26ಗಂಟೆಗಳ ಕಾಲ ಸ್ಥಗಿತಗೊಳ್ಳಲಿದೆ ನಮ್ಮ ಮೆಟ್ರೋ ಸಂಚಾರ ..?

24 Feb 2018 10:27 AM | General
424 Report

ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆಯಾಗಿದೆ ಯಾಕೆ ಎಂದರೆ ನಾವು ನಮ್ಮ ಮೆಟ್ರೋ ಕಾರಣ ಅಂತ ಹೇಳ್ತಿವಿ ಇತ್ತೀಚಿಗೆ ಬೆಂಗಳೂರಿನ ಬಹು ಜನರು ಮೆಟ್ರೋ ಸಂಚಾರವನ್ನೇ ಅವಲಂಬಿಸಿದ್ದಾರೆ.

ನಮ್ಮ ಮೆಟ್ರೋ ರೈಲುಗಳ ಯಾವ ಮಾರ್ಗದಲ್ಲಿ ನೋಡಿದರೂ, ಬಹುತೇಕ ಯಾವ ಸಮಯದಲ್ಲಿ ನೋಡಿದರೂ ತುಂಬಿ ತುಳುಕುತ್ತಿರುತ್ತದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಪಡೆಯಲು ಬೆಂಗಳೂರಿನ ಹಲವರು ಮೆಟ್ರೋ ಪ್ರಯಾಣದ ಮೊರೆ ಹೋಗಿದ್ದಾರೆ. ಒಂದು ದಿನ ಮೆಟ್ರೋ ಇಲ್ಲಾ ಅಂದ್ರೂ ಜನರಿಗೆ ಕಷ್ಟ ತಪ್ಪಿದ್ದಲ್ಲ. ಈಗ ನಮ್ಮ ಮೆಟ್ರೋದ ಕೆಲ ಮಾರ್ಗಗಳಲ್ಲಿ ಇವತ್ತು ರಾತ್ರಿ 9 ರಿಂದ ನಾಳೆ ರಾತ್ರಿ 11 ಗಂಟೆವರೆಗೆ ಸಂಚಾರ ಇರುವುದಿಲ್ಲ.

ಯಾವೆಲ್ಲಾ ರೂಟ್ ಬಂದ್ ಇಲ್ಲಿದೆ ಮಾಹಿತಿ

26 ಗಂಟೆ ಸ್ಥಗಿತಗೊಳ್ಳಲಿದೆ ಮೆಟ್ರೋ ಸಂಚಾರ

ಇಂದು ರಾತ್ರಿ 9ರಿಂದ ನಾಳೆ ರಾತ್ರಿ 11ರವರೆಗೆ ಸಂಚಾರ ಸ್ಥಗಿತ

ಆರ್.ವಿ ರಸ್ತೆ ಸ್ಟೇಷನ್​ನಿಂದ ಯಲಚೇನಹಳ್ಳಿ ಸ್ಟೇಷನ್ ಸಂಚಾರ ಸ್ಥಗಿತ

ಜೆ.ಪಿ ನಗರ, ಬನಶಂಕರಿ ಕಡೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ

ಸೋಮವಾರ ಬೆಳಗ್ಗೆ 5ರಿಂದ ಮೆಟ್ರೋ ಸಂಚಾರ ಪುನರಾರಂಭ

ತುರ್ತು ಟ್ರ್ಯಾಕ್ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತ

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್ ವ್ಯವಸ್ಥೆ


ಸಾರ್ವಜನಿಕರ ಗಮನಕ್ಕಾಗಿ ಬಿಎಂಆರ್​ಸಿಎಲ್, ಈ ಮಾಹಿತಿ ನೀಡಿದೆ.

Edited By

Shruthi G

Reported By

Madhu shree

Comments