ನಕಲಿ ಲೆಸೆನ್ಸ್ ತಡೆಗಟ್ಟಲು ಹೊಸ ಕ್ರಮ ಜಾರಿ..!!

08 Feb 2018 10:01 AM | General
334 Report

ನಕಲಿ ಲೈಸೆನ್ಸ್ ಗಳನ್ನು ತಡೆಗಟ್ಟಲು ಡ್ರೈವಿಂಗ್ ಲೈಸೆನ್ಸ್ (ಚಾಲನಾ ಪರವಾನಗಿ) ಅನ್ನು ಆಧಾರ್ ನಂಬರ್ ಜೊತೆ ಸಂಯೋಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸು ತ್ತಿದೆ. ಅಲ್ಲದೇ ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳನ್ನೂ ಒಳಗೊಂಡ ಸಾಫ್ಟ್ವೇರ್ ವೊಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಗೆ ಬುಧವಾರ ತಿಳಿಸಲಾಗಿದೆ.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕೋರ್ಟ್ ನೇಮಿಸಿದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾ. ಕೆ. ಎಸ್. ರಾಧಾಕೃಷ್ಣನ್ ಅವರ ಸಮಿತಿಯು ಸುಪ್ರೀಂಕೋರ್ಟ್ ಗೆ ಈ ಮಾಹಿತಿ ನೀಡಿದೆ. ಯಾರು ಕೂಡ ನಕಲಿ ಪರವಾನಗಿ ಪಡೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಮಿತಿ ಹೇಳಿದೆ.

 

Edited By

Shruthi G

Reported By

Madhu shree

Comments