ಬೇಸಿಗೆಯಲ್ಲಿ ಧರಿಸಿ ಎ.ಸಿ ಹೆಲ್ಮೆಟ್..!

26 Feb 2018 2:56 PM | General
555 Report

ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲು ಬೇಸರಪಟ್ಟುಕೊಳ್ಳುತ್ತಾರೆ, ತಮ್ಮ ಜೀವ ರಕ್ಷಣೆಗಾಗಿ ಅಲ್ಲದಿದ್ದರೂ ಪೋಲೀಸರ ಭಯದಿಂದಾದರೂ ಹೆಲ್ಮೆಟ್ ಧರಿಸುತ್ತಾರೆ. ಹೆಲ್ಮೆಟ್ ಧರಿಸಲು ವಾಹನ ಸವಾರರ ತಕರಾರು ನೂರೊಂದು. ಅದಕ್ಕಾಗಿಯೇ ಹೈದರಾಬಾದ್ ನ ಸ್ಟಾರ್ಟ್ ಅಪ್ ಕಂಪನಿಯೊಂದು ಎ ಸಿ ಹೆಲ್ಮೆಟ್ ನ್ನು ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ.

ಬೇಸಿಗೆಯಲ್ಲಿ ಹೆಲ್ಮೆಟ್ ಧರಿಸಲು ಕಷ್ಟಕರವಾದ್ದರಿಂದ ಇಂತಹ ತೊಂದರೆಯನ್ನು ದೂರ ಮಾಡಲು ಹೈದರಾಬಾದ್ ನ ಸ್ಟಾರ್ಟ್ ಅಪ್ ಕಂಪನಿಯೊಂದರ ಮೂವರು ಟೆಕ್ಕಿಗಳು ಇದನ್ನು ಅಭಿವೃದ್ಧಿ ಪಡಿಸಿದ್ದಾರೆ. ಹೈದರಾಬಾದ್ನ ಜಾರ್ಶ್ ನವೋದ್ಯಮವೊಂದು ಈ ಹೆಲ್ಮೆಟ್ ಅನ್ನು ಸಂಶೋಧಿಸಿದ್ದು, ರೀಚಾರ್ಜ್ ಮಾಡುವಂಥ ಬ್ಯಾಟರಿಯನ್ನು ಇದು ಒಳಗೊಂಡಿದೆ. ಈ ಬ್ಯಾಟರಿ ಬಳಸಿ 2 ರಿಂದ 8 ಗಂಟೆ ಹೆಲ್ಮೆಟ್ ಬಳಸಬಹುದಿದ್ದು, ತಂಪಿನ ಹಿತಾನುಭವವನ್ನು ಹೆಲ್ಮೆಟ್ ಮೂಲಕ ಬಳಕೆದಾರರು ಪಡೆಯಬಹುದಾಗಿದೆ.  ಈ ಚಾರ್ಜರ್ ಅನ್ನು ಮೊಬೈಲ್ ಫೋನ್ನಂತೆಯೇ ಚಾರ್ಜ್ ಮಾಡಬಹುದು. ಸುಲಭವಾಗಿ ಧರಿಸಬಹುದು, ಎಲ್ಲಕ್ಕೂ ಮುಖ್ಯವಾಗಿ ಹಗುರವಾಗಿದೆ. ಅಲ್ಲದೇ, ಕೂದಲು ಉದುರುವುದೂ ಸೇರಿದಂತೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಹೆಲ್ಮೆಟ್ ನ ದರ 5 ಸಾವಿರ ರೂ ಇರಲಿದೆ.. ನೌಕಾಪಡೆಯ ಕಮಾಂಡೊಗಳಿಗೆ ಮತ್ತು ಕೆಲವು ಕಂಪನಿಗಳಿಗೆ ನೀಡಲಾಗಿತ್ತು. ಟ್ರಾಫಿಕ್ ಪೊಲೀಸರಿಗೂ ವಿತರಿಸಲಾಗಿತ್ತು. ಬಳಕೆದಾರರ ಅಭಿಪ್ರಾಯ ಆಧರಿಸಿ, ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಿದ್ದೇವೆ. ವಿನ್ಯಾಸದಲ್ಲೂ ಬದಲಾವಣೆ ಮಾಡಿದ್ದೇವೆ. ಈಗ 3 ಸಾವಿರ ಹೆಲ್ಮೆಟ ಗಳನ್ನು ಉತ್ಪಾದಿಸಿದ್ದು, ಬಳಕೆದಾರರಿಗೆ ಹಿತ ನೀಡಲಿವೆ ಎಂದು ಕಂಪನಿ ಸಿಇಒ ಕೌಸ್ತುಬ್ ಕೌಂಡಿನ್ಯ ಹೇಳಿದ್ದಾರೆ.

 

 

Edited By

Shruthi G

Reported By

Madhu shree

Comments