೋಡಿ ನಿಮ್ಮ ಮೈಂಡ್ ಪ್ರಶಾಂತತೆಯಿಂದ ಕೂಡಿರುತ್ತದೆ. ಅಲ್ಲದೆ ನಿಮ್ಮಲ್ಲಿದ್ದ ನಿದ್ರಾಹೀನತೆ ದೂರವಾಗುವುದಲ್ಲದೆ, ಮಾನಸಿಕ ಒತ್ತಡ, ಬೇಸರ ಬಳಲಿಕೆ, ಚಿಂತೆ, ಇವಲ್ಲದೆ ಹೇಳಲು ಆಗದ ಶಾರೀರಿಕ ತೊಂದರೆಗಳಿಂದ ದೂರ ಮಾಡಲು ಹಾಗು ಈ ಎಕ್ಸಸೈಜ್ ಯಿಂದ ರಿಲಾಕ್ಸ ಆದ ಅನುಭವ ಬರುತ್ತದೆ. ಈ ಟಿಪ್ಸ್ ಅನುಕರಿಸಿದರೆ  ಸಾಕು ನಿದ್ರಾ ಹೀನತೆ ದೂರವಾಗುತ್ತದೆ.        

Edited By

venki swamy

Reported By

Madhu Sree

Comments